ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಇದೇ ಜುಲೈ 28ರಂದು ರಿಲೀಸ್ ಆಗಲಿದ್ದು, ಸುದೀಪ್ ಅಭಿಮಾನಿಗಳಲ್ಲಿ ಈಗಾಗಲೇ ಸಂಭ್ರಮಾಚರಣೆ ಶುರುವಾಗಿದೆ. ಚಿತ್ರದ ಪ್ರಮೋಷನ್ ಕಾರ್ಯಕ್ರಮ ಇಂದು ಮುಂಬೈನಲ್ಲಿ ನಡೆದಿದ್ದು, ಇದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಭಾಗಿಯಾಗಿದ್ದರು.
ಕಾರ್ಯಕ್ರಮದ ವೇಳೆ ಇಬ್ಬರು ನಾಯಕರು ಸೌತ್ ವರ್ಸಸ್ ಬಾಲಿವುಡ್ ಇಂಡಸ್ಟ್ರೀ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದೀಪ್ ಮಾತನಾಡಿ, ಇದರ ಬಗ್ಗೆ ಹೆಚ್ಚಿಗೆ ಏನು ಹೇಳಲ್ಲ. ಜೊತೆಗೆ ಅದನ್ನೆಲ್ಲ ಸಾಮಾನ್ಯೀಕರಿಸಲು ಬಯಸುವುದಿಲ್ಲ. ಈಗಾಗಲೇ ಅನೇಕ ಚಿತ್ರಗಳು ಬಂದು ಹೋಗಿವೆ. ಪ್ರತಿ ಚಿತ್ರವೂ ಉತ್ತಮವಾಗಿ ಕೆಲಸ ಮಾಡಿರುತ್ತದೆ.
ಕೆಲವೊಂದು ಚಿತ್ರಗಳು ಚೆನ್ನಾಗಿರುತ್ತವೆ. ಒಂದೆರಡು ಚಿತ್ರಗಳು ಇರಲ್ಲ. ಇದನ್ನ ಸಾಮಾನ್ಯೀಕರಿಸಲು ಎಲ್ಲರೂ ಹೋಗುತ್ತಾರೆ. ಜೊತೆಗೆ ಪ್ರಾಬಲ್ಯ ಸಾಧಿಸುತ್ತಿವೆ ಎಂದು ಹೇಳುತ್ತೇವೆ. ಎಲ್ಲದಕ್ಕೂ ಒಳ್ಳೆಯ ಸಮಯ ಇರುತ್ತದೆ. ಹಿಂದಿ ಚಲನಚಿತ್ರೋದ್ಯಮ ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ ಮತ್ತು ಹಿಂದಿ ಚಿತ್ರರಂಗ ಉತ್ತಮ ವ್ಯಕ್ತಿಗಳನ್ನ ಹೊಂದಿಲ್ಲದಿದ್ದರೆ ಇಷ್ಟು ವರ್ಷಗಳ ಕಾಲ ಹೇಗೆ ಉಳಿಸಿಕೊಳ್ಳುತ್ತೀರಿ? ವಿರಾಟ್ ಕೊಹ್ಲಿ ಸ್ವಲ್ಪ ಸಮಯದವರೆಗೆ ಫಾರ್ಮ್ನಿಂದ ಹೊರಗುಳಿದಂತೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.