ಕರ್ನಾಟಕ

karnataka

ETV Bharat / entertainment

ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆ.. ಕಾತರಕ್ಕೆ ಕೊನೆಗೂ ತೆರೆ - ಸುದೀಪ್​ ಅಭಿನಯದ ವಿಕ್ರಾಂತ್​ ರೋಣ ಸಿನಿಮಾ

ನಿನ್ನೆಯಷ್ಟೇ ಸ್ಯಾಂಡಲ್ ವುಡ್ ಸ್ಟಾರ್​​​ಗಳಾದ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಯೋಗರಾಜ್ ಭಟ್ ಅವರು ತ್ರಿಡಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಟ್ರೈಲರ್ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ಧೂಳೆಬ್ಬಿಸಿದೆ.

ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆ
ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆ

By

Published : Jun 23, 2022, 7:06 PM IST

ಕನ್ನಡ ಸಿನಿಮಾ ರಂಗ ಮಾತ್ರ ಅಲ್ಲದೇ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ನಿನ್ನೆಯಷ್ಟೇ ಸ್ಯಾಂಡಲ್ ವುಡ್ ಸ್ಟಾರ್​​​ಗಳಾದ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ನಿರ್ದೇಶಕ ಇಂದ್ರಜಿತ್ ಲಂಕೇಶ್,ಯೋಗರಾಜ್ ಭಟ್ ಅವರು ತ್ರಿಡಿಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸೌಥ್​ ಸಿನಿಮಾ ಇಂಡಸ್ಟ್ರಿಯ ನಾಲ್ಕು ಜನ ನಟರು ಕಿಚ್ಚನ ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ರಾಮ್ ಚರಣ್ ತೇಜಾ, ಮಲೆಯಾಳಂನಲ್ಲಿ ದುಲ್ಕಾರ್ ಸಲ್ಮಾನ್, ತಮಿಳಿನಲ್ಲಿ ಧುನುಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್​​ನ್ನ ಬಿಡುಗಡೆ ಮಾಡಿದ್ದಾರೆ.

ಸದ್ಯ ಅನಾವರಣ ಆಗಿರೋ ಟ್ರೈಲರ್ ಒಂದು ಮಾಯಾ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಸುದೀಪ್ ಪಾತ್ರ ಏನು ಎನ್ನುವುದು ಟ್ರೈಲರ್‌ನಲ್ಲಿ ರಿವೀಲ್ ಆಗಿದೆ. ಜೊತೆಗೆ ಸುದೀಪ್ ಬಗ್ಗೆ ಈ ಟ್ರೈಲರ್ ಹೊಸ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ನಟ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುಳಿವನ್ನು ಇದು ನೀಡಿದೆ.

ಇಲ್ಲಿತನಕ ಸುದೀಪ್ ಜೊತೆಗೆ ವಿಕ್ರಾಂತ್ ರೋಣ ಚಿತ್ರದಲ್ಲಿ ಎದುರಾಳಿ ಖಳನಾಯಕ ಯಾರು ಎನ್ನುವುದನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಹಾಗಾಗಿ ಸುದೀಪ್ ವಿರುದ್ಧ ಕಾದಾಡುವುದು ಸುದೀಪ್ ಅವ್ರೆನಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ರಂಗಿತರಂಗ ಸಿನಿಮಾ ಖ್ಯಾತಿಯ ಅನೂಪ್ ಭಂಡಾರಿ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಡೇವಿಡ್ ವಿಲಿಯಂ ಕ್ಯಾಮರಾ ವರ್ಕ್, ಕಲಾ ನಿರ್ದೇಶಕ ಶಿವಕುಮಾರ್ ಕೈಚಳಕ ಹಾಗು ಅಜನೀಶ್ ಲೋಕನಾಥ್ ಸಂಗೀತ ಇದ್ದು, ವಿಕ್ರಾಂತ್ ರೋಣ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದ್ಧೂರಿ ವೆಚ್ಚದಲ್ಲಿ ಜಾಕ್ ಮಂಜು ಹಾಗು ಅಲಂಕಾರ್ ಪಾಂಡಿಯನ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಜುಲೈ 28ಕ್ಕೆ ವಿಶ್ವದಾದ್ಯಾಂತ ವಿಕ್ರಾಂತ್ ರೋಣ ಸಿನಿಮಾ ಬೆಳ್ಳಿ ತೆರೆ ಮೇಲೆ ಅಬ್ಬರಿಸಲಿದೆ.

ಇದನ್ನೂ ಓದಿ:ಮೂಲ ಬೃಂದಾವನದ ಬಗ್ಗೆ ಚರ್ಚೆ: ವಿವಾದದ ಕೇಂದ್ರಬಿಂದುವಾದ ಕಾಗಿಣಾ ನದಿ ತಟದ ಉತ್ತರಾದಿ ಮಠ

ABOUT THE AUTHOR

...view details