ತೆಲುಗು ಚಿತ್ರರಂಗದಲ್ಲಿ ಮಹೇಶ್ ಬಾಬು ಅವರ ಕ್ರೇಜ್ ಅಷ್ಟಿಷ್ಟಲ್ಲ ಬಿಡಿ.. ಇತ್ತೀಚೆಗಷ್ಟೇ ‘ಸರ್ಕಾರಿ ವಾರಿ ಪಾಟ’ ಚಿತ್ರದ ಮೂಲಕ ಉತ್ತಮ ಯಶಸ್ಸು ಕಂಡರು. ಮಹೇಶ್ ಬಾಬು ಸದ್ಯ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಮುಗಿದ ನಂತರ ಎಸ್ಎಸ್ ರಾಜಮೌಳಿ ನಿರ್ದೇಶನದ ಆ್ಯಕ್ಷನ್ ಮತ್ತು ಅಡ್ವೆಂಚರ್ ಕಥೆಯಲ್ಲಿ ನಟಿಸಲಿದ್ದಾರೆ.
ಈ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಈಗಾಗಲೇ ಕಾಯುತ್ತಿದ್ದಾರೆ. ಆಫ್ರಿಕನ್ ಕಾಡುಗಳಲ್ಲಿ ನಡೆಯುವ ಈ ಸಿನಿಮಾದ ಕಥೆಯನ್ನು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸಿದ್ಧಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಮಹೇಶ್ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.
ಮಹೇಶ್ ಅವರಂತಹ ನಟನಿಗೆ ಕಥೆ ಬರೆಯಲು ಅನೇಕ ಬರಹಗಾರರು ಯೋಚಿಸುತ್ತಾರೆ. ಮಹೇಶ್ ಬಾಬು ಇಂಟನ್ಸಿಟಿ ಹೊಂದಿರುವ ನಟ. ಅವರು ನಟಿಸಿದ ಸಾಹಸ ದೃಶ್ಯಗಳಲ್ಲಿ ಸಾಕಷ್ಟು ತೀವ್ರತೆ ಕಾಣಬಹುದು ಎಂದು ರಾಜಮೌಳಿ ತಂದೆ ಹೇಳಿದರು.
ಸಾಹಸಮಯ ಕಥೆಯನ್ನು ತೆರೆಗೆ ತರಬೇಕು ಎಂದು ರಾಜಮೌಳಿ ಬಹಳ ದಿನಗಳಿಂದ ಬಯಸಿದ್ದರು. ಈ ಕಥೆಗೆ ಮಹೇಶ್ ಪರ್ಫೆಕ್ಟ್ ಆಗಿದ್ದರಿಂದ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೇನೆ. ನಾವು ಈ ಚಿತ್ರವನ್ನು ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಚಿತ್ರೀಕರಿಸಲು ಬಯಸಿದ್ದೇವೆ. ಮುಂದಿನ ವರ್ಷ ಜೂನ್ ವೇಳೆಗೆ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ಮಹೇಶ್ ಬಾಬು ಅಭಿಮಾನಿಗಳಿಗೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸಿಹಿ ಸುದ್ದಿ ನೀಡಿದರು.
ಓದಿ:ರಾಜಸ್ಥಾನದ ಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನ್ಸಿಕಾ ಮೋಟ್ವಾನಿ: ಮದುವೆ ವಿಡಿಯೋ