ಕರ್ನಾಟಕ

karnataka

ETV Bharat / entertainment

ಒಟ್ಟಿಗೆ ಕಾಣಿಸಿಕೊಂಡ ರೂಮರ್ ಲವ್​ ಬರ್ಡ್ಸ್​ ವಿಜಯ್ ವರ್ಮಾ ತಮನ್ನಾ ಭಾಟಿಯಾ - ​ ವಿಜಯ್ ವರ್ಮಾ

​ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಒಟ್ಟಾಗಿ ಕಾಣಿಸಿಕೊಂಡ ಹಿನ್ನೆಲೆ ಡೇಟಿಂಗ್​​ ವದಂತಿಗೆ ರೆಕ್ಕೆ ಪುಕ್ಕ ಬಂದಿದೆ.

Vijay Varma Tamannaah Bhatia
​ ವಿಜಯ್ ವರ್ಮಾ ತಮನ್ನಾ ಭಾಟಿಯಾ

By

Published : Apr 25, 2023, 4:33 PM IST

ಸಿನಿಮಾ ರಂಗ ರೂಮರ್​ ಲವ್​ ಬರ್ಡ್ಸ್​ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ತಮ್ಮ ಸಂಬಂಧವನ್ನು ಮರೆಮಾಡುವ ಮನಸ್ಥಿತಿಯಲ್ಲಿಲ್ಲ. ಸೋಮವಾರ ರಾತ್ರಿ ಮುಂಬೈನಲ್ಲಿ ಈ ವದಂತಿಯ ಪ್ರೇಮ ಪಕ್ಷಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಭೋಜನದ ನಂತರ ರೆಸ್ಟೋರೆಂಟ್​ ಹೊರಗೆ ಕಾಣಿಸಿಕೊಂಡಿದ್ದು, ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಈ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಭೋಜನದ ನಂತರ ತಮನ್ನಾ ಮತ್ತು ವಿಜಯ್ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಿರುವ ವಿಡಿಯೋವನ್ನು ಪಾಪರಾಜಿಯೋರ್ವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಉತ್ಸಾಹದಿಂದ ಈ ಜೋಡಿಯ ವಿಡಿಯೋ ರೆಕಾರ್ಡ್ ಮಾಡುವುದನ್ನು ಗಮನಿಸಿದರೂ ದಂಪತಿ ಮಾತ್ರ ಚಿಲ್, ರಿಲ್ಯಾಕ್ಸ್ ಮೂಡ್‌ನಲ್ಲಿ ಕಂಡುಬಂದರು. ಇಬ್ಬರೂ ಕಾರಿನಲ್ಲಿ ಒಟ್ಟಿಗೆ ಹೊರಟಿದ್ದ ವೇಳೆ ಪಾಪರಾಜಿಗಳತ್ತ ಕೈ ಬೀಸಿದರು.

ತಮನ್ನಾ ಮತ್ತು ವಿಜಯ್ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಶೇರ್​ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಶುರು ಹಚ್ಚಿಕೊಂಡರು. ವಿಜಯ್​​ ವರ್ಮಾ ಟ್ರೋಲ್​​ಗೆ ಒಳಗಾದರು. ಸೌತ್​ ಸುಂದರಿ ಜೊತೆ ಡೇಟಿಂಗ್ ಮಾಡಿದ್ದಕ್ಕಾಗಿ ನಟನನ್ನು ಅಪಹಾಸ್ಯ ಮಾಡಲಾಯಿತು. ವಿಜಯ್‌ ಅವರನ್ನು ಕೆಣಕಿದ ಕೆಲ ಸಾಮಾಜಿಕ ಬಳಕೆದಾರರು, "ನಂಬಲಾಗುತ್ತಿಲ್ಲ. ನಟಿ ನಟನಿಗೆ ಹೌದು ಎಂದು ಹೇಳಿದ್ರಾ?" ಎಂದು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು, "ಕಲಿಯುಗ ಅಣ್ಣಾ, ಏನು ಬೇಕಾದರು ಆಗಬಹುದು" ಎಂದು ಹೇಳಿದರು.

ವಿಜಯ್ ಮತ್ತು ತಮನ್ನಾ ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗಳಿಗೆ ತಕ್ಷಣ ಪ್ರತಿಕ್ರಿಯಿಸಿದರು. ಅಭಿಮಾನಿಯೊಬ್ಬರು, "ಏನೇ ಆದರು ಈ ಜೋಡಿ ನಮ್ಮ ಫೇವರಿಟ್​" ಎಂದು ಬರೆದಿದ್ದಾರೆ. ಮತ್ತೊಬ್ಬರು "ಅವರು ಉತ್ತಮ ಮತ್ತು ನಿಜವಾಗಿಯೂ ಪ್ರೀತಿಸುತ್ತಿರುವಂತೆ ಕಾಣುತ್ತಾರೆ" ಎಂದು ಹೇಳಿದರು. ಅಭಿಮಾನಿಯೊಬ್ಬರು ತಮನ್ನಾ ಅವರ ಆಯ್ಕೆಯನ್ನು ಶ್ಲಾಘಿಸಿದರು, "ಅವರು ಉತ್ತಮ ಅಭಿರುಚಿಯನ್ನು ಹೊಂದಿದ್ದಾರೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ:ಚುನಾವಣಾ ಅಖಾಡದಲ್ಲಿ ಆ್ಯಕ್ಷನ್ ಪ್ರಿನ್ಸ್: ನಿಖಿಲ್ ಕುಮಾರ​​ಸ್ವಾಮಿ ಪರ ಧ್ರುವ ಸರ್ಜಾ ಪ್ರಚಾರ

ವಿಜಯ್ ಮತ್ತು ತಮನ್ನಾ ಕಳೆದ ಡಿಸೆಂಬರ್‌ ಕೊನೆಯಲ್ಲಿ, ಹೊಸ ವರ್ಷಾಚರಣೆ ಪಾರ್ಟಿ ವೇಳೆ ಸುದ್ದಿಯಾಗಿದ್ದರು. ಅವರ ಚುಂಬನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ನೆಟ್‌ಫ್ಲಿಕ್ಸ್‌ನ ಬಹು ನಿರೀಕ್ಷಿತ ಲಸ್ಟ್ ಸ್ಟೋರೀಸ್ 2ರಲ್ಲಿ ತೆರೆ ಹಂಚಿಕೊಂಡಿದ್ದಾರೆ. ಹೀಗೆ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್​ ವದಂತಿಗಳಿಗೆ ಪುಷ್ಠಿ ನೀಡುತ್ತಿದ್ದಾರೆ.

ಇದನ್ನೂ ಓದಿ:ಹಾಲಿವುಡ್​​ನಲ್ಲಿ ಅವಕಾಶ ಕೊಡಿಸುತ್ತೇವೆಂದು ಹೇಳಿ ನಟಿಗೆ ವಂಚನೆ ಆರೋಪ: ಇಬ್ಬರು ಅರೆಸ್ಟ್!

ನ್ಯೂ ಇಯರ್​ ಪಾರ್ಟಿ ಸಂದರ್ಭ ಗೋವಾದ ರೆಸ್ಟೋರೆಂಟ್​ ಒಂದರಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಕಿಸ್​ ಮಾಡಿದ್ದರು. ಆ ಸಂದರ್ಭ ಈ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಬಳಿಕ ಕೆಲ ಸಿನಿಮಾ ಈವೆಂಟ್​ಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡರು. ಲಸ್ಟ್ ಸ್ಟೋರೀಸ್ 2ರಲ್ಲೂ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಈ ಹಿನ್ನೆಲೆ ಜೋಡಿಯ ಡೇಟಿಂಗ್​ ವದಂತಿ ಜೋರಾಗಿಯೇ ಹರಡುತ್ತಿದೆ.

ABOUT THE AUTHOR

...view details