ವೂಲ್ಫ್ ಕನ್ನಡ ಅಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗೋದಿಕ್ಕೆ ಸಜ್ಜಾಗಿರೋ ಸಿನಿಮಾ. H20 ಹಾಗೂ 123 ಆದಮೇಲೆ ಹಲವು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ನಟ ಪ್ರಭುದೇವ ಬಂದಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಆಗಿ ಹೊರ ಹೊಮ್ಮಿರುವ ಪ್ರಭುದೇವ ಲಕ್ಕಿಮ್ಯಾನ್ ಚಿತ್ರದಿಂದ ಮುಖಾಂತರ ಮತ್ತೆ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು.
ಸದ್ಯ ವೂಲ್ಫ್ ಸಿನಿಮಾದ ಚಿತ್ರೀಕರಣ ಮುಗಿಸಿರೋ ಪ್ರಭುದೇವ ಚಿತ್ರಕ್ಕೆ ಇದೀಗ ಮತ್ತೊಬ್ಬ ಕಾಲಿವುಡ್ ಸ್ಟಾರ್ ನಟ ಈ ಚಿತ್ರದಲ್ಲಿ ಜೊತೆಯಾಗಿದ್ದಾರೆ. ಅಷ್ಟಕ್ಕೂ ಆ ನಟ ಯಾರು ಅಂತೀರಾ? ತನ್ನ ವಿಭಿನ್ನ ರೀತಿ ನಟನೆಯಿಂದ ಸಿನಿಮಾಗಳಲ್ಲಿ ಗುರುತಿಸಿಕೊಳ್ಳುವ (ಮಕ್ಕಳ್ ಸೆಲ್ವನ್) ವಿಜಯ್ ಸೇತುಪತಿ ವೂಲ್ಫ್ ಚಿತ್ರದ ಭಾಗವಾಗಿದ್ದಾರೆ. ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರುವ ವಾಲ್ಫ್ ಚಿತ್ರದ ಸ್ಪೆಷಲ್ ಹಾಡುವೊಂದನ್ನು ನಟ ವಿಜಯ್ ಸೇತುಪತಿ ಹಾಡುವ ಮೂಲಕ ಈ ಚಿತ್ರ ತಂಡದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ವಿಜಯ್ ಸೇತುಪತಿ ಈ ಹಾಡನ್ನು ಹಾಡಿದ್ದು, ಸಂಗೀತ ನಿರ್ದೇಶಕ ಅಂಬರೀಶ್ ಈ ಸಿನಿಮಾಗೆ ಮ್ಯೂಜಿಕ್ ನೀಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿ ಗೆಳೆಯ ಪ್ರಭುದೇವ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ಅಭಿನಯ ಮಾಡಿರೋ ಪ್ರಭುದೇವ, ಶಿವರಾಜ್ ಕುಮಾರ್ ಜೊತೆ ಒಂದು ಸಿನಿಮಾ ಮಾಡುತ್ತ ಇದ್ದಾರೆ. ಇದೀಗ ವಿಜಯ್ ಸೇತುಪತಿ ಈ ಚಿತ್ರಕ್ಕೆ ಹಾಡಿರೋದು ಚಿತ್ರತಂಡದ ಕಾನ್ಫಿಡೆನ್ಸ್ ಮತ್ತಷ್ಟು ಹೆಚ್ಚಿಸಿದೆ.