ಕರ್ನಾಟಕ

karnataka

ETV Bharat / entertainment

ಪುಷ್ಪ 2 ನಲ್ಲಿ ವಿಜಯ್​ ಸೇತುಪತಿ ಅಭಿನಯಿಸುವ ವದಂತಿಗೆ ತೆರೆ - ವಿಜಯ್ ಸೇತುಪತಿ ವಿಲನ್

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಮುಖ್ಯಭೂಮಿಕೆಯಲ್ಲಿರುವ ಬ್ಲಾಕ್​ಬಸ್ಟರ್​ ತೆಲುಗು ಚಿತ್ರ ಪುಷ್ಪ: ದಿ ರೈಸ್‌ನ ಸೀಕ್ವೆಲ್‌ಗೆ ವಿಜಯ್ ಸೇತುಪತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು.

Allu Arjun and Vijay Sethupati
ಅಲ್ಲು ಅರ್ಜುನ್​ ಮತ್ತು ವಿಜಯ್​ ಸೇತುಪತಿ

By

Published : Aug 14, 2022, 7:41 PM IST

ಚೆನ್ನೈ (ತಮಿಳುನಾಡು):ನಿರ್ದೇಶಕ ಸುಕುಮಾರ್ ಅವರ ಪುಷ್ಪ 2 ಚಿತ್ರದಲ್ಲಿ ನಟ ವಿಜಯ್ ಸೇತುಪತಿ ವಿಲನ್​ ಆಗಿ ನಟಿಸುತ್ತಾರೋ ಇಲ್ಲವೋ ಎಂಬ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ. ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯಿಸಿರುವ, ನಿರ್ದೇಶಕ ಅಟ್ಲೀ ಅವರ ಜವಾನ್ ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ನಟಿಸುತ್ತಿದ್ದಾರೆ. ಆದರೆ ಯಾವುದೇ ತೆಲುಗು ಚಿತ್ರಗಳಲ್ಲಿ ನಕಾರಾತ್ಮಕ ಪಾತ್ರವನ್ನು ನಿರ್ವಹಿಸುತ್ತಿಲ್ಲ ಎಂದು ನಟನ ಆಪ್ತ ಮೂಲವೊಂದು ತಿಳಿಸಿದೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಮುಖ್ಯಭೂಮಿಕೆಯಲ್ಲಿರುವ ಬ್ಲಾಕ್​ಬಸ್ಟರ್​ ತೆಲುಗು ಚಿತ್ರ ಪುಷ್ಪ: ದಿ ರೈಸ್‌ನ ಸೀಕ್ವೆಲ್‌ಗೆ ವಿಜಯ್ ಸೇತುಪತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಈ ಹಿಂದೆ ವರದಿ ಆಗಿತ್ತು.

ಈ ಹಿಂದೆ ಸಂದರ್ಶನವೊಂದರಲ್ಲಿ ನಿರ್ದೇಶಕ ಸುಕುಮಾರ್ ಅವರು ಪುಷ್ಪಾ: ದಿ ರೂಲ್‌ಗಾಗಿ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ. ಆದರೆ ಅವುಗಳನ್ನು ಮರು ಹೊಂದಿಸಬೇಕಾಗಿದೆ. ನಾನು ಸಂಪೂರ್ಣ ಚಿತ್ರವನ್ನು ಶೂಟ್ ಮಾಡಬೇಕಾಗಿದೆ. ಡಿಸೆಂಬರ್ 16, 2022 ರಂದು ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ಇದನ್ನೂ ಓದಿ:ಮಾನ್ಸೂನ್ ರಾಗ ಬಿಡುಗಡೆ ದಿನಾಂಕ ಮುಂದೂಡಿಕೆ.. ಅಭಿಮಾನಿಗಳಿಗೆ ನಿರಾಸೆ

ABOUT THE AUTHOR

...view details