ಕರ್ನಾಟಕ

karnataka

ETV Bharat / entertainment

ಗನ್ಸ್ ಆ್ಯಂಡ್​​ ರೋಸಸ್ ಸಿನಿಮಾ ಸಾಂಗ್​​​ಗೆ ದನಿಯಾದ ಸ್ಟಾರ್ ಸಿಂಗರ್ ವಿಜಯ್​​ ಪ್ರಕಾಶ್ - Vijay Prakash

ಗನ್ಸ್ ಆ್ಯಂಡ್​​ ರೋಸಸ್ ಸಿನಿಮಾದ ಹಾಡೊಂದನ್ನು ಖ್ಯಾತ ಗಾಯಕ ವಿಜಯ್​​ ಪ್ರಕಾಶ್ ಹಾಡಿದ್ದಾರೆ.

Vijay Prakash song for guns and Roses movie
ಗನ್ಸ್ ಆ್ಯಂಡ್​​ ರೋಸಸ್ ಸಿನಿಮಾ ಸಾಂಗ್​​​ಗೆ ದನಿಯಾದ ಸ್ಟಾರ್ ಸಿಂಗರ್ ವಿಜಯ್​​ ಪ್ರಕಾಶ್

By ETV Bharat Karnataka Team

Published : Oct 4, 2023, 12:09 PM IST

ಕನ್ನಡ ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಾಂಗ್​​ಗಳಿಗೆ ಧ್ವನಿಯಾಗಿರೋ ಕನ್ನಡದ ಸ್ಟಾರ್ ಸಿಂಗರ್ ಅಂದ್ರೆ ಅದು ವಿಜಯ್ ಪ್ರಕಾಶ್. ತಮ್ಮ ಅಮೋಘ ಕಂಠಸಿರಿಯಿಂದ ವಿಶ್ವದಾದ್ಯಂತ ಜನಪ್ರಿಯರಾಗಿರುವ ಗಾಯಕ ವಿಜಯ್ ಪ್ರಕಾಶ್ ಅವರೀಗ ಗನ್ಸ್ ಆ್ಯಂಡ್ ರೋಸಸ್ ಚಿತ್ರದ ಹಾಡೊಂದನ್ನು ‌ಹಾಡಿದ್ದಾರೆ.

ಹೊಸಬರ ಸಿನಿಮಾಗೆ ವಿಜಯ್ ಪ್ರಕಾಶ್ ಸಾಥ್​​:ಶರಣ್ ಕುಮಾರ್ ಅವರು ಬರೆದಿರುವ ''108ಗೆ ಫೋನ್ ಮಾಡೋ ಶಿಷ್ಯ, ಸಾವು ಬದುಕಿನ ಮಧ್ಯೆ ಹೋರಾಡೋ ವಿಷ್ಯ" ಎಂಬ ಹಾಡನ್ನು ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಅವರು ಹಾಡಿದ್ದು, ಇತ್ತೀಚೆಗೆ ಹೊಸಕೆರೆಹಳ್ಳಿಯ ದ್ವಾರ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಯಿತು.

ಗನ್ಸ್ ಆ್ಯಂಡ್​​ ರೋಸಸ್ ತಂಡದೊಂದಿಗೆ ವಿಜಯ್​​ ಪ್ರಕಾಶ್

ಗನ್ಸ್ ಆ್ಯಂಡ್ ರೋಸಸ್ ಚಿತ್ರತಂಡ: ರಾಜಕೀಯದಲ್ಲಿ ಸಕ್ರಿಯರಾಗಿರುವ ಉದ್ಯಮಿ ಹೆಚ್ ಆರ್ ನಟರಾಜ್ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಹೆಚ್ ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಜವಾಬ್ದಾರಿ ಶರತ್ ಎಸ್ ಅವರದ್ದು. ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಚಿತ್ರೀಕರಣ ಚುರುಕು: ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ನಾಯಕ ನಟಿ ಯಶ್ಚಿಕ ನಿಷ್ಕಲ. ಶೋಭ್ ರಾಜ್, ಅವಿನಾಶ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್ ಸೇರಿದಂತೆ ಅನೇಕರು ಚಿತ್ರದ ತಾರಾ ಬಳಗದಲ್ಲಿದ್ದಾರೆ‌. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್​​ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಗನ್ಸ್ ಆ್ಯಂಡ್​​ ರೋಸಸ್ ತಂಡದೊಂದಿಗೆ ವಿಜಯ್​​ ಪ್ರಕಾಶ್

ಇದನ್ನೂ ಓದಿ:"ಇಟ್ಸ್​ ಬೇಬಿ ಗರ್ಲ್"​!: ತಂದೆ ತಾಯಿಯಾದ ಖುಷಿಯಲ್ಲಿ ಬಿಗ್​ ಬಾಸ್​ 9ರ ಜೋಡಿ ಕೀತ್ ಸಿಕ್ವೇರಾ- ರೋಚೆಲ್ ರಾವ್

ಅರ್ಜುನ್ ಚೊಚ್ಚಲ ಚಿತ್ರ.. ಚಿತ್ರರಂಗ ಎಂಬ ಬಣ್ಣದ ಲೋಕಕ್ಕೆ ಪ್ರತಿ ದಿನ ಹೊಸಬರ ಆಗಮನ ಆಗುತ್ತದೆ. ಪ್ರತಿಭೆ, ಶ್ರಮದ ಜೊತೆ ಅದೃಷ್ಟ ಕೈ ಹಿಡಿದರೆ ಬಂದವರ ಪೈಕಿ ಕೆಲವರು ಇದೇ ಗ್ಲ್ಯಾಮರ್​ ನೆಲದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಾರೆ. ಸ್ಯಾಂಡಲ್​ವುಡ್​ನಲ್ಲಿ ಸುಮಾರು ವರ್ಷಗಳಿಂದ ಗುರುತಿಸಿಕೊಂಡಿರುವ ಕಥೆಗಾರ ಅಜಯ್ ಕುಮಾರ್ ಅವರ ಮಗ ಅರ್ಜುನ್ ಗನ್ಸ್ ಆ್ಯಂಡ್​​ ರೋಸಸ್ ಸಿನಿಮಾ ಮೂಲಕ ಗ್ಲ್ಯಾಮರ್​ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ. ಇದು ಅರ್ಜುನ್ ಅವರ ಚೊಚ್ಚಲ ಚಿತ್ರ. ಈಗಾಗಲೇ ಅನೇಕ ಹೊಸ ಪ್ರತಿಭೆಗಳಿಗೆ ಸ್ಯಾಂಡಲ್​ವುಡ್​ ಕೈ ಹಿಡಿದಿದ್ದು, ಅರ್ಜುನ್ ಅವರಿಗೆ ಈ ಸಿನಿಮಾ ಎಷ್ಟರ ಮಟ್ಟಿಗೆ ಹೆಸರು ತಂದು ಕೊಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಗೋಲ್ಡನ್​​ ಗೌನ್​ನಲ್ಲಿ ಗೋಲ್ಡನ್​ ಗರ್ಲ್: ಆಕರ್ಷಣೀಯ ನೋಟದಲ್ಲಿ ಅಂದಗಾತಿ ಐಶ್ವರ್ಯಾ ರೈ

ABOUT THE AUTHOR

...view details