ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಸ್ಕೃತಿ ಹೆಚ್ಚಾಗುತ್ತಿದೆ. ಇದೀಗ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ನಟನೆಯ ಬಹು ನಿರೀಕ್ಷಿತ ಲೈಗರ್ ಚಿತ್ರದ ಟ್ರೈಲರ್(ಕನ್ನಡ) ರಿಲೀಸ್ ಆಗಿದ್ದು, ಬಾಕ್ಸರ್ ಆಗಿ ವಿಜಯ್ ದೇವರಕೊಂಡ ಅಬ್ಬರಿಸಿದ್ದಾರೆ.
ವಿಜಯ್ ದೇವರಕೊಂಡ ಪುರಿ ಜಗನ್ನಾಥ್ ಹೈ ವೋಲ್ಟೇಜ್ ಕಾಂಬಿನೇಶನ್ನಲ್ಲಿ ಲೈಗರ್ ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿತ್ತು. ಪೋಸ್ಟರ್ಗಳಿಂದಲೇ ನಿರೀಕ್ಷೆ ಹೆಚ್ಚಿಸಿದ್ದ ಲೈಗರ್ ಟ್ರೈಲರ್ ಈಗ ಸಿನಿಮಾ ಮೇಲಿನ ಕ್ಯೂರಿಯಾಸಿಟಿಯನ್ನು ದುಪ್ಪಟ್ಟು ಮಾಡಿದೆ. ಮಾಸ್ ಲುಕ್ನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ವಿಜಯ್ಗೆ ಜೋಡಿಯಾಗಿ ಬೋಲ್ಡ್ ಲುಕ್ನಲ್ಲಿ ಅನನ್ಯಾ ಪಾಂಡೆ ನಟಿಸಿದ್ದಾರೆ. ಈ ಸಿನಿಮಾ ಮೂಲಕ ವಿಜಯ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ.