ಹೈದರಾಬಾದ್:ಸಿನಿಮಾ ಸ್ಟಾರ್ಗಳು ಎಂದಾಕ್ಷಣ ನಮ್ಮ ಮನದಲ್ಲಿ ಮೂಡಿ ಬರೋದು ಅವರ ಅದ್ಧೂರಿ ಲೈಫ್ಸ್ಟೈಲ್. ಪ್ರಮುಖವಾಗಿ ಸಾವಿರಾರು, ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ, ಶೋ ಹಾಕಿಕೊಳ್ಳುತ್ತಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ದುಬಾರಿ ಬೆಲೆಯ ಡ್ರೆಸ್, ಶೂ ಧರಿಸಿ ಬರುತ್ತಾರೆ. ಆದರೆ, ಲೈಗರ್ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ವಿಜಯ್ ದೇವರಕೊಂಡ ತುಂಬಾ ಸರಳವಾಗಿ ಕಾಣಿಸಿಕೊಂಡು, ಎಲ್ಲರ ಗಮನ ಸೆಳೆದಿದ್ದಾರೆ.
ಕಪ್ಪು ಟೀ ಶರ್ಟ್, ಬ್ರೌನ್ ಪ್ಯಾಂಟ್ ಹಾಕಿಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದ ಈ ನಟ ಕೇವಲ 199 ರೂಪಾಯಿ ಮೌಲ್ಯದ ಹವಾಯಿ ಚಪ್ಪಲಿ ಹಾಕಿಕೊಂಡಿದ್ದರು. ಈ ವಿಷಯ ಸದ್ಯ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಜುಲೈ 21ರಂದು ಮುಂಬೈನಲ್ಲಿ ನಡೆದ ಲೈಗರ್ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ವಿಜಯ ದೇವರಕೊಂಡ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡರು.