ಕರ್ನಾಟಕ

karnataka

ETV Bharat / entertainment

ನಗ್ನವಾಗಿ ನಿಂತ ವಿಜಯ್ ದೇವರಕೊಂಡ.. ಧೂಳೆಬ್ಬಿಸಿದ ಲೈಗರ್​ ಹೊಸ ಪೋಸ್ಟರ್​ - ನಟ ವಿಜಯ್​ ದೇವರಕೊಂಡ

ತೆಲುಗಿನ ವಿಜಯ್​ ದೇವರಕೊಂಡ ನಟಿಸುತ್ತಿರುವ ಬಹುನಿರೀಕ್ಷಿತ ಲೈಗರ್​ ಸಿನಿಮಾದ ಹೊಸ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.

ಧೂಳೆಬ್ಬಿಸಿದ ಲೈಗರ್​ ಹೊಸ ಪೋಸ್ಟರ್​
ಧೂಳೆಬ್ಬಿಸಿದ ಲೈಗರ್​ ಹೊಸ ಪೋಸ್ಟರ್​

By

Published : Jul 2, 2022, 12:57 PM IST

ಹೈದರಾಬಾದ್ (ತೆಲಂಗಾಣ):ನಟ ವಿಜಯ್ ದೇವರಕೊಂಡ ಅವರ ಮುಂಬರುವ ಚಿತ್ರ ಲೈಗರ್‌ನ ಹೊಸ ಪೋಸ್ಟರ್‌ ಭಾರೀ ಸದ್ದು ಮಾಡುತ್ತಿದೆ. ಸಿನಿಮಾ ತಯಾರಕರು ಚಿತ್ರದ ಶನಿವಾರ ಪೋಸ್ಟರ್​ ಬಿಡುಗಡೆ ಮಾಡಿದ್ದು, ಇದರಲ್ಲಿ ವಿಜಯ್​ ದೇವರಕೊಂಡ ನಗ್ನವಾಗಿ ಕಾಣಿಸಿಕೊಂಡಿದ್ದಾರೆ.

ನಟ ವಿಜಯ್​ ಕಟುಮಸ್ತಾದ ದೇಹದಲ್ಲಿ ನಗ್ನವಾಗಿದ್ದು, ಮರೆಮಾಡಲು ಹೂವಿನ ಗೊಂಚಲು ಹಿಡಿದಿದ್ದಾರೆ. 'ಇದು ಹತ್ತು ಪಟ್ಟು ಬಿಸಿಯಾಗಿಸುತ್ತದೆ. ಆಗಸ್ಟ್​ 25 ರಂದು ತೆರೆಗೆ ಬರಲಿದೆ' ಎಂದು ಬರೆದಿರುವ ಪೋಸ್ಟ್​ ಅನ್ನು ಧರ್ಮ ಪ್ರೊಡಕ್ಷನ್ಸ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಕೋವಿಡ್​ ಸಾಂಕ್ರಾಮಿಕದಿಂದಾಗಿ ಸಿನಿಮಾ ಚಿತ್ರೀಕರಣ ವಿಳಂಬವಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ 9 ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ಯೋಜಿಸಲಾಗಿತ್ತು.

ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ರಮ್ಯಾ ಕೃಷ್ಣನ್, ರೋನಿತ್ ರಾಯ್, ವಿಶು ರೆಡ್ಡಿ ಮುಂತಾದವರು ನಟಿಸಲಿದ್ದಾರೆ. ಇದನ್ನು ಪುರಿ ಕನೆಕ್ಟ್ಸ್ ಸಂಸ್ಥೆ ಜೊತೆಗೆ ಚಾರ್ಮಿ ಕೌರ್ ಸಹ ನಿರ್ಮಾಪಕರಾಗಿದ್ದಾರೆ. ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿದೆ.

ಓದಿ:ಗಣಪತ್​ ಸಿನಿಮಾ ಚಿತ್ರೀಕರಣದಲ್ಲಿ ಟೈಗರ್​ ಶ್ರಾಫ್​ಗೆ ಗಾಯ.. ವಿಡಿಯೋ ಹರಿಬಿಟ್ಟ ನಟ

ABOUT THE AUTHOR

...view details