ಕರ್ನಾಟಕ

karnataka

ETV Bharat / entertainment

'ಯಾರಿಗೂ ಹೀಗಾಗಬಾರದು': ರಶ್ಮಿಕಾ ಡೀಪ್‌ಫೇಕ್ ವಿಡಿಯೋಗೆ ವಿಜಯ್​ ದೇವರಕೊಂಡ ಪ್ರತಿಕ್ರಿಯೆ - ವಿಜಯ್​ ದೇವರಕೊಂಡ ರಶ್ಮಿಕಾ

Vijay Deverakonda reacts on Rashmika Mandanna's deepfake video: ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಕುರಿತು ವದಂತಿಯ ಗೆಳೆಯ ವಿಜಯ್​ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ.

Vijay Deverakonda reacts on Rashmika video controversy
ರಶ್ಮಿಕಾ ಡೀಪ್‌ಫೇಕ್ ವಿಡಿಯೋಗೆ ವಿಜಯ್​ ದೇವರಕೊಂಡ ಪ್ರತಿಕ್ರಿಯೆ

By ETV Bharat Karnataka Team

Published : Nov 8, 2023, 5:30 PM IST

Updated : Nov 8, 2023, 5:41 PM IST

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಗಣ್ಯರು ಪ್ರತಿಕ್ರಿಯಿಸುತ್ತಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಸರ್ಕಾರ ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಇದೀಗ ನಟಿಯ ರೂಮರ್​ ಬಾಯ್​ಫ್ರೆಂಡ್​ ವಿಜಯ್​ ದೇವರಕೊಂಡ ಸಹ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಹೌದು, ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ ವಿಜಯ್ ದೇವರಕೊಂಡ ಘಟನೆ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ''ರಶ್ಮಿಕಾರಿಗೆ ಆದಂತೆ ಯಾರಿಗೂ ಕೂಡ ಈ ಪರಿಸ್ಥಿತಿ ಎದುರಾಗಬಾರದು. ಇಂತಹ ನಕಲಿ ದೃಶ್ಯಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆ ಆಗಬೇಕು'' ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮತ್ತೋರ್ವ ನಟ ಇಶಾನ್ ಖಟ್ಟರ್ (Ishaan Khatter) ಕೂಡ ರಶ್ಮಿಕಾ ಅವರ ಡೀಪ್‌ಫೇಕ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನಟ ವಿಜಯ್ ದೇವರಕೊಂಡ ಅವರು, ರಶ್ಮಿಕಾ ಮಂದಣ್ಣ ವೈರಲ್​ ವಿಡಿಯೋ ಸಂಬಂಧ ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ಸುದ್ದಿಯೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಭವಿಷ್ಯಕ್ಕಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರ ಹಿಂದಿನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಇಂತಹ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮತ್ತು ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೈಬರ್ ವಿಭಾಗ ಮತ್ತಷ್ಟು ಚುರುಕಾಗಬೇಕಿದೆ ಎಂಬುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಡೀಪ್‌ಫೇಕ್ ವಿಡಿಯೋ ವೈರಲ್: ಮುಂಬೈನಲ್ಲಿ ರಣ್​​ಬೀರ್​ ಜೊತೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

ವೈರಲ್ ವಿಡಿಯೋದಲ್ಲೇನಿದೆ? ಮಹಿಳೆಯೊಬ್ಬರು ಲಿಫ್ಟ್‌ನೊಳಗೆ ಬ್ಲ್ಯಾಕ್​ ಹಾಟ್ ಡ್ರೆಸ್​ ಧರಿಸಿ ಬಂದಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಮಹಿಳೆಯ ಮುಖವನ್ನು ಎಡಿಟ್ ಮಾಡಲಾಗಿದೆ. ಆ ಮಹಿಳೆಯ ಮುಖಕ್ಕೆ, ನಟಿ ರಶ್ಮಿಕಾ ಅವರ ಮುಖವನ್ನು ಎಡಿಟ್​ ಮಾಡಲಾಗಿದೆ. ವಿಡಿಯೋದಲ್ಲಿರುವವರು ಆಂಗ್ಲೋ ಒಂಡಿಯನ್​ ಯುವತಿ ಝರಾ ಪಟೇಲ್ ಎಂದು ತಿಳಿದುಬಂದಿದೆ. ಈ ಬಗ್ಗೆ ಅವರೂ ಕೂಡ ಪ್ರತಿಕ್ರಿಯಿಸಿದ್ದರು. ''ಡೀಪ್​ಫೇಕ್​ ವಿಡಿಯೋ ವೈರಲ್​ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ರೆ ಇದರ ಹಿಂದೆ ನಾನಿಲ್ಲ. ಈ ಘಟನೆಯಿಂದ ನನಗೂ ನೋವಾಗಿದೆ, ವಿಚಲಿತಳಾಗಿದ್ದೇನೆ. ಮಹಿಳೆಯರ ಭವಿಷ್ಯದ ಚಿಂತೆ ನನಗೆ ಕಾಡತೊಡಗಿದೆ. ಸೋಷಿಯಲ್​ ಮೀಡಿಯಾ ಬಳಸಲು ಭಯ ಪಡುವ ಪರಿಸ್ಥಿತಿ ಬಂದಿದೆ. ಆನ್​ಲೈನ್​ನಲ್ಲಿ ಬರುವುದೆಲ್ಲವೂ ನಿಜವಲ್ಲ'' ಎಂದು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ:ಡೀಪ್​​ಫೇಕ್ ಕಂಟೆಂಟ್​ ವಿರುದ್ಧ ಕ್ರಮ: ​ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ರಶ್ಮಿಕಾ ಮಂದಣ್ಣ

ಘಟನೆ ಬಗ್ಗೆ ನನಗೆ ನಿಜಕ್ಕೂ ನೋವಾಗಿದೆ ಎಂದು ಸ್ವತಃ ರಶ್ಮಿಕಾ ಮಂದಣ್ಣ ಅವರೇ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಇದಕ್ಕೂ ಕೃತಜ್ಞತೆ ಅರ್ಪಿಸಿದ್ದಾರೆ. ಇನ್ನು, ವಿಡಿಯೋ ವೈರಲ್​ ಆಗಿ ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಬಳಿಕ, ಇಂದು ಮೊದಲ ಬಾರಿ ನಟಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿರುವ ಟಿ-ಸಿರೀಸ್ ಆಫೀಸ್​ ಬಳಿ ರಣ್​​​ಬೀರ್ ಕಪೂರ್ ಹಾಗೂ ಸಂದೀಪ್ ರೆಡ್ಡಿ ವಂಗಾ ಜೊತೆ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡರು.

Last Updated : Nov 8, 2023, 5:41 PM IST

ABOUT THE AUTHOR

...view details