ಕರ್ನಾಟಕ

karnataka

ETV Bharat / entertainment

ರಣವೀರ್ ಸಿಂಗ್ ಜೊತೆಗಿನ ಫೋಟೋ ಹಂಚಿಕೊಂಡ ವಿಜಯ್​​ ದೇವರಕೊಂಡ

ನಟ ವಿಜಯ್ ದೇವರಕೊಂಡ ಯುಎಫ್‌ಸಿ ಲೈಟ್‌ವೇಟ್ ಚಾಂಪಿಯನ್‌ಶಿಪ್‌ನಲ್ಲಿ 'ಗಲ್ಲಿ ಬಾಯ್' ನಟ ರಣವೀರ್ ಸಿಂಗ್ ಜೊತೆ ತೆಗೆದ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್​ ದೇವರಕೊಂಡ ಇನ್‌ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೆ
ವಿಜಯ್​ ದೇವರಕೊಂಡ ಇನ್‌ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೆ

By

Published : Oct 25, 2022, 12:09 PM IST

ನವದೆಹಲಿ: ಯುಎಫ್‌ಸಿ ಲೈಟ್‌ವೇಟ್ ಚಾಂಪಿಯನ್‌ಶಿಪ್‌ನಲ್ಲಿನ 'ಗಲ್ಲಿ ಬಾಯ್' ನಟ ರಣವೀರ್ ಸಿಂಗ್ ಜೊತೆಗಿನ ಫೋಟೋವನ್ನು ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. ಸೋಮವಾರ 'ಲೈಗರ್' ನಟ ವಿಜಯ್​ ದೇವರಕೊಂಡ ಇನ್‌ಸ್ಟಾಗ್ರಾಮ್​ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಅಬುಧಾಬಿಯ ಯಾಸ್ ಐಲ್ಯಾಂಡ್‌ನಲ್ಲಿ UFC ಲೈಟ್‌ವೇಟ್ ಚಾಂಪಿಯನ್‌ಶಿಪ್‌, ಮಾಜಿ ಚಾಂಪಿಯನ್ ಚಾರ್ಲ್ಸ್ ಒಲಿವೇರಾ ಮತ್ತು ಇಸ್ಲಾಂ ಮಖಚೆವ್ ನಡುವೆ ನಡೆಯಿತು. ಇದಕ್ಕೆ ವಿಜಯ್​ ದೇವರಕೊಂಡ ಹಾಜರಾಗಿದ್ದು, ಅಲ್ಲಿ ರಣವೀರ್‌ ಸಿಂಗ್​ ಜೊತೆ ಫೋಟೋ ಕ್ಲಿಕ್ಕಿಸಿದ್ದಾರೆ.

ಫೋಟೋದಲ್ಲಿ ವಿಜಯ್ ಕಪ್ಪು ಬಣ್ಣದ ಲೆದರ್​​ ಜಾಕೆಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಮತ್ತೊಂದೆಡೆ, ರಣವೀರ್ ಅವರು ಪಟ್ಟೆ ಪ್ಯಾಂಟ್ ಮತ್ತು ಕೆಂಪು ಬಕೆಟ್ ರೀತಿಯ ಟೋಪಿ ಹಾಕಿರುವುದನ್ನು ಕಾಣಬಹುದಾಗಿದೆ. ಫೋಟೋವನ್ನು ಹಂಚಿಕೊಂಡ ವಿಜಯ್​​, "ಒಳ್ಳೆಯ ಕಂಪನಿ, ಉತ್ತಮ ಹೋರಾಟ. ಎಪಿಕ್ ನೈಟ್ಸ್" ಎಂದು ಬರೆದಿದ್ದಾರೆ. ಈ ಫೋಟೋವನ್ನು ಅಪ್ಲೋಡ್ ಮಾಡಿದ ತಕ್ಷಣ, ರಣವೀರ್ "My G!" ಎಂದು ಕಾಮೆಂಟ್ ಮಾಡಿದ್ದಾರೆ.

ವರದಿಯ ಪ್ರಕಾರ, ನಟ ವಿಜಯ್​ ದೇವರಕೊಂಡ ನಿರ್ದೇಶಕ ಪುರಿ ಜಗ್ಗನ್ನಾಧ್ ಅವರ ಮುಂದಿನ ಚಿತ್ರ 'ಜನ ಗಣ ಮನ' ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ವಿಜಯ್ ಇತ್ತೀಚೆಗೆ ಅನನ್ಯಾ ಪಾಂಡೆ ಜೊತೆಗೆ ಸ್ಪೋರ್ಟ್ಸ್ ಆ್ಯಕ್ಷನ್ ಚಿತ್ರ 'ಲೈಗರ್' ನಲ್ಲಿ ಕಾಣಿಸಿಕೊಂಡಿದ್ದರು. ಅದು ಗಲ್ಲಾಪೆಟ್ಟಿಗೆಯಲ್ಲಿ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಯಿತು. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಬೆಂಬಲಿತ ಈ ಚಿತ್ರದಲ್ಲಿ ರಮ್ಯಾ ಕೃಷ್ಣನ್ ಕೂಡ ನಟಿಸಿದ್ದಾರೆ.

ಇದನ್ನೂ ಓದಿ:ಮಾಲ್ಡೀವ್ಸ್​​ನಿಂದ ಮಂದಣ್ಣ-ದೇವರಕೊಂಡ ವಾಪಸ್.. ಏರ್​ಪೋರ್ಟ್​ನಲ್ಲಿ ಲವ್​ ಬರ್ಡ್ಸ್ ಕಾಣಿಸಿಕೊಂಡಿದ್ದು ಹೀಗೆ

ಮತ್ತೊಂದೆಡೆ, ರಣವೀರ್ ಹಾಸ್ಯಮಯವಾದ 'ಸರ್ಕಸ್' ಸಿನಿಮಾದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಪೂಜಾ ಹೆಗ್ಡೆ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರವು ಕ್ರಿಸ್‌ಮಸ್​ಗೆ ಥಿಯೇಟರ್‌ಗೆ ಬರಲು ಸಿದ್ಧವಾಗಿದೆ. ಅದರ ಹೊರತಾಗಿ, ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಆಲಿಯಾ ಭಟ್, ಧರ್ಮೇಂದ್ರ, ಜಯಾ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details