ಕಾಲಿವುಡ್ ನಟ ವಿಜಯ್ರನ್ನು ನೀವು ತೆರೆಯ ಮೇಲೆ ಮಾತ್ರ ನೋಡಲು ಸಾಧ್ಯ. ಅವರನ್ನು ಯಾವತ್ತಾದರೂ ಟಿವಿ ಸಂದರ್ಶನ, ಮಾಧ್ಯಮಗಳಲ್ಲಿ ನೋಡಿದ್ದೀರಾ? ಇಲ್ವಲ್ಲ. ಇದನ್ನು ಓದಿದ ಮೇಲೆ ನೀವೂ 'ಹೌದಲ್ವ' ಅಂತ ಮೂಗಿನ ಮೇಲೆ ಕೈಬೆರಳು ಇಟ್ಟುಕೊಳ್ಳಬಹುದು.
ಯಾಕೆಂದರೆ, ನಟ ವಿಜಯ್ 10 ವರ್ಷಗಳಿಂದ ಟಿವಿಗಳಿಗೆ ಸಂದರ್ಶನವೇ ಕೊಟ್ಟಿಲ್ಲವಂತೆ. ಅದಕ್ಕೆ ಕಾರಣ ಮಾಧ್ಯಮಗಳೇ ಅಂತೆ. ಅಷ್ಟಕ್ಕೂ ವಿಜಯ್ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಲು ಬಲವಾದ ಕಾರಣ ಏನಿರಬಹುದು ಅಂತೀರಾ?. ಮುಂದೆ ಓದಿ.
ಸರಿಸುಮಾರು ದಶಕಗಳ ಹಿಂದೆ ವಿಜಯ್ ತಮ್ಮ ಸಿನಿಮಾವೊಂದರ ಪ್ರಮೋಷನ್ಗಾಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರಂತೆ. ನಿರೂಪಕರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ವಿಜಯ್ ಮರುದಿನ ಬೆಳಗ್ಗೆ ಪೇಪರ್ ನೋಡಿದಾಗ ಅವರೇ ಆಶ್ಚರ್ಯರಾಗಿದ್ದಾರೆ. ಕಾರಣ ಅವರು ಸಂದರ್ಶನದಲ್ಲಿ ಆಡಿದ ಮಾತು ಬೆಳಗಾಗುವಷ್ಟರಲ್ಲಿ ಭಾರಿ ರಾದ್ಧಾಂತ ಉಂಟು ಮಾಡಿತ್ತಂತೆ.
ಆದರೆ, ಆ ಮಾತನ್ನು ವಿಜಯ್ ಹೇಳೇ ಇಲ್ಲ ಅನ್ನೋದು ಅವರ ವಾದವಾಗಿತ್ತು. ತಾನು ಹೇಳಿದ ಆ ಮಾತನ್ನು ಮಾಧ್ಯಮದವರು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ವಿವಾದ ಉಂಟು ಮಾಡಿದ್ದರು. ಈ ಬಗ್ಗೆ ನನ್ನ ಕುಟುಂಬಸ್ಥರು, ಗೆಳೆಯರೂ ಕೂಡ ಶಾಕ್ ಆಗಿದ್ದರು. ಅವರಿಗೆಲ್ಲಾ ನಾನು ನಡೆದ ಘಟನೆಯ ಬಗ್ಗೆ ತಿಳಿಹೇಳಿದೆ. ಆದರೆ, ಅಷ್ಟರಲ್ಲಾಗಲೇ ಆ ಮಾತು ವಿವಾದವಾಗಿತ್ತು.
ಹೀಗಾಗಿ, ನಾನು ಇನ್ನು ಮುಂದೆ ಯಾವ ಕಾರಣಕ್ಕೂ ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಎಂದು ದೂರವುಳಿದೆ ಎಂದು ಹೇಳುವ ಮೂಲಕ 10 ವರ್ಷಗಳ ಕಾಲ ಮಾಧ್ಯಮಗಳಿಂದ ದೂರ ಉಳಿದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇಷ್ಟೆಲ್ಲಾ ಹೇಳಿದ ನಟ ವಿಜಯ್ ಅಂದು ತಾವಾಡಿದ ಯಾವ ಮಾತು ವಿವಾದಕ್ಕೆ ಕಾರಣವಾಗಿತ್ತು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.
'ಸೈಕಲ್ ಓಡಿಸಿದ' ರಹಸ್ಯ ಬಯಲು:ವಿಜಯ್ ಇನ್ನೊಂದು ಸ್ವಾರಸ್ಯಕರ ಘಟನೆಯನ್ನೂ ಹಂಚಿಕೊಂಡಿದ್ದಾರೆ. ಯಾವುದೋ ಚುನಾವಣೆಯ ವೇಳೆ ತಾವು ಮತ ಹಾಕಲು ಸೈಕಲ್ ತುಳಿದುಕೊಂಡು ಹೋದಾಗ ಅದು ಭಾರಿ ಸುದ್ದಿಯಾದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಮನೆಯ ಹತ್ತಿರವೇ ಇದ್ದ ಮತಕೇಂದ್ರಕ್ಕೆ ಮತ ಚಲಾಯಿಸಲು ಹೋಗಬೇಕೆಂದಾಗ ತನ್ನ ಮಗ ಇಲ್ಲೇ ಅಣತಿ ದೂರದಲ್ಲಿರುವ ಕೇಂದ್ರಕ್ಕೆ ಸೈಕಲ್ ಮೇಲೆ ಹೋಗಿ ಮತ ಚಲಾಯಿಸಿ ಬನ್ನಿ ಎಂದು ಸಲಹೆ ನೀಡಿದ್ದ.
ಅದರಂತೆ ನಾನು ಸೈಕಲ್ ಹತ್ತಿ ಮತಕೇಂದ್ರಕ್ಕೆ ಹೋದಾಗ ಬೆನ್ನು ಬಿದ್ದ ಮಾಧ್ಯಮದವರು ನಾನು ಸೈಕಲ್ ಮೇಲೆ ಬಂದಿದ್ದನ್ನೇ ರೋಚಕವಾಗಿ ಸುದ್ದಿ ಮಾಡಿದ್ದರು. ಅಲ್ಲದೇ, ಅದನ್ನು ನೇರಪ್ರಸಾರ ಕೂಡ ಮಾಡಿದ್ದರು. ಇದನ್ನು ಕಂಡು ನನ್ನ ಮಗನೇ ಫೋನ್ ಮಾಡಿ 'ಸೈಕಲ್ ಹುಷಾರು ಅಪ್ಪ' ಎಂದಿದ್ದ ಅಂತ ವಿಜಯ್ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದಹಾಗೆ ವಿಜಯ್ರ 'ಬೀಸ್ಟ್' ಸಿನಿಮಾ ನಾಳೆ (ಮಾ.13) ತೆರೆಕಾಣಲಿದೆ.
ಇದನ್ನೂ ಓದಿ:ತಾಯಿಯಾಗುತ್ತಿದ್ದಾರೆ ಪ್ರಣೀತಾ : ವಿಭಿನ್ನವಾದ ಫೋಟೋ ಹಂಚಿಕೊಂಡ ನಟಿ