ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಹಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 43ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಬರ್ತಡೇಯಂದು ಬೋಲ್ಡ್ ಫೋಟೋ ಶೇರ್ ಮಾಡಿಕೊಳ್ಳೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಆ್ಯಕ್ಷನ್ ಹೀರೋ ವಿದ್ಯುತ್ ಜಮ್ವಾಲ್ ಪರ್ವತಗಳ ತಪ್ಪಲಿನಲ್ಲಿ ಆನಂದಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ನೈಸರ್ಗಿಕ ಸೌಂದರ್ಯ ಆನಂದಿಸಿ, ಅಡುಗೆ ಮಾಡಿ ಸಮಯ ಕಳೆದಿದ್ದಾರೆ. ಏಕಾಂತತೆ ಕಂಡುಕೊಂಡ ಬಾಲಿವುಡ್ ನಟ ಅಡುಗೆ ಮಾಡುವುದರಿಂದ ಹಿಡಿದು ತೊರೆಗಳಲ್ಲಿ ಸ್ನಾನ ಮಾಡುವವರೆಗೆ ಅರಣ್ಯ ಪ್ರದೇಶವನ್ನು ಆನಂದಿಸಿದ್ದಾರೆ. ಎಲ್ಲಾ ಕ್ಷಣಗಳಲ್ಲೂ ಬೆತ್ತಲೆಯಾಗಿದ್ದು, ಈ ಫೋಟೋಗಳನ್ನೇ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಈ ಫೋಟೋಗಳನ್ನು ಕ್ಲಿಕ್ಕಿಸಿದ್ದು ಯಾರು ಎಂದು ನಟನನ್ನು ಪ್ರಶ್ನಿಸಿದ್ದಾರೆ.
ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಇಂದು ಪರ್ವತ ಪ್ರದೇಶದಲ್ಲಿ ಕಳೆದ ಕ್ಷಣಗುಳ್ಳ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮೈ ಮೇಲೆ ಒಂದು ತುಂಡು ಬಟ್ಟೆ ಇಲ್ಲ. ಈ ಫೋಟೋಗಳನ್ನು ಕಂಡ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಗ್ನ ಚಿತ್ರಗಳು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನಟ ಏಕಾಂಗಿಯಾಗಿ ಸಮಯ ಕಳೆದರೆ ಈ ಫೋಟೋಗಳನ್ನು ಕ್ಲಿಕ್ಕಿಸಲು ಹೇಗೆ ಸಾಧ್ಯವಾಯಿತು ಎಂದು ಹಲವರು ಪ್ರಶ್ನಿಸಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯುತ್ ಜಮ್ವಾಲ್, ಮೊಹರ್ ಸಿಂಗ್ ಎಂಬ ಸ್ಥಳೀಯ ಕುರಿಗಾಹಿಯೋರ್ವ ತನ್ನ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ನಟನ ತಮ್ಮ ಮುಂದಿನ ಸಿನಿಮಾ ಕ್ರಾಕ್ (Crakk) ನ ಅಪ್ಡೇಟ್ಸ್ ಕೊಟ್ಟಿದ್ದಾರೆ. ಫೋಟೋ, ಸಿನಿಮಾ ಅಪ್ಡೇಟ್ಸ್ ನೋಡಿದ ಅಭಿಮಾನಿಗಳಿಗೆ ಪ್ರತಿಕ್ರಿಯೆ ಕೊಡೋದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಬ್ಯುಸಿಯಾಗಿದ್ದಾರೆ. ನಗ್ನ ಚಿತ್ರಗಳಿಗೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.