ಅಬುಧಾಬಿ:ಕಳೆದ ವರ್ಷ ಡಿಸೆಂಬರ್‌ನಲ್ಲಿ ಹಾಲಿವುಡ್ನ ತಾರಾ ಜೋಡಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವಿವಾಹವಾಗಿತ್ತು. ಮದುವೆ ನಂತರ ತಾರೆಯರ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಳ್ಳದ ಈ ತಾರಾ ಜೋಡಿಯ ವೈವಾಹಿಕ ಜೀವನದ ಕುರಿತು ಅಭಿಮಾನಿ ಬಳಗದಲ್ಲಿ ಚರ್ಚೆಯಾಗುತ್ತಿತ್ತು. ಈ ಎಲ್ಲದಕ್ಕೂ ನಟ ವಿಕ್ಕಿ ಕೌಶಲ್ ಈಗ ಪರದೆ ಎಳೆದಿದ್ದಾರೆ.
ಅಭಿಮಾನಿಗಳ ಮನಸಲ್ಲಿ ಓಡುತ್ತಿರುವ ಅದೆಷ್ಟೋ ಪ್ರಶ್ನೆಗಳಿಗೆ ಶನಿವಾರ ರಾತ್ರಿ ಅಬುಧಾಬಿಯಲ್ಲಿ IIFA 2022 ಗ್ರೀನ್ ಕಾರ್ಪೆಟ್‌ನಲ್ಲಿ ಉತ್ತರಿಸಿದ್ದಾರೆ. ತಮ್ಮ 'ಸೋಲೋ' ಅಪಿಯರೆನ್ಸ್ ವೇಳೆ ಕತ್ರಿನಾ ಜೊತೆಗಿನ ತಮ್ಮ ಮದುವೆಯ ನಂತರದ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ವಿಕ್ಕಿ ಕೌಶಲ್ ಸಂತೋಷದಿಂದಲೇ ಉತ್ತರಿಸಿದ್ದಾರೆ.
'ಜೀವನ ತುಂಬಾ ಚೆನ್ನಾಗಿ ನಡೆಯುತ್ತಿದೆ...ಸುಖಮಯವಾಗಿದೆ. ಶಾಂತಿ ತುಂಬಿದ ಅತ್ಯತ್ತಮ ಜೀವನವನ್ನು ನಡೆಸುತ್ತಿದ್ದೇವೆ. ಕತ್ರಿನಾ ತುಂಬಾ ಒಳ್ಳೆಯವಳು. ಇಲ್ಲಿ ಅವಳು ನನ್ನೊಂದಿಗೆ ಇಲ್ಲ ಎನ್ನುವುದೇ ಬೇಸರ. ಅವಳ ಉಪಸ್ಥಿತಿಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ವರ್ಷ ನಾವು ಜೊತೆಯಾಗಿ IIFA ಯಲ್ಲಿ ಭಾಗವಹಿಸುತ್ತೇವೆ ಎಂದುಕೊಳ್ಳುತ್ತೇನೆ' ಎಂದಿದ್ದಾರೆ.