ಇಂದು ಬಾಲಿವುಡ್ನ ಎರಡು ಬಹುನಿರೀಕ್ಷಿತ ಚಿತ್ರಗಳಾದ 'ಸ್ಯಾಮ್ ಬಹದ್ದೂರ್' ಮತ್ತು 'ಅನಿಮಲ್' ತೆರೆಗಪ್ಪಳಿಸಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿವೆ. ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆಗಳ ಸದ್ದಿನಿಂದಾಗಿ ಹಬ್ಬದ ವಾತಾವರಣ ಕಂಡುಬಂತು. ಎರಡೂ ಸಿನಿಮಾಗಳಿಗೆ ಸಿನಿಪ್ರಿಯರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಇನ್ನೇನಿದ್ದರೂ ಬಾಕ್ಸ್ ಆಫೀಸ್ ಅಂಕಿಅಂಶಗಳ ಮೇಲೆ ಸೋಲು, ಗೆಲುವು ನಿರ್ಧಾರವಾಗಲಿದೆ.
ಭಾರತದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಜೀವನಾಧಾರಿತ ಕಥೆ 'ಸ್ಯಾಮ್ ಬಹದ್ದೂರ್'ನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್ ಅಭಿನಯಿಸಿದ್ದಾರೆ. 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಸ್ಯಾಮ್ ಮಾಣೆಕ್ ಶಾ ತಮ್ಮ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಐದು ಪ್ರಮುಖ ಯುದ್ಧಗಳಲ್ಲಿ ಭಾಗಿಯಾಗಿದ್ದರು. ಈ ರೋಚಕ ಕಹಾನಿಯನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ.
ಮಿಶ್ರ ಪ್ರತಿಕ್ರಿಯೆ: ವಿಕ್ಕಿ ಕೌಶಲ್ ಅವರು ಸ್ಯಾಮ್ ಮಾಣೆಕ್ ಶಾ ಅವರ ಪಾತ್ರವನ್ನು ನಿಭಾಯಿಸಿರುವ ರೀತಿಗೆ ಪ್ರಶಂಸೆ ವ್ಯಕ್ತವಾಗಿದೆ. ಆದಾಗ್ಯೂ, ನಿರ್ದೇಶನದ ಶೈಲಿಗೆ ಕೆಲವರಿಂದ ಟೀಕೆಯೂ ಕೇಳಿಬಂದಿದೆ.
'ಸ್ಯಾಮ್ ಬಹದ್ದೂರ್' ಬಿಡುಗಡೆಗೂ ಮುನ್ನ ನಿರ್ಮಾಪಕರು ಮುಂಬೈನಲ್ಲಿ ಸ್ಪೆಷಲ್ ಶೋ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೌಶಲ್ ಕುಟುಂಬ ಹಾಜರಿತ್ತು.
ಇದನ್ನೂ ಓದಿ:ಚೆಂದಕ್ಕಿಂತ ಚೆಂದ ತಮನ್ನಾ ಅಂದ; ಅಭಿಮಾನಿಗಳನ್ನು ಆಕರ್ಷಿಸಿದ ಹೊಸ ಫೋಟೋಗಳಿವು