ಬಾಲಿವುಡ್ ತಾರಾ ದಂಪತಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಆನ್ಸ್ಕ್ರೀನ್ನಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ವಿಕ್ಯಾಟ್ ಜೋಡಿ ಯಾವಾಗ ಪರದೆ ಹಂಚಿಕೊಳ್ಳುತ್ತಾರೆ ಎಂಬ ಕುತೂಹಲ ವ್ಯಕ್ತಪಡಿಸಿದ್ದ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಹೌದು, ಈ ಜೋಡಿಯ ಚಿತ್ರೀಕರಣವೊಂದರ ಫೋಟೋಗಳು ವೈರಲ್ ಆಗಿದೆ. ಹಾಗಂತ ಇದು ಸಿನಿಮಾ ಶೂಟಿಂಗ್ ಅಲ್ಲ. ಟಿವಿ ಜಾಹೀರಾತೊಂದರ ಚಿತ್ರೀಕರಣದ ಫೋಟೋಗಳಾಗಿವೆ.
ವಿಕ್ಕಿ ಮತ್ತು ಕತ್ರಿನಾ ಮೊದಲ ಬಾರಿಗೆ ಪರದೆ ಹಂಚಿಕೊಂಡಿದ್ದಾರೆ. ವೈರಲ್ ಆದ ಫೋಟೋಗಳಲ್ಲಿ, ಇಬ್ಬರೂ ಕಲರ್ಫುಲ್, ಕೂಲ್ ಲುಕ್ ಕೊಡುವ ಬಟ್ಟೆಗಳಲ್ಲಿ ಆರಾಮದಾಯಕವಾದ ರಜೆಯ ದಿನಗಳನ್ನು ಆನಂದಿಸುತ್ತಿರುವಂತಿದೆ. ಇದರಲ್ಲಿ ವಿಕ್ಕಿ ಮತ್ತು ಕತ್ರಿನಾ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ದಂಪತಿಯ ಮೊದಲ ಪ್ರಾಜೆಕ್ಟ್‌ನ ವೈರಲ್ ಚಿತ್ರಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅದಕ್ಕೂ ಮೊದಲು ಎರಡು ವರ್ಷಗಳ ಕಾಲ ಪ್ರೀತಿಸಿ, ಡೇಟಿಂಗ್ನಲ್ಲಿದ್ದರು. ಈ ಜೋಡಿ ಈವರೆಗೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿರಲಿಲ್ಲ. ಇದೀಗ ಜಾಹೀರಾತಿನ ಫೋಟೋಗಳು ಅಭಿಮಾನಿಗಳ ಮನಮುಟ್ಟಿದೆ.
ಇನ್ನೂ ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಕತ್ರಿನಾ ಕೈಫ್ ತಮ್ಮ ಪ್ರೇಮದ ಬಗ್ಗೆ ಮಾತನಾಡಿದ್ದರು. ಝೋಯಾ ಅಖ್ತರ್ ಅವರ ಪಾರ್ಟಿಯಲ್ಲಿ ಭೇಟಿಯಾದೆವು. ಬಳಿಕ ಪ್ರೀತಿಸತೊಡಗಿದೆವು. ಅವರ ಹೆಸರು ಕೇಳಿದ್ದೆ ಹೊರತು ಅವರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಯಾವಾಗ ಅವರನ್ನು ಭೇಟಿ ಮಾಡಿದೆನೋ ಅಂದು ನನಗೆ ''ನಾನು ಗೆದ್ದೆ'' ಎನಿಸಿತು. ಇದು ನನ್ನ ನಿರ್ದಿಷ್ಟ ಸ್ಥಾನ. ಇದು ನಿಜವಾಗಿಯೂ ಉದ್ದೇಶಿಸಲಾಗಿತ್ತು ಎಂದು ತಿಳಿಸಿದ್ದರು.
ವಿಕ್ಕಿ ಕೌಶಲ್ - ಕತ್ರಿನಾ ಕೈಫ್
ಇದನ್ನೂ ಓದಿ:ಹಿಂದಿ ಬಿಗ್ ಬಾಸ್ 16 ಶೀಘ್ರದಲ್ಲೇ ಆರಂಭ.. ಪ್ರೋಮೋ ರಿಲೀಸ್-ಪ್ರೇಕ್ಷಕರ ಕುತೂಹಲ ಹೆಚ್ಚಳ