ಕರ್ನಾಟಕ

karnataka

ETV Bharat / entertainment

'ಸ್ಯಾಮ್ ಬಹದ್ದೂರ್': ಭಾರತೀಯ ಸೇನಾ ಕ್ಯಾಂಪ್​​ನಲ್ಲಿ ವಿಕ್ಕಿ ಕೌಶಲ್​​ - ತರಬೇತಿಯ ವಿಡಿಯೋ ನೋಡಿ - Vicky Kaushal stunts

ನಟ ವಿಕ್ಕಿ ಕೌಶಲ್ ತಮ್ಮ ಕೆಲ ಆಸಕ್ತಿಕರ ವಿಡಿಯೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Vicky Kaushal shares his fire stunts videos
ವಿಕ್ಕಿ ಕೌಶಲ್ ಸ್ಟಂಟ್ಸ್

By ETV Bharat Karnataka Team

Published : Nov 10, 2023, 5:31 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್‌ ಬಾಲಿವುಡ್ ಸೂಪರ್‌ ಸ್ಟಾರ್ ಆಗುವುದರಲ್ಲಿ ಸಂದೇಹವೇ ಇಲ್ಲ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕತ್ರಿನಾ ಕೈಫ್ ಅವರ ಪತಿ ವಿಕ್ಕಿ ಕೌಶಲ್ ನಟನೆಯ ಕೆಲ ಅತ್ಯುತ್ತಮ ಸಿನಿಮಾಗಳಿವೆ. ''ಉರಿ - ದಿ ಸರ್ಜಿಕಲ್ ಸ್ಟ್ರೈಕ್'' ವಿಕ್ಕಿ ಕೌಶಲ್‌ ನಟನೆಯ ಬ್ಲಾಕ್​ಬಸ್ಟರ್ ಸಿನಿಮಾ ಆಗಿದ್ದು, ಇದಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಅದಾಗ್ಯೂ, ಸಂಪೂರ್ಣವಾಗಿ ಸೂಪರ್​ ಸ್ಟಾರ್ ಆಗಿಲ್ಲ ಎಂಬುದು ಹಲವರ ಅಭಿಪ್ರಾಯ. ಆದರೆ ನಟ ಮಾತ್ರ ಚಿತ್ರಕ್ಕೆ ತಮ್ಮ ಸಂಪೂರ್ಣ ಪ್ರತಿಭೆ, ಶ್ರಮ ಹಾಕೋದನ್ನು ನಿಲ್ಲಿಸಿಲ್ಲ.

ವಿಕ್ಕಿ ಕೌಶಲ್ ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾ ''ಸ್ಯಾಮ್ ಬಹದ್ದೂರ್'' ಮೂಲಕ ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿದ್ದಾರೆ. ದೇಶಭಕ್ತಿ ಸಿನಿಮಾ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಹೊರಟಿದ್ದಾರೆ. ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿರುವ ನಟ, ಪ್ರಚಾರದಲ್ಲೂ ಸಂಪೂರ್ಣ ಎಫರ್ಟ್ ಹಾಕುತ್ತಿದ್ದಾರೆ.

ಇತ್ತೀಚೆಗಷ್ಟೇ ದೆಹಲಿಯಲ್ಲಿ ಸ್ಯಾಮ್ ಬಹದ್ದೂರ್ ಚಿತ್ರದ ಟ್ರೇಲರ್ ಅನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಾಯಿತು. ಸ್ಯಾಮ್ ಬಹದ್ದೂರ್ ಟ್ರೇಲರ್​​ ಸಿನಿಪ್ರಿಯರ ಗಮನ ಸೆಳೆದಿದೆ. ಇದೀಗ ನಾಯಕ ನಟ ವಿಕ್ಕಿ ಕೌಶಲ್ ತಮ್ಮ ಕೆಲ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇವುಗಳನ್ನು ನೋಡಿದ್ರೆ ಯಾರೂ ಕೂಡ ಹುಬ್ಬೇರಿಸಬಹುದು ಎಂಬಂತಿದೆ. ಅಪಾಯಕಾರಿ ದೃಶ್ಯಗಳು ಈ ವಿಡಿಯೋದಲ್ಲಿದೆ.

ಇದನ್ನೂ ಓದಿ:ಟೈಗರ್ vs ಪಠಾಣ್: ಎಸ್​ಆರ್​ಕೆ ಜೊತೆಗಿನ ಮುಂದಿನ ಸಿನಿಮಾ ಬಗ್ಗೆ ಸಲ್ಮಾನ್​ ಖಾನ್ ಹೇಳಿದ್ದಿಷ್ಟು

ಇತ್ತೀಚೆಗೆ ವಿಕ್ಕಿ ಕೌಶಲ್ ಅವರು ಭಾರತದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್​ ಶಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ವಿಕ್ಕಿ ಜೊತೆಗೆ ಸಾನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್, ನಿರ್ದೇಶಕಿ ಮೇಘನಾ ಗುಲ್ಜಾರ್ ಸೇರಿದಂತೆ ಚಿತ್ರತಂಡ ಉಪಸ್ಥಿತರಿದ್ದರು. ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಜೊತೆ ಸೇರಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು. ಟ್ರೇಲರ್​ ಪ್ರೇಕ್ಷಕರ ಗಮನ ಸೆಳೆದಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಿದೆ.

ಇದನ್ನೂ ಓದಿ:'ಸ್ಯಾಮ್ ಬಹದ್ದೂರ್' ಟ್ರೇಲರ್ ಬಿಡುಗಡೆ​ ಸಮಾರಂಭದಲ್ಲಿ ಭೂಸೇನಾ ಮುಖ್ಯಸ್ಥ ಜ.ಮನೋಜ್ ಪಾಂಡೆ ಭಾಗಿ- ವಿಡಿಯೋ

ವಿಡಿಯೋ, ಫೋಟೋಗಳನ್ನು ಹಂಚಿಕೊಂಡ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ಕಿ ಕೌಶಲ್‌, ''ಸ್ಯಾಮ್ ಬಹದ್ದೂರ್ ಟ್ರೇಲರ್ ಬಿಡುಗಡೆಗಾಗಿ ದೆಹಲಿಗೆ ಭೇಟಿ ಕೊಟ್ಟ ಸಂದರ್ಭ '6 ಸಿಖ್ ರೆಜಿಮೆಂಟ್‌'ನಿಂದ ನನಗೆ ಆತ್ಮೀಯ ಸ್ವಾಗತ ಸಿಕ್ಕಿತು ಎಂದು ನಾನೀಗ ಹೇಳಲೇಬೇಕು. 2018 ರಲ್ಲಿ, ನಾವು ಉರಿ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು, '7 ಸಿಖ್ ರೆಜಿಮೆಂಟ್‌'ನಿಂದ ತರಬೇತಿ ಪಡೆದಿದ್ದೆ. ಅಂದಿನ ತರಬೇತಿ ನೆನಪಾಯಿತು. ನಿಜವಾದ ಹೀರೋಗಳು, ಫೀಲ್ಸ್ ಗ್ರೇಟ್''​ ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details