ಕರ್ನಾಟಕ

karnataka

ETV Bharat / entertainment

ವಿಕ್ಕಿ ಕೌಶಲ್​ ನಟನೆಯ 'ಮಸಾನ್‌' ಚಿತ್ರಕ್ಕೆ ಎಂಟು ವರ್ಷ: ಪೋಸ್ಟ್​ ಹಂಚಿಕೊಂಡ ನಟ - ಈಟಿವಿ ಭಾರತ ಕನ್ನಡ

Masaan: ವಿಕ್ಕಿ ಕೌಶಲ್​ ನಟನೆಯ 'ಮಸಾನ್‌' ಚಿತ್ರ ಇಂದಿಗೆ ಎಂಟು ವರ್ಷ ಪೂರೈಸಿದೆ.

Vicky Kaushal
ವಿಕ್ಕಿ ಕೌಶಲ್​

By

Published : Jul 24, 2023, 9:49 PM IST

ವಿಕ್ಕಿ ಕೌಶಲ್​ ಬಾಲಿವುಡ್​ನ ಬಹುಬೇಡಿಕೆಯ ನಟ. ಇವರ ನಟನೆಯ 'ಮಸಾನ್‌' ಚಿತ್ರ ಇಂದಿಗೆ ಎಂಟು ವರ್ಷ ಪೂರೈಸಿದೆ. ಈ ವಿಚಾರವನ್ನು ಹಂಚಿಕೊಳ್ಳಲು ನಟ ಸೋಷಿಯಲ್​ ಮೀಡಿಯಾವನ್ನು ಬಳಸಿಕೊಂಡರು. ಮಸಾನ್​ನಲ್ಲಿ ವಿಕ್ಕಿ ಕೌಶಲ್​ ನಾಯಕನಾಗಿ ನಟಿಸಿದ್ದಾರೆ. ರಿಚಾ ಚಡ್ಡಾ, ಶ್ವೇತಾ ತ್ರಿಪಾಠಿ ಮತ್ತು ಸಂಜಯ್ ಮಿಶ್ರಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇವರೆಲ್ಲರ ಅಭಿನಯ ಹಾಗೂ ಸಿನಿಮಾ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದಿದೆ. 'ಮಸಾನ್' ನೀರಜ್ ಘಯ್ವಾನ್ ನಿರ್ದೇಶನದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರವಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ವಿಕ್ಕಿ, "8 ವರ್ಷಗಳು!" ಕೆಂಪು ಬಲೂನ್​ ಎಮೋಜಿನೊಂದಿಗೆ ಶೀರ್ಷಿಕೆ ಬರೆದಿದ್ದಾರೆ. ವಿಕ್ಕಿ ಕೌಶಲ್, ಡೋಮ್ ಸಮುದಾಯದ ವಾರಣಾಸಿ ಯುವಕ ದೀಪಕ್ ಕುಮಾರ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಕುಟುಂಬವು ಸ್ಮಶಾನ ಘಾಟ್‌ಗಳಲ್ಲಿ ಕೆಲಸ ಮಾಡುತ್ತಾರೆ. ಮಸಾನ್​ 8 ವರ್ಷಗಳ ಅದ್ಭುತ ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿದೆ. ಹಂಚಿಕೊಂಡಿರುವ ಪೋಸ್ಟರ್​ನಲ್ಲಿ ವಿಕ್ಕಿ ಘಾಟ್​ನಲ್ಲಿ ನಿಂತಿದ್ದಾನೆ. ಉರಿಯುತ್ತಿರುವ ಚಿತೆಯತ್ತ ಕಾತುರದಿಂದ ನೋಡುತ್ತಿದ್ದಾನೆ.

ಇದನ್ನೂ ಓದಿ:Katrina Kaif: ಪ್ರವಾಸ ಮುಗಿಸಿ ಹಿಂತಿರುಗಿದ ಕತ್ರಿನಾ ಕೈಫ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

ಅವರು ಚಿತ್ರವನ್ನು ಪೋಸ್ಟ್​ ಮಾಡುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್​ ವಿಭಾಗಕ್ಕೆ ಮುಗಿಬಿದ್ದರು. ನೆಟ್ಟಿಗರೊಬ್ಬರು, "ನಿಮಗೆ ಅರ್ಹವಾದುದನ್ನು ಪಡೆಯಲು 8 ವರ್ಷಗಳ ಕಾಲ ಶ್ರಮಿಸಿದ್ದಕ್ಕಾಗಿ ಅಭಿನಂದನೆಗಳು ವಿಕ್ಕಿ. ನೀವು ನನ್ನ ಸೂಪರ್​ಸ್ಟಾರ್​" ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, "ನಾನು ನಿನ್ನೆ ಈ ಚಲನಚಿತ್ರವನ್ನು ವೀಕ್ಷಿಸಿದ್ದೇನೆ. ಇದು ನಿಜವಾಗಿಯೂ ಅದ್ಭುತವಾಗಿದೆ ಮತ್ತು ವಾಸ್ತವವನ್ನು ಆಧರಿಸಿದೆ. ಅದನ್ನು ಮುಂದುವರಿಸಿ ವಿಕ್ಕಿ" ಎಂದು ಬರೆದಿದ್ದಾರೆ. ಅಭಿಮಾನಿಯೊಬ್ಬರು, "ಮಸಾನ್ ಅದ್ಭುತ ಚಿತ್ರ" ಎಂದಿದ್ದಾರೆ. ಮತ್ತೊಬ್ಬರು, "ಮೆಚ್ಚಿನ ಚಲನಚಿತ್ರ" ಎಂದು ಬರೆದಿದ್ದಾರೆ. ಇತರರು ಕೆಂಪು ಎಮೋಜಿನೊಂದಿಗೆ ಕಾಮೆಂಟ್​ ವಿಭಾಗವನ್ನು ತುಂಬಿದ್ದಾರೆ.

ವಿಕ್ಕಿ ಕೌಶಲ್ ಸದ್ಯ ತಮ್ಮ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ. ಜೂನ್​​ 2ರಂದು ಬಿಡುಗಡೆಯಾದ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ. ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ತಮ್ಮ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಬಯಸುವ ದಂಪತಿಗಳ ಕುರಿತಾಗಿದೆ. ಇನ್ನೂ ವಿಕ್ಕಿ, ಮೇಘನಾ ಗುಲ್ಜಾರ್ ಆ್ಯಕ್ಷನ್​ ಕಟ್​ ಹೇಳಿರುವ ಸ್ಯಾಮ್ ಬಹದ್ದೂರ್‌ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಇದು ಸ್ಯಾಮ್ ಮಾಣೆಕ್​ ಷಾ ಅವರ ಬಯೋಪಿಕ್. ಇದು ಡಿಸೆಂಬರ್​ 1ರಂದು ತೆರೆಕಾಣಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ:ಕತ್ರಿನಾ-ವಿಕ್ಕಿ ರೊಮ್ಯಾಂಟಿಕ್ ಫೋಟೋ; ಮೇಡ್​ ಫಾರ್ ಈಚ್​ ಅದರ್ ಎನ್ನುವಂತಿದೆ 'ವಿಕ್ಯಾಟ್'​ ಜೋಡಿ

ABOUT THE AUTHOR

...view details