ನಿನ್ನೆಯಷ್ಟೇ ತೆರೆಕಂಡಿರುವ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಸಿನಿಮಾ ನಟ ವಿಕ್ಕಿ ಕೌಶಲ್ ಸಾಮಾಜಿಕ ಜಾಲತಾಣದಲ್ಲಿ ಪತ್ನಿ, ನಟಿ ಕತ್ರಿನಾ ಕೈಫ್ ಮೇಲೆ ಪ್ರೀತಿಯ ಮಳೆಗರೆದಿದ್ದಾರೆ. ನಟಿ ಕತ್ರಿನಾ ಕೈಫ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತಿ ವಿಕ್ಕಿ ಕೌಶಲ್ ಅವರ ಜರಾ ಹಟ್ಕೆ ಜರಾ ಬಚ್ಕೆ ಚಿತ್ರದ ಫೋಟೋ ಹಂಚಿಕೊಂಡಿದ್ದರು. ಸಿನಿಮಾ ಯಶಸ್ಸಿಗೆ ಶುಭ ಹಾರೈಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ವಿಕ್ಕಿ ಅವರು ಚಿತ್ರದ ಒಂದು ಮಧುರವಾದ ಹಾಡಿನ ಸಾಹಿತ್ಯವನ್ನು ಪತ್ನಿಗೆ ಅರ್ಪಿಸಿದ್ದಾರೆ. ಕತ್ರಿನಾ ಕೈಫ್ ಸ್ಟೋರಿಯ ಸ್ಕ್ರೀನ್ ಶಾಟ್ ಹಂಚಿಕೊಳ್ಳುತ್ತಾ, ತು ಹೈ ತೊ ಮುಜೆ ಔರ್ ಕ್ಯಾ ಚಾಹಿಯೇ ಎಂದು ವಿಕ್ಕಿ ಬರೆದುಕೊಂಡಿದ್ದಾರೆ.
ನಟಿ ಕತ್ರಿನಾ ಕೈಫ್ ನಿನ್ನೆ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪತಿ ವಿಕ್ಕಿ ನಟನೆಯ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. "ಈಗ ಚಿತ್ರಮಂದಿರಗಳಲ್ಲಿ" ಎಂಬ ಶೀರ್ಷಿಕೆ ಕೂಡ ಕೊಟ್ಟಿದ್ದರು. ನಟ ವಿಕ್ಕಿ ಕೌಶಲ್, ಕತ್ರಿನಾ ಅವರ ಇನ್ಸ್ಟಾ ಸ್ಟೋರಿಯನ್ನು ಮರು ಹಂಚಿಕೊಂಡರು ಮತ್ತು ಚಿತ್ರದ ಫಿರ್ ಔರ್ ಕ್ಯಾ ಚಾಹಿಯೇ ಹಾಡಿನ ಸಾಹಿತ್ಯವನ್ನು ಆ ಸ್ಟೋರಿಯಲ್ಲಿ ಬರೆದುಕೊಂಡರು. "ತು ಹೈ ತೊ ಮುಜೆ ಔರ್ ಕ್ಯಾ ಚಾಹಿಯೇ'' (ನೀವು ಇದ್ದರೆ ನನಗೆ ಇನ್ನೇನು ಬೇಕು) ಎಂದು ಅವರು ತಮ್ಮ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಪತ್ನಿ ಬಗೆಗಿನ ನಟನ ಮನದಾಳದ ಮಾತು ಅಭಿಮಾನಿಗಳು, ನೆಟಿಜನ್‌ಗಳ ಹೃದಯವನ್ನು ಕರಗಿಸಿದೆ.
ವಿಕ್ಕಿ ಕೌಶಲ್ ಈ ಜರಾ ಹಟ್ಕೆ ಜರಾ ಬಚ್ಕೆ ಚಿತ್ರದಲ್ಲಿ ಸಾರಾ ಅಲಿ ಖಾನ್ ಜೊತೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ. ಈ ಇಬ್ಬರು ತಾರೆಯರು ಲಕ್ನೋ, ದೆಹಲಿ ಮತ್ತು ಇಂದೋರ್, ಹೈದರಾಬಾದ್ ಸೇರಿದಂತೆ ಹಲವೆಡೆ ತಮ್ಮ ಅಭಿಮಾನಿಗಳನ್ನು ಭೇಟಿ ಆಗಿದ್ದಾರೆ. ಚಲನಚಿತ್ರದ ಪ್ರಚಾರವನ್ನು ದೇಶಾದ್ಯಂತ ಮುಂದುವರಿಸಿದ್ದಾರೆ.