ಕರ್ನಾಟಕ

karnataka

ETV Bharat / entertainment

ಸಿನಿಮಾ ನಟಿಯಾದ ದಂತಚೋರ ವೀರಪ್ಪನ್​ ಮಗಳು.. 'ಮಾವೀರನ್​ ಪಿಳ್ಳೈ' ಮೂಲಕ ಅದೃಷ್ಟ ಪರೀಕ್ಷೆ - ಈಟಿವಿ ಭಾರತ್​ ಕನ್ನಡ

ರಾಜಕೀಯದಲ್ಲಿ ಸಕ್ರಿಯರಾಗಿದ್ದ ವಿಜಯಲಕ್ಷ್ಮೀ ಇದೀಗ ಸಿನಿಮಾ ನಟಿಯಾಗಿದ್ದಾರೆ. ಕುಡಿತದ ದುಷ್ಪರಿಣಾಮ ಬೀರುವ ಕಥಾ ಹಂದರದಲ್ಲಿ ಅವರು ನಟಿಸುತ್ತಿದ್ದಾರೆ

veerappan-second-daughter-vijayalakshmi-debute-film-in-tollywood
veerappan-second-daughter-vijayalakshmi-debute-film-in-tollywood

By

Published : Mar 25, 2023, 5:36 PM IST

ಕಳೆದೆರಡು ವರ್ಷಗಳ ಹಿಂದೆ ದಂತಚೋರ ವೀರಪ್ಪನ್​ ಎರಡನೇ ಮಗಳು ವಿಜಯಲಕ್ಷ್ಮೀ ಅಧಿಕೃತವಾಗಿ ಬಿಜೆಪಿ ಸೇರುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದ್ದರು. ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆಯಾಗಿರುವ ಇವರ ಅಕ್ಕ ವಿಜಯಲಕ್ಷ್ಮೀ ಸಕ್ರಿಯರಾಗಿದ್ದಾರೆ. ಚುನಾವಣೆಯಿಂದ ಮನರಂಜಾನಾ ಕ್ಷೇತ್ರದತ್ತ ಹೊರಳಿರುವ ವಿಜಯಲಕ್ಷ್ಮೀ ಇದೀಗ ಸಿನಿಮಾ ನಟಿಯಾಗುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'ಮಾವೀರನ್​ ಪಿಳ್ಳೈ' ಚಿತ್ರದಲ್ಲಿ ನಾಯಕಿಯಾಗಿ ಈಕೆ ಮಿಂಚಿದ್ದು, ಈ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ.

'ಮಾವೀರನ್​ ಪಿಳ್ಳೈ' ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ಕುಡಿತದಿಂದ ಕುಟುಂಬದ ಮೇಲೆ ಉಂಟಾಗುವ ದುಷ್ಪರಿಣಾದ ಕುರಿತು ಜಾಗೃತಿ ಮೂಡಿಸುವ ಕಥಾ ಹಂದವರನ್ನು ಈ ಸಿನಿಮಾ ಹೊಂದಿದೆ.

ಬಾಲ್ಯದ ಕನಸು ನನಸು: ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿರುವ ವಿಜಯಲಕ್ಷ್ಮೀ ಅವರಿಗೆ ನಟಿಸುವ ಅಭಿಲಾಷೆ ಬಾಲ್ಯದಿಂದಲೇ ಇತ್ತಂತೆ. ಇದೇ ಕಾರಣದಿಂದ ಈ ಅವಕಾಶ ಬಂದಾಕ್ಷಣ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ. ಕುಡಿತದಿಂದ ಮಹಿಳೆಯರು ಅನುಭವಿಸುವ ಕಷ್ಟಗಳ ಕುರಿತು ಈ ಸಿನಿಮಾ ಬೆಳಕು ಚೆಲ್ಲುತ್ತದೆ ಎಂದು ವಿಜಯಲಕ್ಷ್ಮೀ ತಿಳಿಸಿದ್ದಾರೆ.

ದಂತಚೋರ ವೀರಪ್ಪನ್​ ಮಗಳು ಚಿತ್ರರಂಗಕ್ಕೆ ಬಂದಿರುವುದು ಸಂತಸ. ಸಿನಿಮಾದಲ್ಲಿ ಯಾರು ನಟಿಸುತ್ತಾರೆ, ಯಾರು ನಿರ್ದೇಶಿಸುತ್ತಾರೆ ಎಂಬುದು ಮುಖ್ಯವಾಗುವುದಿಲ್ಲ. ಚಿತ್ರದ ಯಶಸ್ಸಿಗೆ ಕಾರಣ ಚಿತ್ರಕಥೆ. ಸಿನಿಮಾ ಕ್ಷೇತ್ರ ಕಲೆ ಹೊಂದಿರುವ ಪ್ರತಿಯೊಬ್ಬರನ್ನು ಕೈ ಬೀಸಿ ಕರೆಯುತ್ತದೆ. ಈ ಸಿನಿಮಾ ರಂಗದಲ್ಲಿ ಮುಖ್ಯಮಂತ್ರಿಗಳ ಮಗನೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿಯೇ ಇದೀಗ ವೀರಪ್ಪನ್​ ಮಗಳು ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಿರುವ ವಿಜಯಲಕ್ಷ್ಮೀ ಅವರಿಗೆ ತುಂಬು ಹೃದಯದಿಂದ ಸ್ವಾಗತಿಸಿಕೊಳ್ಳುತ್ತಿದ್ದೇವೆ ಎಂದು ಚಿತ್ರದ ನಿರ್ದೇಶಕ ಪೇರರಸು ತಿಳಿಸಿದರು.

ಇಂದು ಅನೇಕ ಯುವ ಜನತೆ ಕೂಡ ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ಹಿನ್ನಲೆ ಇದರ ಕುರಿತು ಎಚ್ಚರಿಕೆಯನ್ನು ನೀಡುವ ಅಗತ್ಯ ಇದೆ. ಇದೇ ಕಾರಣಕ್ಕೆ ಕುಡಿತದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರಾಯಂ ಅಭಯಂ ಹಾಡು ಮಾಡಲಾಗಿದೆ. ಈ ಹಾಡನ್ನು ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಕುಡಿತದಿಂದ ಪ್ರತಿ ದಿನ ನೂರಾರು ಜನ ಸಾಯುತ್ತಿದ್ದಾರೆ. ಆನ್​ಲೈನ್​ ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು. ಕುಟುಂಬ ನಿರ್ವಹಣೆಯಲ್ಲಿ ಸಾರಾಯಿ ಸಮಸ್ಯೆ ಬಲು ದೊಡ್ಡದು. ಇದರಿಂದ ಅನೇಕ ಕುಟುಂಬಗಳು ಹಾಳಾಗಿವೆ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ತಮಿಳಿನಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದ್ದು, ವಿಜಯಲಕ್ಷ್ಮಿಗೆ ನಟ ರಾಧರವಿ ಅವರು ಜೊತೆಯಾಗಿದ್ದಾರೆ. ಚಿತ್ರ ಕಥೆಯನ್ನು ಉಲಯಮಣಿ ಬರೆದಿದ್ದಾರೆ. ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್​ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಸಂಕಲನವನ್ನು ಜ್ಯೂಲಿಯನ್​ ಮಾಡಿದ್ದಾರೆ. ಕೆಎನ್​ಆರ್​ ಬ್ಯಾನರ್​ ಅಡಿ ಈ ಚಿತ್ರ ನಿರ್ಮಾಣ ಆಗುತ್ತಿದೆ.

ಇದನ್ನೂ ಓದಿ: ಈ ನಟನ ಹೆಸರು ಹೇಳುತ್ತಿದ್ದಂತೆ ನಾಚಿ ನೀರಾದ ಅನನ್ಯಾ ಪಾಂಡೆ

ABOUT THE AUTHOR

...view details