ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ "ವೇದತ್ ಮರಾತೆ ವೀರ್ ದೌಡ್ಲೆ ಸಾತ್" (Vedat Marathe Veer Daudle Saat) ಸಿನಿಮಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೀವ ತುಂಬುತ್ತಿದ್ದಾರೆ. ಮೊದಲ ಶೆಡ್ಯೂಲ್ನ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಚಿತ್ರೀಕರಣ ಸೋಮವಾರ ಪ್ರಾರಂಭವಾಗಿದೆ.
ಈ ಕುರಿತು ಅಕ್ಷಯ್ ಕುಮಾರ್ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅವರು ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವನ್ನು ನೋಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪಾತ್ರದಲ್ಲಿ ನಟಿಸಲು ನನಗೆ ಗೌರವವಿದೆ ಎಂದು ಈ ಫೋಟೋಗೆ ಹಿಂದಿಯಲ್ಲಿ ಶೀರ್ಷಿಕೆ ಬರೆದಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ಶೂಟಿಂಗ್ ವಿಡಿಯೋ ಶೇರ್ ಮಾಡಿದ್ದು, ಜೈ ಶಿವಾಜಿ ಎಂದು ಬೆರೆದಿದ್ದಾರೆ.