ಕರ್ನಾಟಕ

karnataka

ETV Bharat / entertainment

ವರುಣ್ ಧವನ್-ಕೀರ್ತಿ ಸುರೇಶ್​​ ಸ್ಕ್ರೀನ್​ ಶೇರ್; ಅಟ್ಲೀ ಸಿನಿಮಾ ಮುಹೂರ್ತದ ವಿಡಿಯೋ - ವರುಣ್ ಧವನ್

'ವಿಡಿ 18' ಮುಹೂರ್ತ ಸಮಾರಂಭದ ವಿಡಿಯೋ ಅನಾವರಣಗೊಂಡಿದೆ. ಶೀಘ್ರದಲ್ಲೇ ಅಧಿಕೃತ ಶೀರ್ಷಿಕೆ ಘೋಷಿಸಲಿದೆ ಚಿತ್ರತಂಡ.

VD 18 muhurata program
ವಿಡಿ 18 ಮುಹೂರ್ತ ಸಮಾರಂಭ

By ETV Bharat Karnataka Team

Published : Jan 14, 2024, 7:27 PM IST

ತಮ್ಮ ಮುಂಬರುವ ಆ್ಯಕ್ಷನ್ ಸಿನಿಮಾ ''ವಿಡಿ 18''ಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಾಲಿವುಡ್ ನಟ ವರುಣ್ ಧವನ್, ಮುಹೂರ್ತ ಪೂಜೆಯ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಾರೆ. 'ಬವಾಲ್' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವ ವರುಣ್ ಧವನ್ ಸದ್ಯ ತಮ್ಮ ಮುಂದಿನ ಪ್ರಾಜೆಕ್ಟ್​ ಕಡೆ ಗಮನ ಹರಿಸಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳನ್ನು ಹಂಚಿಕೊಂಡ ವರುಣ್, ಶೀಘ್ರದಲ್ಲೇ ಸಿನಿಮಾದ ಅಧಿಕೃತ ಶೀರ್ಷಿಕೆಯನ್ನು ಪ್ರಕಟಿಸಲಾಗುವುದು ಎಂದು ಸಹ ತಿಳಿಸಿದ್ದಾರೆ. 'ವಿಡಿ 18' ಮುಹೂರ್ತ ವಿಡಿಯೋ ಯೂಟ್ಯೂಬ್​ನಲ್ಲಿ ಲಭ್ಯವಿದೆ.

ಆ್ಯಕ್ಷನ್ ಪ್ಯಾಕ್ಡ್ ಎಂಟರ್‌ಟೈನರ್ ಸಿನಿಮಾವನ್ನು ತಾತ್ಕಾಲಿಕವಾಗಿ 'ವಿಡಿ 18' ಎಂದು ಹೆಸರಿಸಲಾಗಿದೆ. ಇತ್ತೀಚಿನ ಸೂಪರ್ ಹಿಟ್ 'ಜವಾನ್‌'ಗೆ ಹೆಸರುವಾಸಿಯಾಗಿರುವ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಅಟ್ಲೀ ಕುಮಾರ್​ ಮತ್ತು ವರುಣ್​ ಧವನ್​ ಜೊತೆಯಾಗಿ ಕೆಲಸ ಮಾಡುತ್ತಿರುವ ಚೊಚ್ಚಲ ಚಿತ್ರವಿದು. ಇದರಲ್ಲಿ ಕೀರ್ತಿ ಸುರೇಶ್ ಮತ್ತು ವಾಮಿಕಾ ಗಬ್ಬಿ ಜೊತೆ ವರುಣ್​ ಸ್ಕ್ರೀನ್​ ಶೇರ್ ಮಾಡಲಿದ್ದಾರೆ. ಸದ್ಯ ಅಭಿಮಾನಿಗಳಿಗಾಗಿ ಮುಹೂರ್ತ ಪೂಜೆಯ ವಿಡಿಯೋ ಹಂಚಿಕೊಳ್ಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಅಲ್ಲದೇ, ಶೀಘ್ರದಲ್ಲೇ ಅಧಿಕೃತ ಶೀರ್ಷಿಕೆಯನ್ನು ಬಹಿರಂಗಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಮಕರ ಸಂಕ್ರಾಂತಿ ಶುಭ ಸಂದರ್ಭದಲ್ಲಿ ನಿರ್ಮಾಪಕರು ವಿಡಿಯೋ ಹಂಚಿಕೊಂಡಿದ್ದಾರೆ. ದೃಶ್ಯಾವಳಿಗಳು ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿರುವ ಸ್ಥಳವನ್ನು ಪ್ರದರ್ಶಿಸಿದೆ. ಚಿತ್ರತಂಡದವರನ್ನೂ ಕಾಣಬಹುದು. ನಿರ್ಮಾಪಕರಾದ ಅಟ್ಲೀ ಮತ್ತು ಮುರಾದ್ ಖೇತಾನಿ ಕೂಡ ಪೂಜಾ ವಿಧಿವಿಧಾನದಲ್ಲಿ ಭಾಗಿಯಾಗಿದ್ದರು. ಈ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸುತ್ತಿರುವ ಸೌತ್​ ಸ್ಟಾರ್ ನಟಿ ಕೀರ್ತಿ ಸುರೇಶ್, ಹಳದಿ ಬಣ್ಣದ ಸೀರೆಯಲ್ಲಿ ಬೆರಗುಗೊಳಿಸುವ ನೋಟ ಬೀರಿದ್ದಾರೆ. ತಿಳಿ ನೀಲಿ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದ ವರುಣ್ ಧವನ್ ಅತಿಥಿಗಳನ್ನು ಬಹಳ ಉತ್ಸಾಹದಿಂದ ಸ್ವಾಗತಿಸಿರೋದನ್ನು ವಿಡಿಯೋದಲ್ಲಿ ಕಾಣಬಹುದು. ಇತ್ತೀಚೆಗೆ ಖುಫಿಯಾ ಮತ್ತು ಜುಬ್ಲಿ ಅಂತಹ ಪ್ರಾಜೆಕ್ಟ್‌ಗಳ ಮೂಲಕ ಮನ್ನಣೆ ಗಳಿಸಿರುವ ವಾಮಿಕಾ ಗಬ್ಬಿ ಕೂಡ ಎಥ್ನಿಕ್ ಬ್ಲೂ ಸೂಟ್‌ನಲ್ಲಿ ಕಂಗೊಳಿಸಿದ್ದಾರೆ.

ಇದನ್ನೂ ಓದಿ:ದೈವ ಸನ್ನಿಧಿಯಲ್ಲಿ 'ಕಾಂತಾರ' ನಟ: ಕೋಲದ ವಿಡಿಯೋ ಹಂಚಿಕೊಂಡ ರಿಷಬ್​ ಶೆಟ್ಟಿ

ವಿಡಿಯೋ ಕೊನೆಯಲ್ಲಿ, ಚಿತ್ರೀಕರಣದ ಕೆಲ ತೆರೆಮರೆಯ ದೃಶ್ಯಗಳನ್ನೂ ತೋರಿಸಲಾಗಿದೆ. ಎ. ಕಲೀಸ್ವರನ್​​ (ಕಲೀಸ್​) ನಿರ್ದೇಶನವಿರಲಿದೆ. ಮುರಾದ್ ಖೇತಾನಿ, ಅಟ್ಲೀ - ಪ್ರಿಯಾ ಅಟ್ಲೀ ದಂಪತಿ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಾಣದ ಈ ಚಿತ್ರವು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಿನಿಮಾ ಆಕರ್ಷಕ ಕಥಾಹಂದರ, ಅದ್ಭುತ ಸಾಹಸ ದೃಶ್ಯಗಳನ್ನು ಹೊಂದಲಿದೆ ಎಂದು ವರದಿಯಾಗಿದೆ. 'ವಿಡಿ 18' ಸದ್ಯ ನಿರ್ಮಾಣ ಹಂತದಲ್ಲಿದೆ. ಜಿಯೋ ಸ್ಟುಡಿಯೋಸ್ ಮತ್ತು ಅಟ್ಲೀ ಅವರು ಆ್ಯಪಲ್ ಸ್ಟುಡಿಯೋಸ್ (ಅಟ್ಲೀ) ಮತ್ತು ಸಿನಿ1 ಸ್ಟುಡಿಯೋಗಳ ಸಹಯೋಗದೊಂದಿಗೆ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಅಧಿಕೃತ ಶೀರ್ಷಿಕೆಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ:ಪೌರಕಾರ್ಮಿಕರೊಂದಿಗೆ ಸಂಕ್ರಾಂತಿ ಆಚರಿಸಿದ ಪ್ರೇಮ, ರಾಗಿಣಿ ದ್ವಿವೇದಿ: ಫೋಟೋಗಳು

ABOUT THE AUTHOR

...view details