ಬಾಲಿವುಡ್ ಚಿತ್ರರಂಗದ ನಟರಾದ ಜಾಹ್ನವಿ ಕಪೂರ್, ಖುಷಿ ಕಪೂರ್ ಮತ್ತು ವರುಣ್ ಧವನ್ ದೀಪಾವಳಿ ಸಂಭ್ರಮದಲ್ಲಿದ್ದಾರೆ. ದಿವಂಗತ ಲೇಡಿ ಸೂಪರ್ಸ್ಟಾರ್ ಮಕ್ಕಳು ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕರಣ್ ಜೋಹರ್ ಅವರ ಕಚೇರಿಯಲ್ಲಿ ಆಯೋಜಿಸಿದ್ದ ದೀಪಾವಳಿ ಪೂಜೆಯಲ್ಲಿ ಸ್ಟಾರ್ ಕಿಡ್ಸ್ ಮಿಂಚಿದರು. ಮತ್ತೊಂದೆಡೆ, ವರುಣ್ ಧವನ್ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಅದಕ್ಕಾಗಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಲೆಹಂಗಾದಲ್ಲಿ ಕಂಗೊಳಿಸಿದ ಖುಷಿ, ಜಾನು :ಸಹೋದರಿಯರಾದ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಧನ್ತೇರಸ್ ಪೂಜೆಗಾಗಿ ಮುಂಬೈನಲ್ಲಿರುವ ಕರಣ್ ಜೋಹರ್ ಅವರ ಕಚೇರಿಗೆ ಭೇಟಿ ನೀಡಿದರು. ಈ ಹಿಂದೆ ತಿರುಪತಿ ಪ್ರವಾಸದ ವೇಳೆ ಧರಿಸಿದ್ದ ಲೆಹಂಗಾವನ್ನು ಪೂಜೆಗಾಗಿ ಆಯ್ಕೆ ಮಾಡಿಕೊಂಡರು. ದೀಪಾವಳಿಯನ್ನು ಸಂಭ್ರಮಿಸುವಾಗ ಜಾಹ್ನವಿ ಮತ್ತು ಖುಷಿ ಸಾಂಪ್ರದಾಯಿಕ ಉಡುಗೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಫ್ಯಾನ್ಸ್ಗೆ ಹಬ್ಬದ ಶುಭಕೋರಿದ ವರುಣ್ : ಬಾಲಿವುಡ್ ನಟ ವರುಣ್ ಧವನ್ ತಮ್ಮ ಹಿಂದಿನ ಸಾಧನೆಗಳನ್ನು ಮೆಲುಕು ಹಾಕುವುದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಕಚೇರಿಯ ಒಂದು ನೋಟವನ್ನು ಹಂಚಿಕೊಂಡಿರುವ ಅವರು, "ಕೆಲವು ಹಳೆಯ ನೆನಪುಗಳ ಮೆಲುಕು ಮತ್ತು ಇನ್ನೂ ಹೊಸತನ್ನು ಮಾಡುತ್ತೇನೆಂದು ಭರವಸೆ ನೀಡುತ್ತೇನೆ. ಹ್ಯಾಪಿ ದೀಪಾವಳಿ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:'ಸ್ಯಾಮ್ ಬಹದ್ದೂರ್': ಭಾರತೀಯ ಸೇನಾ ಕ್ಯಾಂಪ್ನಲ್ಲಿ ವಿಕ್ಕಿ ಕೌಶಲ್ - ತರಬೇತಿಯ ವಿಡಿಯೋ ನೋಡಿ