ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ಬವಾಲ್ ಈ ವಾರ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಪ್ರಮೋಶನ್ ಕೆಲಸ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿದೆ. ಚಿತ್ರದ ಪ್ರಮುಖ ನಟರು ಸಹ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮಂಗಳವಾರದಂದು ಬಾವಾಲ್ ಸ್ಪೆಷಲ್ ಸ್ಕ್ರೀನಿಂಗ್ ನಡೆದಿದ್ದು, ಬಾಲಿವುಡ್ ಸೆಲೆಬ್ರಿಟಿಗಳು ಈವೆಂಟ್ಗೆ ಸಾಕ್ಷಿಯಾಗಿದ್ದರು.
ನಟರು ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇಂದು ಹಲವು ರೊಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದ್ರೀಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿ, ಮಿಶ್ರ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ. ಸಿನಿಮಾ ಪ್ರಚಾರ ಫೋಟೋಶೂಟ್ ವೇಳೆ ವರುಣ್ ಅವರು ಜಾನ್ವಿ ಅವರ ಕಿವಿ ಕಚ್ಚಿದ್ದು, ಈ ಫೋಟೋಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡಿವೆ.
ವೈರಲ್ ಆಗುತ್ತಿರುವ ಫೋಟೋದಲ್ಲಿ ಬಾಲಿವುಡ್ ನಟ ವರುಣ್ ಧವನ್, ಬಾಲಿವುಡ್ ಬೆಡಗಿ ಜಾನ್ವಿ ಅವರನ್ನು ಹಿಡಿದುಕೊಂಡು ಅವರ ಕಿವಿ ಕಚ್ಚುತ್ತಿರುವಂತೆ ಕಂಡುಬಂದಿದ್ದಾರೆ. ಈ ಇಬ್ಬರೂ ತಾರೆಯರು ಮ್ಯಾಚಿಂಗ್ ಬ್ಲ್ಯಾಕ್ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಒಂದು ಗುಂಪು ನಟರ ಈ ವರ್ತನೆಯನ್ನು ಟೀಕಿಸಿದ್ದರೆ, ಅಭಿಮಾನಿಗಳು ಬೆಂಬಲಕ್ಕೆ ಬಂದಿದ್ದಾರೆ.
ಫೋಟೋಗೆ ಪ್ರತಿಕ್ರಿಯಿಸಿದ ಬಳಕೆದಾರರು, "ವಿವಾಹಿತ ಪುರುಷ ಈ ರೀತಿ ವರ್ತಿಸಬಾರದು" ಎಂದು ಬರೆದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, "ಅವರು ಮದುವೆಯಾಗಿರುವ ಕಾರಣ ಜನರು ಇದನ್ನೆಲ್ಲಾ ಮಾಡಬಾರದು ಎಂದು ಏಕೆ ಹೇಳುತ್ತಿದ್ದಾರೆಂದು ನನಗೆ ತಿಳಿದಿಲ್ಲ, ಸಿಂಗಲ್ ಇದ್ದರೂ ಇದನ್ನೆಲ್ಲಾ ಮಾಡಬಾರದು" ಎಂದು ತಿಳಿಸಿದ್ದಾರೆ.