ವರುಣ್ ಧವನ್ ಬಾಲಿವುಡ್ ಚಿತ್ರರಂಗದ ಪ್ರತಿಭಾವಂತ ನಟ. ಅಭಿನಯ, ಉತ್ತಮ ನಡೆನುಡಿಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರೀಲ್ ಮತ್ತು ರಿಯಲ್ ಲೈಫ್ನಲ್ಲಿ ಕೂಲ್ ಸ್ಟೈಲ್ನಿಂದ ಫೇಮಸ್. ಆದ್ರೆ ಈ ಫಿಟ್ ನಟನ ಬಗ್ಗೆ ಶಾಕಿಂಗ್ ಸುದ್ದಿ ಹೊರಬಿದ್ದಿದ್ದು ಅಭಿಮಾನಿಗಳಿಗೆ ಆಘಾತವಾಗಿದೆ.
ವರುಣ್ 'ವೆಸ್ಟಿಬುಲರ್ ಹೈಪೋಫಂಕ್ಷನ್' ಸಮಸ್ಯೆಯ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅನಾರೋಗ್ಯ ಹಿನ್ನೆಲೆ ಸ್ಪಲ್ಪ ಸಮಯ ಕೆಲಸದಿಂದ ವಿರಾಮ ತೆಗೆದುಕೊಳ್ಳಬೇಕಾಯಿತು ಎಂದು ಮುಂಬೈನಲ್ಲಿ ನಡೆದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ವೆಸ್ಟಿಬುಲರ್ ಹೈಪೋಫಂಕ್ಷನ್ ಎಂದರೆ ಕಿವಿಗೆ ಸಂಬಂಧಿಸಿದ ಕಾಯಿಲೆ. ಸದ್ಯ ತಮ್ಮ ಭೇಡಿಯ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ.