ಕಿರುತೆರೆಯಲ್ಲೇ ಸಾಕಷ್ಟು ಜನಪ್ರಿಯತೆ ಸಂಪಾದಿಸಿ ಬಳಿಕ ಬೆಳ್ಳಿತೆರೆಗೆ ಬಂದ ಸಾಕಷ್ಟು ನಟ ನಟಿಯರು ಸಕ್ಸಸ್ ಕಂಡಿದ್ದಾರೆ. ಇದೀಗ ಸೂಪರ್ ಹಿಟ್ ಅಗ್ನಿಸಾಕ್ಷಿ ಹಾಗೂ ಸದ್ಯ ಕನ್ನಡಿಗರ ಮನೆ ಮಾತಾಗಿರುವ ಸೀತಾರಾಮ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಹೌದು, ನಟಿ ಬಣ್ಣ ಹಚ್ಚಲಿರುವ ಸಿನಿಮಾದ ಶೀರ್ಷಿಕೆ 'ಬಿಳಿ ಚುಕ್ಕಿ ಹಳ್ಳಿ ಹಕ್ಕಿ'.
'ಬಿಳಿ ಚುಕ್ಕಿ ಹಳ್ಳಿ ಹಕ್ಕಿ' ಶೂಟಿಂಗ್ ಶುರು ಸಿನಿಮಾದ ಮುಹೂರ್ತ ಸಮಾರಂಭ: ಹೌದು, ಕಿರುತೆರೆ ಲೋಕ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮೂಲಕ ಜನಪ್ರಿಯರಾಗಿರುವ ವೈಷ್ಣವಿ ಅವರು ’ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾ ಮೂಲಕ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ವೈಷ್ಣವಿ ಮುಖ್ಯಭೂಮಿಕೆಯಲ್ಲಿರೋ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಸಿದ್ಧಿ ವಿನಾಯಕ ದೇಗುಲದಲ್ಲಿ ನೆರವೇರಿದೆ. ವಿಟಿಲಿಗೋ ಸಮಸ್ಯೆ ಹೊಂದಿರುವ ಅನುಷಾ ಎಂಬುವವರು ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು, ಮತ್ತೋರ್ವ ವಿಟಿಲಿಗೋ ವ್ಯಕ್ತಿ ರವಿ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ತೊನ್ನು ಸಮಸ್ಯೆ ಸುತ್ತ ಸುತ್ತವ ಕಥೆ:ಮಹಿರ ಸಿನಿಮಾ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗಮನ ಸೆಳೆದ ಮಹೇಶ್ ಗೌಡ ಈ ಬಾರಿ ವಿಭಿನ್ನ ಬಗೆಯ ಕಥಾಹಂದರದೊಂದಿಗೆ ಬರುತ್ತಿದ್ದಾರೆ. ತೊನ್ನು (ವಿಟಿಲಿಗೋ) ಸಮಸ್ಯೆಯನ್ನು ಪ್ರಧಾನವಾಗಿಟ್ಟುಕೊಂಡು ’ಬಿಳಿ ಚುಕ್ಕಿ ಹಳ್ಳಿ ಹಕ್ಕಿ‘ ಎಂಬ ಚಿತ್ರ ಮಾಡಲಾಗುತ್ತಿದ್ದು, ಮಹೇಶ್ ಗೌಡ ನಟಿಸುವುದರ ಜೊತೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ.
ಸೀತಾರಾಮ ಸೀರಿಯಲ್ ಖ್ಯಾತಿಯ ವೈಷ್ಣವಿ ಗೌಡ ನಿರ್ದೇಶಕ ಮಹೇಶ್ ಗೌಡ ವಿಟಿಲಿಗೋ ಸಮಸ್ಯೆಗೆ ಕಾಮಿಡಿ ಹಾಗೂ ರೊಮ್ಯಾಂಟಿಕ್ ಟಚ್ ಕೊಟ್ಟು ಬಿಳಿ ಚುಕ್ಕಿ ಹಳ್ಳಿ ಹಕ್ಕಿ ಕಥೆ ರೂಪಿಸಿದ್ದಾರೆ. ಹೊನ್ನುಡಿ ಪ್ರೊಡಕ್ಷನ್ ಅಡಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಶಿವ ಎಂಬ ಪಾತ್ರಕ್ಕೆ ನಿರ್ದೇಶಕ ಮಹೇಶ್ ಗೌಡ ಜೀವ ತುಂಬುತ್ತಿದ್ದಾರೆ. ಮಹೇಶ್‌ಗೆ ಜೋಡಿಯಾಗಿ ಅಗ್ನಿಸಾಕ್ಷಿ ಸನ್ನಿಧಿ ಖ್ಯಾತಿಯ ವೈಷ್ಣವಿ ಹಳ್ಳಿ ಹುಡುಗಿಯಾಗಿ ಕವಿತಾ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:'ನನ್ನ ಬೆಳವಣಿಗೆಯಲ್ಲಿ ಮಾಧ್ಯಮದವರ ಪಾಲು ಸಾಕಷ್ಟಿದೆ': ಕ್ಷಮೆ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಶಿವನ ಸಮಸ್ಯೆ ಗೊತ್ತಿದ್ರೂ ಬಾಳ ಸಂಗಾತಿಯಾಗಿ ಕವಿತಾ ಬರುತ್ತಾರೆ. ಸಮಸ್ಯೆ ಗೊತ್ತಿದ್ದರೂ ಕವಿತಾ ತನ್ನನ್ನೇ ಯಾಕೆ ಮದುವೆ ಆಗಿದ್ದಾಳೆ ಅನ್ನೋ ಗೊಂದಲದಲ್ಲಿರೋ ನಾಯಕನ ಕಥೆ ಇದು. ಈ ಗೊಂದಲದ ಮಧ್ಯೆಯೇ ಸಾಗುವ ಒಂದು ಮುದ್ದಾದ ಲವ್ ಸ್ಟೋರಿ ಬಿಳಿ ಚುಕ್ಕಿ ಹಳ್ಳಿ ಹಕ್ಕಿ. ವರಮಹಾಲಕ್ಷ್ಮಿ ಆಶೀರ್ವಾದದೊಂದಿಗೆ ಇಂದಿನಿಂದ ಚಿತ್ರತಂಡ ಶೂಟಿಂಗ್ ಶುರು ಮಾಡಿದೆ. ಕಿರಣ್ ಸಿಎಚ್ಎಂ ಕ್ಯಾಮರಾ ವರ್ಕ್, ರಿಯೋ ಆಂಟೋನಿ ಸಂಗೀತ ಈ ಸಿನಿಮಾಕ್ಕಿದೆ. ಕೊಪ್ಪ, ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಸಿನಿಮಾ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.
ಇದನ್ನೂ ಓದಿ:Photos: ಹರ್ಷಿಕಾ ಪೂಣಚ್ಚ ಭುವನ್ ಪೊನ್ನಣ್ಣ ಕಲ್ಯಾಣ ಕ್ಯಾಮರಾದಲ್ಲಿ ಸೆರೆಯಾದ ಸುಮಧುರ ಕ್ಷಣಗಳು