ಕರ್ನಾಟಕ

karnataka

ETV Bharat / entertainment

'ದ ಜಡ್ಜ್​ಮೆಂಟ್' ಹೇಳೋದಕ್ಕೆ ಬರ್ತಾ ಇದ್ದಾರೆ ಸ್ಯಾಂಡಲ್​ವುಡ್ ಶೋ ಮ್ಯಾನ್!

ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರುವ 'ದಿ ಜಡ್ಜ್​ಮೆಂಟ್' ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

the judgement
ದ ಜಡ್ಜ್​ಮೆಂಟ್

By

Published : Apr 22, 2023, 8:58 AM IST

ಕನ್ನಡ ಚಿತ್ರರಂಗದ ಶೋ ಮ್ಯಾನ್ ಅಂತಾನೇ ಕರೆಯಿಸಿಕೊಂಡಿರುವ ಏಕೈಕ ನಟ ಕ್ರೇಜಿ ಸ್ಟಾರ್ ರವಿಚಂದ್ರನ್. ದೃಶ್ಯಂ 2 ಚಿತ್ರದ ಬಳಿಕ ಕ್ರೇಜಿಸ್ಟಾರ್ ಮತ್ತೊಂದು ಥ್ರಿಲ್ಲರ್ ಕಥೆಯೊಂದಿಗೆ ಬರ್ತಾ ಇದ್ದಾರೆ‌. ಈ ಚಿತ್ರಕ್ಕೆ "ದ ಜಡ್ಜ್​ಮೆಂಟ್" ಅಂತಾ ಟೈಟಲ್ ಇಟ್ಟಿದ್ದು, ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು.

ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ನಿರ್ದೇಶಕರು "ಆಕ್ಸಿಡೆಂಟ್" ಮಾಡಿ "ಲಾಸ್ಟ್ ಬಸ್" ಹತ್ತಿ "ಅಮೃತ ಅಪಾರ್ಟ್‌ಮೆಂಟ್ಸ್" ಗೆ ಹೋಗಿ ಈಗ "ಜಡ್ಜ್ ಮೆಂಟ್" ನೀಡಲು ಬಂದಿದ್ದಾರೆ. ಈ ಚಿತ್ರದ ಕಥೆ ಚೆನ್ನಾಗಿದೆ. ನನಗೆ ಈ ತಂಡ ಹಾಗೂ ಜಾನರ್ ಎರಡು ಹೊಸತು. ಆರು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡುತ್ತಿರುವ ಖುಷಿಯಿದೆ ಎಂದರು.

ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಗಾಭರಣ ಮಾತನಾಡಿ, ನಾವೆಲ್ಲ ಸದ್ಯದಲ್ಲೇ ಮತ್ತೊಂದು "ಜಡ್ಜ್​ಮೆಂಟ್" ಗಾಗಿ ಕಾಯುತ್ತಿದ್ದೇವೆ. ಅಷ್ಟರಲ್ಲಿ ಗುರುರಾಜ್ ಕುಲಕರ್ಣಿ ಮತ್ತು ತಂಡದವರ "ದ ಜಡ್ಜ್​ಮೆಂಟ್" ಶುರುವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಅಂದರು.

ದ ಜಡ್ಜ್​ಮೆಂಟ್ ಚಿತ್ರತಂಡ

ಇದನ್ನೂ ಓದಿ :ದಕ್ಷಿಣ ಚಿತ್ರರಂಗದ ಖ್ಯಾತ ನೃತ್ಯ ನಿರ್ದೇಶಕ ನಿಧನ!; ಆತ್ಮಹತ್ಯೆ ಮಾಡಿಕೊಂಡ್ರಾ ರಾಜೇಶ್ ಮಾಸ್ಟರ್?

ಸಿನಿಮಾದ ನಿರ್ದೇಶಕ ಗುರುರಾಜ ಬಿ ಕುಲಕರ್ಣಿ ಮಾತನಾಡಿ, "ಇದೊಂದು ಲೀಗಲ್ ಸಿಸ್ಟಂ ಕುರಿತಾದ ಚಿತ್ರ. ಇದೇ ಏಪ್ರಿಲ್ 24 ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್, ಧನ್ಯ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಹೀಗೆ ಬಹುದೊಡ್ಡ ತಾರಾ ಬಳಗವಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಶಿವು ಬಿ.ಕೆ.ಕುಮಾರ್ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ ಹಾಗೂ ಎಂ.ಎಸ್ ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ" ಎಂದು ಹೇಳಿದರು.

ದ ಜಡ್ಜ್​ಮೆಂಟ್ ಚಿತ್ರತಂಡ

ಇದನ್ನೂ ಓದಿ :ಫಿಟ್ನೆಸ್​ ಐಕಾನ್​ ಅಂದ್ರೆ ಸುಮ್ನೆನಾ?: ನಟಿಮಣಿಯರ ಸೌಂದರ್ಯದ ರಹಸ್ಯ ಗೊತ್ತೇ?

G9 communication media and Entertainment ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಗುರುರಾಜ ಬಿ ಕುಲಕರ್ಣಿ(ನಾಡಗೌಡ) ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ "ಆಕ್ಸಿಡೆಂಟ್", " ಲಾಸ್ಟ್‌ ಬಸ್" , "ಅಮೃತ ಅಪಾರ್ಟ್‌ಮೆಂಟ್ಸ್" ಚಿತ್ರಗಳನ್ನು ಈ ಸಂಸ್ಥೆ ಮೂಲಕ ನಿರ್ಮಿಸಲಾಗಿತ್ತು. ಹಾಗೂ ಈ ಸಿನಿಮಾಗಳನ್ನು ಗುರುರಾಜ್ ಬಿ ಕುಲಕರ್ಣಿ ಅವರೇ ನಿರ್ದೇಶಿಸಿದ್ದರು. ಇದೀಗ 'ದ ಜಡ್ಜ್​ಮೆಂಟ್' ಚಿತ್ರವನ್ನ ಶರದ್ ಬಿ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಆರ್ ಪಾಟೀಲ, ರಾಜೇಶ್ವರಿ ಆರ್ ಸುನೀಲ ಹಾಗೂ ಪ್ರತಿಮ ಬಿರಾದಾರ ನಿರ್ಮಾಣ ಮಾಡುತ್ತಿದ್ದಾರೆ‌. ಈ ಸಂಸ್ಥೆಯಲ್ಲಿ‌ ನಿರ್ಮಾಣ ಆಗುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ.

ಇದನ್ನೂ ಓದಿ :ಮಗಳೊಂದಿಗಿನ ಮುದ್ದಾದ ವಿಡಿಯೋ ಹಂಚಿಕೊಂಡ ಅಲ್ಲು ಅರ್ಜುನ್​; 'ಸೋ ಕ್ಯೂಟ್​' ಎಂದ ಫ್ಯಾನ್ಸ್​

ABOUT THE AUTHOR

...view details