ಬೆಂಗಳೂರು: ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿರುವ ನಟ ಮತ್ತು ರಾಜಕಾರಣಿ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಚುನಾವಣಾ ಆಯೋಗವು ಆಟೋ ರಿಕ್ಷಾವನ್ನು ಚಿಹ್ನೆಯಾಗಿ ಬಳಸುವಂತೆ ತಿಳಿಸಿದೆ. ಉಪೇಂದ್ರ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ. "ನಾಯಕತ್ವ ಮತ್ತು ಜವಾಬ್ಧಾರಿ ವಹಿಸಿಕೊಳ್ಳಲು ಸಿದ್ಧರಿರುವ ಮತದಾರರ ಪಕ್ಷದ ಚಿಹ್ನೆ ಆಟೋ ರಿಕ್ಷಾ. ಇಲ್ಲಿ ಸ್ಪರ್ಧಿಸುತ್ತಿರುವವರಿಂದ ನೀವು ಕೆಲಸ ಮಾಡಿಸುತ್ತೀರಿ ಎಂಬ ತನ್ನಂಬಿಕೆ ನಿಮಗಿದ್ದರೆ ಮಾತ್ರ ಪ್ರಜಾಕೀಯಕ್ಕೆ ಮತ ನೀಡಿ" ಎಂದು ಬರೆದಿದ್ದಾರೆ.
ಇದನ್ನೂ ಓದಿ:'ಪ್ಯಾರ್ ತೋ ಹೋನಾ ಹಿ ಥಾ, ಪ್ಯಾರ್ ತೋ ಹೈ': ಕಾಜೋಲ್ - ಅಜಯ್ 24ನೇ ವಿವಾಹ ವಾರ್ಷಿಕೋತ್ಸವ
ಈ ಸುದ್ದಿ ಗೊತ್ತಾಗುತ್ತಿದ್ದಂತೆ ಉಪೇಂದ್ರ ಅಭಿಮಾನಿಗಳು, ನೆಟಿಜನ್ಸ್, ರಾಜಕೀಯ ಯುವ ನಾಯಕರು ಸೇರಿದಂತೆ ಹಲವರು ಕಾಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ. ಕೆಲವರು ನಿರುತ್ಸಾಹ ತೋರಿಸಿ ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ಹದಗೆಟ್ಟಿರುವ ರಾಜಕೀಯ ಪರಿಸ್ಥಿತಿಯ ಬದಲಾವಣೆಗೆ ಇಂತಹ ಪಕ್ಷ ಬರಬೇಕು ಎಂದು ಹೇಳಿದ್ದಾರೆ.