ಕರ್ನಾಟಕ

karnataka

ETV Bharat / entertainment

ಇಂಡಿಯಾ-ಪಾಕ್​ ಕ್ರಿಕೆಟ್‌ ಮ್ಯಾಚ್​ ವೇಳೆ 24 ಕ್ಯಾರೆಟ್ ಚಿನ್ನದ ಐಫೋನ್​ ಕಳೆದುಕೊಂಡ ನಟಿ ಊರ್ವಶಿ ರೌಟೇಲಾ - ಈಟಿವಿ ಭಾರತ ಕನ್ನಡ

ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಡಿಯಾ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ನಟಿ, ರೂಪದರ್ಶಿ ಊರ್ವಶಿ ರೌಟೇಲಾ ಚಿನ್ನದ ಐಫೋನ್​ ಕಳೆದುಕೊಂಡಿದ್ದಾರೆ.

Urvashi Rautela seeks help as she 'lost 24 carat real gold iphone' at Narendra Modi Stadium during India vs Pakistan World Cup 2023 match
ಇಂಡಿಯಾ-ಪಾಕ್​ ಮ್ಯಾಚ್​ ವೇಳೆ ಚಿನ್ನದ ಐಫೋನ್​ ಕಳೆದುಕೊಂಡ ಊರ್ವಶಿ ರೌಟೇಲಾ; ಹುಡುಕಿಕೊಡುವಂತೆ ಮನವಿ

By ETV Bharat Karnataka Team

Published : Oct 15, 2023, 5:10 PM IST

ಶನಿವಾರ ನಡೆದ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿತು. ರೋಹಿತ್​ ಶರ್ಮಾ ನೇತೃತ್ವದ ತಂಡ ಅದ್ಭುತ ಆಟದ ಪ್ರದರ್ಶನ ನೀಡಿ, ಎದುರಾಳಿಯನ್ನು 8ನೇ ಬಾರಿಗೆ ಸೋಲಿಸಿ ದಾಖಲೆ ಬರೆಯಿತು. ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಮಹತ್ವದ ಪಂದ್ಯಕ್ಕೆ ವಿವಿಧ ಕ್ಷೇತ್ರಗಳ ಗಣ್ಯರೂ ಸಾಕ್ಷಿಯಾಗಿದ್ದರು. ಫ್ಯಾಷನ್​ ಐಕಾನ್​ ಊರ್ವಶಿ ರೌಟೇಲಾ ಕೂಡ ಮ್ಯಾಚ್​ ನೋಡಲು ಹಾಜರಿದ್ದರು. ಈ ವೇಳೆ ಅವರು ತಮ್ಮ ಚಿನ್ನದ ಐಫೋನ್​ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿರುವ ಅವರು, ಇಂಡಿಯಾ ವರ್ಸಸ್​ ಪಾಕಿಸ್ತಾನ ಪಂದ್ಯದ ವೇಳೆ ರಿಯಲ್​ ಗೋಲ್ಡ್​ ಐಫೋನ್ ಕಳೆದುಕೊಂಡಿದ್ದು, ಸಿಕ್ಕಿದ್ದಲ್ಲಿ ಹಿಂತಿರುಗಿಸುವಂತೆ ವಿನಂತಿಸಿದ್ದಾರೆ. "ಅಹಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್​ ರಿಯಲ್​ ಗೋಲ್ಡ್​ ಐಫೋನ್​ ಕಳೆದುಹೋಗಿದೆ. ಯಾರಿಗಾದರೂ ಸಿಕ್ಕಿದ್ದಲ್ಲಿ, ದಯವಿಟ್ಟು ಸಹಾಯ ಮಾಡಿ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನನ್ನನ್ನು ಸಂಪರ್ಕಿಸಿ. #LostPhone #AhmedabadStadium #HelpNeeded #indvspak." ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Cricket World Cup 2023: ಪಾಕಿಸ್ತಾನ ವಿರುದ್ಧ ರೋಹಿತ್​​ ಭರ್ಜರಿ ಪ್ರದರ್ಶನ.. ಹಿಟ್​ಮ್ಯಾನ್​ ಪುಡಿಗಟ್ಟಿದ ದಾಖಲೆಗಳಿವು..

ಊರ್ವಶಿ ರೌಟೇಲಾ ಶನಿವಾರ ಸ್ಟೇಡಿಯಂಗೆ ಹೋಗುವ ಮುನ್ನ ಪಂದ್ಯದ ಟಿಕೆಟ್​ಗಳನ್ನು ತೋರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ನಂತರ ಭಾರತ ಮತ್ತು ಪಾಕಿಸ್ತಾನ ಮ್ಯಾಚ್​ ಅನ್ನು ಆನಂದಿಸುತ್ತಿರುವ ನೋಟದೊಂದಿಗೆ ಅಭಿಮಾನಿಗಳನ್ನು ರಂಜಿಸಿದರು. ಈ ಹೈವೋಲ್ಟೇಜ್​ ಮ್ಯಾಚ್​ ನೋಡಲು ಬರುವಾಗ ರೂಪವತಿ ಬ್ಲೂ ಕಲರ್​ ಮಿನಿ ಬಾಡಿಕಾನ್​ ಡ್ರೆಸ್​ ಧರಿಸಿದ್ದರು.

ಹೈವೋಲ್ಟೇಜ್​ ಪಂದ್ಯಕ್ಕೆ ಸಾಕ್ಷಿಯಾದ ಸೆಲೆಬ್ರಿಟಿಗಳು: ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಲಕ್ಷಾಂತರ ಜನರು ನೆರೆದಿದ್ದರು. ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ಪತ್ನಿ ಹಾಗು ಬಾಲಿವುಡ್​​ ನಟಿ ಅನುಷ್ಕಾ ಶರ್ಮಾ, ಕೆ.ಎಲ್.ರಾಹುಲ್​ ಪತ್ನಿ ಹಾಗು ಬಾಲಿವುಡ್​​ ನಟಿ ಅಥಿಯಾ ಶೆಟ್ಟಿ, ರೋಹಿತ್​ ಶರ್ಮಾ ಅವರ ಹೆಂಡತಿ ರಿತಿಕಾ ಸಜ್ದೇ ಸೇರಿದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳು ಆಗಮಿಸಿದ್ದರು.

ಗೃಹ ಸಚಿವ ಅಮಿತ್​ ಶಾ ಸಹ ಭಾಗಿ ಆಗಿದ್ದರು. ಖ್ಯಾತ ಗಾಯಕ ಅರಿಜಿತ್​ ಸಿಂಗ್​ ತಂಡದ ಗಾಯನದೊಂದಿಗೆ ಪಂದ್ಯ ಆರಂಭಗೊಂಡಿತ್ತು. ಪಂದ್ಯದ ಮತ್ತು ಸೆಲೆಬ್ರಿಟಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ:ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಮಾಡಿದ ದಾಖಲೆಗಳಿವು..!

ABOUT THE AUTHOR

...view details