ಕರ್ನಾಟಕ

karnataka

ETV Bharat / entertainment

ಪರ್ವೀನ್ ಬಾಬಿ ಜೀವನಾಧಾರಿತ ಕಥೆಗೆ ಜೀವ ತುಂಬಲಿರುವ ಊರ್ವಶಿ ರೌಟೇಲಾ - ಊರ್ವಶಿ ರೌಟೇಲಾ

ಪರ್ವೀನ್ ಬಾಬಿ ಬಯೋಪಿಕ್​ನಲ್ಲಿ ಊರ್ವಶಿ ರೌಟೇಲಾ ನಟಿಸಲಿದ್ದಾರೆ.

Urvashi Rautela in Parveen Babi biopic
ಪರ್ವೀನ್ ಬಾಬಿ ಬಯೋಪಿಕ್​ನಲ್ಲಿ ಊರ್ವಶಿ ರೌಟೇಲಾ

By

Published : Jun 4, 2023, 12:38 PM IST

ಇತ್ತೀಚೆಗೆ ನಡೆದ ಕಾನ್ಸ್ 2023 ಫಿಲ್ಮ್ ಫೆಸ್ಟಿವಲ್ ಮತ್ತು IIFA 2023ನಲ್ಲಿ ತನ್ನ ಅದ್ಭುತ ಚೆಲುವಿನಿಂದ ಗಮನ ಸೆಳೆದಿರುವ ನಟಿ ಊರ್ವಶಿ ರೌಟೇಲಾ ಅವರು ಹೊಸ ಸಿನಿಮಾವೊಂದಕ್ಕೆ ಸಜ್ಜಾಗಿದ್ದಾರೆ. ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಟಿ, ದಿವಂಗತ ಪರ್ವೀನ್ ಬಾಬಿ (Parveen Babi) ಅವರ ಜೀವನಚರಿತ್ರೆಗೆ ತಯಾರಿ ಪ್ರಾರಂಭಿಸಿದ್ದಾರೆ.

ಈ ಕುರಿತು ಊರ್ವಶಿ ರೌಟೇಲಾ ಪೋಸ್ಟ್ ಒಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. "ಬಾಲಿವುಡ್ ವಿಫಲವಾಗಿದೆ #ಪರ್ವೀನ್ ಬಾಬಿ. ಆದರೆ ನಾನು ನಿಮ್ಮನ್ನು ಹೆಮ್ಮೆಪಡುವಂತೆ ಮಾಡುತ್ತೇನೆ. #ಓಂ ನಮಃ ಶಿವಾಯ್. ಹೊಸ ಆರಂಭದ ಮ್ಯಾಜಿಕ್ ನಂಬಿರಿ" ಎಂದು ಬರೆದಿದ್ದಾರೆ. ಮುಂಬರುವ ಬಯೋಪಿಕ್‌ನ ಸಾರಾಂಶದ ಚಿತ್ರವನ್ನು ನಟಿ ಹಂಚಿಕೊಂಡಿದ್ದಾರೆ.

ಊರ್ವಶಿ ರೌಟೇಲಾ ಪೋಸ್ಟ್ ಹಂಚಿಕೊಂಡ ಕೂಡಲೇ ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಕಾಮೆಂಟ್ ವಿಭಾಗವನ್ನು ರೆಡ್​ ಹಾರ್ಟ್ ಎಮೋಜಿಗಳಿಂದ ತುಂಬಿದರು. ನಟಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸಿದರು. "ಪರ್ವೀನ್​ ಬಾಬಿ ಬಗ್ಗೆ ಸಿನಿಮಾ ಮಾಡುತ್ತಿರುವುದಕ್ಕೆ ಧನ್ಯವಾದಗಳು" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ, "ಪರ್ವೀನ್ ಬಾಬಿ ಕುರಿತು ನಿಮ್ಮ ಮುಂಬರುವ ಚಲನಚಿತ್ರವು ಬ್ಲಾಕ್​ಬಸ್ಟರ್ ಆಗಲು ಉದ್ದೇಶಿಸಲಾಗಿದೆ" ಎಂದು ಬರೆದಿದ್ದಾರೆ. "ಪರ್ವೀನ್ ಬಾಬಿ ಅವರಿಗೆ ಬೆಂಬಲವಾಗಿ ಬಂದ ಮೊದಲ ನಟಿ" ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.

ಪರ್ವೀನ್​ ಬಾಬಿ ಬಾಲಿವುಡ್​ನಲ್ಲಿ 1970-80ರಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚಿದವರು​. ಬೋಲ್ಡ್​ ಮತ್ತು ಬ್ಯೂಟಿಫುಲ್​ ನಟಿಯಾಗಿ ಹಿಂದಿ ಚಿತ್ರದಲ್ಲಿ ಗುರುತಿಸಿಕೊಂಡವರು. ಆದ್ರೆ 2005ರ ಮುಂಬೈನ ತಮ್ಮ ಫ್ಲಾಟ್‌ನಲ್ಲಿ ಕೊನೆಯುಸಿರೆಳೆದರು. ಕೊಳೆತ ಸ್ಥಿತಿಯಲ್ಲಿ ನಟಿಯ ಶವ ಪತ್ತೆ ಆಗಿತ್ತು. ಇದು ಇಂದಿಗೂ ನಿಗೂಢ ಸಾವು. ನಿಖರ ಕಾರಣ ತಿಳಿದುಬಂದಿಲ್ಲ. ಇಹಲೋಕ ತ್ಯಜಿಸಿ 18 ವರ್ಷಗಳಾಗಿದ್ದರೂ ನಟಿಯ ನಟನೆ ಅಭಿಮಾನಿಗಳ ಮನೆ ಮಾತಾಗಿದೆ. ಸದ್ಯ ಇವರ ಕುರಿತ ಜೀವನಚರಿತ್ರೆ ರೆಡಿಯಾಗುತ್ತಿದೆ.

ಫ್ಯಾಷನ್ ಐಕಾನ್ ಪರ್ವೀನ್​ ಬಾಬಿ: ಮನಮೋಹಕ ಶೈಲಿಗೆ ಹೆಸರುವಾಸಿಯಾಗಿದ್ದ ಪರ್ವೀನ್​ ಬಾಬಿ ಹಲವು ಸೂಪರ್​ ಹಿಟ್​ ಸಿನಿಮಾಗಳ ರಾಣಿ. ಕ್ರಿಕೆಟಿಗ ಸಲೀಂ ದುರಾನಿಯವರೊಂದಿಗೆ ಚರಿತ್ರಾ (1973) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ಪರ್ವೀನ್ ಜನಪ್ರಿಯರಾದರು. ಆ ಬಳಿಕ ಬಂದ ಕೆಲ ಚಿತ್ರಗಳೂ ಸಹ ಸೋತವು. ನಟಿಯ ಮೊದಲ ಪ್ರಮುಖ ಹಿಟ್ ಸಿನಿಮಾ ಅಮಿತಾಭ್ ಬಚ್ಚನ್ ಜೊತೆಗಿನ ಮಜ್ಬೂರ್ (1974). ಅವರ ವೃತ್ತಿಜೀವನದುದ್ದಕ್ಕೂ, ಅವರು ಮನಮೋಹಕ ಮತ್ತು ಫ್ಯಾಷನ್ ಐಕಾನ್ ಎಂದು ಪರಿಗಣಿಸಲ್ಪಟ್ಟರು.

ಇದನ್ನೂ ಓದಿ:ಸಾಂಪ್ರದಾಯಿಕ ನೋಟಕ್ಕೂ ಸೈ ಎಂದ ಸ್ಯಾಂಡಲ್​ವುಡ್ ಗ್ಲ್ಯಾಮರ್ ಗೊಂಬೆ ಪ್ರಣಿತಾ ಸುಭಾಷ್ - ನಿಮಗ್ಯಾವ ನೋಟ ಇಷ್ಟ?!

ಇನ್ನೂ ಸೌಂದರ್ಯದಿಂದಲೇ ಸದ್ದು ಮಾಡುವ ಊರ್ವಶಿ ರೌಟೇಲಾ ಇತ್ತೀಚೆಗೆ ನಟ ರಣದೀಪ್ ಹೂಡಾ ಜೊತೆ ವೆಬ್ ಸರಣಿ ಇನ್ಸ್‌ಪೆಕ್ಟರ್ ಅವಿನಾಶ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮವು OTT ಪ್ಲಾಟ್‌ಫಾರ್ಮ್ JioCinema ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ತಮ್ಮ ಸೌಂದರ್ಯದಿಂದ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಊರ್ವಶಿ ಈವರೆಗೆ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಹೇಳಿಕೊಳ್ಳುವಷ್ಟು ದೊಡ್ಡ ಹಿಟ್​ ಚಿತ್ರ ಮಾಡಿಲ್ಲ. ಪರ್ವೀನ್ ಬಾಬಿ ಕುರಿತ ಚಿತ್ರ ಹಿಟ್​ ಆಗುವ ನಿರೀಕ್ಷೆ ಇದೆ. ಸಿನಿಮಾ ಕುರಿತ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ.

ABOUT THE AUTHOR

...view details