ಮುಂಬೈ(ಮಹರಾಷ್ಟ್ರ): ಚಿತ್ರ ವಿಚಿತ್ರ ಫ್ಯಾಷನ್ ಸೆನ್ಸ್ಗೆ ಹೆಸರುವಾಸಿಯಾಗಿರುವ ಸೋಷಿಯಲ್ ಮಿಡಿಯಾ ಸ್ಟಾರ್ ಉರ್ಫಿ ಜಾವೇದ್ ಅವರನ್ನು ಇತ್ತೀಚೆಗೆ ಮುಂಬೈ ಪೊಲೀಸರು ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ. ಮಹಿಳಾ ಪೊಲೀಸರು ಯುವತಿಯನ್ನು ತಮ್ಮ ಪೊಲೀಸ್ ವಾಹನದಲ್ಲಿ ಕರೆದೊಯ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಖತ್ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ, ಬಿಗ್ ಬಾಸ್ ಖ್ಯಾತಿಯ ಉರ್ಫಿ ಜಾವೇದ್ ಕಾಫಿ ಶಾಪ್ ಒಂದರ ಬಳಿ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ಕೆಲವು ಮಹಿಳಾ ಪೊಲೀಸ್ ಅಧಿಕಾರಿಗಳು ಆಗಮಿಸಿ ನಟಿಯನ್ನು ಕರೆದೊಯ್ದಿದ್ದಾರೆ. ಬೋಲ್ಡ್ ಬಟ್ಟೆಗಳನ್ನು ಧರಿಸುವ ವಿಚಾರವಾಗಿ ಪೊಲೀಸರು ಮತ್ತು ಉರ್ಫಿ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಉರ್ಫಿ ಅವರ ಕೈ ಹಿಡಿದುಕೊಂಡು ತಮ್ಮ ವಾಹನದಲ್ಲಿ ಮಹಿಳಾ ಪೊಲೀಸರು ಕೂರಿಸಿದ್ದಾರೆ.
ವಿಡಿಯೋದಲ್ಲೇನಿದೆ?: ಇಬ್ಬರು ಮಹಿಳಾ ಪೊಲೀಸರು ತಮ್ಮೊಂದಿಗೆ ಠಾಣೆಗೆ ಬರುವಂತೆ ನಟಿ ಉರ್ಫಿ ಜಾವೇದ್ ಅವರಲ್ಲಿ ಕೇಳಿದ್ದಾರೆ. ಇದಕ್ಕೆ ಕಾರಣವೇನು ಎಂದು ಉರ್ಫಿ ಪ್ರಶ್ನಿಸಿದ್ದಾರೆ. ಅದಕ್ಕೆ ಪೊಲೀಸರು, ನಟಿಯ ಬಟ್ಟೆ ವಿಚಾರ ತೆಗೆದಿದ್ದಾರೆ. ಉರ್ಫಿ ಮತ್ತೆ ಮತ್ತೆ ಕಾರಣ ತಿಳಿಯಲು ಬಯಸಿದ್ದು, ಮಹಿಳಾ ಪೊಲೀಸರು ಕಚೇರಿಯಲ್ಲಿ ಮಾತನಾಡೋಣ, ನಡೆಯಿರಿ ಎಂದಿದ್ದಾರೆ. ಇಬ್ಬರು ಮಹಿಳಾ ಪೊಲೀಸರೊಂದಿಗೆ ಉರ್ಫಿ ವಾಹನ ಹತ್ತಿದರು.
ಬ್ಯಾಕ್‌ಲೆಸ್ ಡ್ರೆಸ್ ಧರಿಸಿದ್ದ ಉರ್ಫಿ:ವರದಿಗಳ ಪ್ರಕಾರ, ಬೋಲ್ಡ್ ವಸ್ತ್ರ ಧರಿಸುವ ಸಲುವಾಗಿ ಪೊಲೀಸರು ಉರ್ಫಿಯನ್ನು ಕರೆದೊಯ್ದಿದ್ದಾರೆ. ಈ ವಿಡಿಯೋದಲ್ಲಿ, ಉರ್ಫಿ ಡೆನಿಮ್ ಪ್ಯಾಂಟ್ ಮತ್ತು ಬ್ಯಾಕ್‌ಲೆಸ್ ರೆಡ್ ಕ್ರಾಪ್ ಟಾಪ್ ಧರಿಸಿರುವುದನ್ನು ಕಾಣಬಹುದು.