ಮೀ ಟೂ ಅಭಿಯಾನದಲ್ಲಿ ಸುದ್ದಿಯಾಗಿದ್ದ ನಟ, ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ 'ಬಿಗ್ ಬಾಸ್ 16'ಗೆ ಎಂಟ್ರಿ ಪಡೆದ ದಿನದಿಂದಲೂ ಸಾಕಷ್ಟು ಪ್ರೇಕ್ಷಕರ ಅಸಮಾಧಾನ ವ್ಯಕ್ತವಾಗುತ್ತಿದೆ. ಅನೇಕರು ಅವರನ್ನು ಕಾರ್ಯಕ್ರಮದ ಭಾಗವಾಗಿ ಮಾಡಿದ್ದಕ್ಕಾಗಿ ಚಾನಲ್ ಅನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಬಿಗ್ ಬಾಸ್ ತಯಾರಕರನ್ನು ದೂಷಿಸುವವರ ಪಟ್ಟಿಗೆ ಈಗ 'ಬಿಗ್ ಬಾಸ್ OTT' ಖ್ಯಾತಿಯ ಉರ್ಫಿ ಜಾವೇದ್ ಸೇರಿದ್ದಾರೆ.
''ಬಿಗ್ ಬಾಸ್ ನೀವೇಕೆ ಹೀಗೆ ಮಾಡಿದ್ರಿ, ಲೈಂಗಿಕ ಪರಭಕ್ಷಕ (sexual predators)ರನ್ನು ಬೆಂಬಲಿಸುವ ಮೂಲಕ ಅವರು ಮಾಡಿದ್ದು ಸರಿ ಎಂದು ಹೇಳುತ್ತಿದ್ದೀರಿ. ಈ ನಡವಳಿಕೆಯು ಸರಿಯಲ್ಲ ಮತ್ತು ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪುರುಷರು ತಿಳಿದುಕೊಳ್ಳಬೇಕು. ಲೈಂಗಿಕ ಪರಭಕ್ಷಕನೊಂದಿಗೆ ಕೆಲಸ ಮಾಡುವುದನ್ನು ನಿಲ್ಲಿಸಿ! ಇದು ವಿವಾದಾತ್ಮಕವಾಗಿಲ್ಲ, ಇದು ಕೇವಲ ಅವಮಾನಕರವಾಗಿದೆ!" ಎಂದು ಉರ್ಫಿ ಜಾವೇದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.