ವಿಚಿತ್ರ ವಿನ್ಯಾಸದ ಉಡುಗೆ ತೊಟ್ಟು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಸದಾ ಸದ್ದು ಮಾಡುವ ಉರ್ಫಿ ಜಾವೇದ್ ಇದೀಗ ನೆಟ್ಟಿಗರಿಗೆ 'April Fool' ಮಾಡಿದ್ದಾರೆ. ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುವ ಇವರ ಉಡುಗೆ ಶೈಲಿಯನ್ನು ಬದಲಾಯಿಸಿಕೊಳ್ಳುತ್ತೇನೆ ಎಂದು ನಿನ್ನೆ ಟ್ವೀಟ್ ಮೂಲಕ ಸದ್ದು ಮಾಡಿದ್ದರು. ಇದೀಗ 'ಏಪ್ರಿಲ್ ಫೂಲ್, ತಮಾಷೆ' ಎಂದು ಟ್ವೀಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ತಮ್ಮ ವಿಚಿತ್ರ ಡ್ರೆಸ್ಸಿಂಗ್ನಿಂದ ಹೆಸರುವಾಸಿಯಾಗಿದ್ದಾರೆ. ಅಷ್ಟೇ ಅಲ್ಲ, ಹಲವು ವಿಷಯಗಳ ಬಗ್ಗೆ ತಮ್ಮದೇ ಆದ ಹೇಳಿಕೆಗಳನ್ನು ನೀಡುವುದರ ಮೂಲಕ ಕೂಡ ಸದ್ದು ಮಾಡುತ್ತಾರೆ. ಅವರ ಫ್ಯಾಷನ್ ಸೆನ್ಸ್ ಹೆಚ್ಚಾಗಿ ಟ್ರೋಲರ್‌ಗಳಿಗೆ ಆಹಾರವಾಗುತ್ತದೆ. ಏತನ್ಮಧ್ಯೆ, ಉರ್ಫಿ ಅವರ ಪೋಸ್ಟ್ ಒಂದು ಹೆಚ್ಚು ವೈರಲ್ ಆಗಿ ಸದ್ದು ಮಾಡಿತ್ತು. ಆದ್ರಿಂದು ಅವರು ತಮ್ಮ ದಾರಿ ಬದಲಾಯಿಸಿಕೊಂಡಿದ್ದಾರೆ.
'ಬದಲಾದ ಉರ್ಫಿಯನ್ನು ನೋಡುತ್ತೀರಿ'...:ನಿನ್ನೆ ಅವರು ವಿಭಿನ್ನ ರೀತಿಯಲ್ಲಿ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ, ಉರ್ಫಿ ಜಾವೇದ್ ಭಾವನಾತ್ಮಕ ರೀತಿಯಲ್ಲಿ ಕ್ಷಮೆಯಾಚಿಸಿದ್ದರು. 'ನಾನು ಧರಿಸುವ ಉಡುಗೆಯಿಂದ ಪ್ರತಿಯೊಬ್ಬರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ನೀವು ಬದಲಾದ ಉರ್ಫಿಯನ್ನು ನೋಡುತ್ತೀರಿ. ನಾನು ಬದಲಾದ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತೇನೆ' ಎಂದು ಶುಕ್ರವಾರ ಟ್ವೀಟ್ ಮಾಡಿದ್ದರು.
'ಏಪ್ರಿಲ್ ಫೂಲ್, ತಮಾಷೆ'...:ಆದ್ರಿಂದು 'ಏಪ್ರಿಲ್ ಫೂಲ್, ತಮಾಷೆ' ಎಂದು ಟ್ವೀಟ್ ಮಾಡಿದ್ದಾರೆ. ಇದರರ್ಥ ಉಡುಪಿನ ಶೈಲಿಯನ್ನು ಇವರು ಬದಲಾಯಿಸಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಅಂದಾಜಿಸಿದ್ದಾರೆ.