ಕನ್ನಡ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನಟ, ನಿರ್ದೇಶಕ ಉಪೇಂದ್ರ ಯಾವುದೇ ಕೆಲಸ ಮಾಡಿದರೂ ಡಿಫರೆಂಟ್ ಆಗಿ ಮಾಡ್ತಾ ಇರ್ತಾರೆ. ತಮ್ಮ ಸಿನಿಮಾಗಳೂ ಕೂಡ ಇದಕ್ಕೆ ಹೊರತಾಗಿಲ್ಲ.
ಉಪೇಂದ್ರ ಸಿನಿಮಾಗಳು ಅಂದರೆ ಸಾಕು ಅದರಲ್ಲಿ ಏನಾದರೂ ಒಂದು ಟ್ವಿಸ್ಟ್ ಇದ್ದು, ಸಮಾಜವನ್ನು ತಿದ್ದುವ ಕೆಲವು ಅಂಶಗಳು ಅಡಕವಾಗಿರುತ್ತವೆ ಎಂದು ಜನ ತಿಳಿದಿದ್ದಾರೆ.
ಇದೀಗ ಉತ್ತಮ ಪ್ರಜಾಕೀಯ ಪಕ್ಷ ಕಟ್ಟಿರುವ ಉಪೇಂದ್ರ ತಮ್ಮ ಪಕ್ಷದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಪ್ರಜಾ ಪ್ರಭುತ್ವ ಹೇಗಿರಬೇಕು ಎಂಬುದರ ಬಗ್ಗೆ ತಮ್ಮ ಸಂದರ್ಶನದಲ್ಲಿ ಹೇಳುತ್ತಲೇ ಬಂದಿದ್ದಾರೆ. ಇಲ್ಲಿ ಯಾರೂ ನಾಯಕರಲ್ಲ. ರಾಜಕಾರಣಿಗಳನ್ನು ನೀವೇಕೆ ನಾಯಕರು ಎಂದು ಬಿಂಬಿಸುತ್ತೀರಿ. ನಿಮ್ಮಿಂದ ಮತ ಪಡೆದು ನಿಮ್ಮ ಕೆಲಸ ಮಾಡಲು ಬಂದಿರುವ ನೌಕರರು ಎಂದು ಹೇಳುತ್ತಲೇ ಇದ್ದಾರೆ.
ಸದ್ಯ ಪ್ರಜಾಪ್ರಭುತ್ವದ ಬಗ್ಗೆ ಪ್ರಜೆಗಳಿಗೆ ಪ್ರಶ್ನೆ ಕೇಳಿರುವ ಉಪೇಂದ್ರ, ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಮಗೆ ಇರಬೇಕಾದ ಬಹಳ ಮುಖ್ಯವಾದ ಗುಣ ಯಾವುದು ? ಎಂದು ಕೇಳಿದ್ದಾರೆ. ಅಲ್ಲದೇ ಟ್ವೀಟ್ನಲ್ಲಿ ಅವರದ್ದೇ ಒಂದು ಫೋಟೋ ಹಾಕಿದ್ದು, ಅದರಲ್ಲಿ ಅರಿವೇ ಗುರು ಎಂದು ಬರೆದಿದ್ದಾರೆ. ಇನ್ನು ಆ ಫೋಟೋದಲ್ಲಿ ತಮ್ಮ ಹಣೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿಕೊಂಡಿದ್ದಾರೆ.
ಹೀಗೆ ಉಪೇಂದ್ರ ಕೇಳಿರುವ ಪ್ರಶ್ನೆಗೆ ಅಭಿಮಾನಿಗಳು ಕಮೆಂಟ್ಗಳ ಸುರಿಮಳೆಯನ್ನೇ ಹರಿಸಿದ್ದಾರೆ.