ಕರ್ನಾಟಕ

karnataka

ETV Bharat / entertainment

ಕಲಾ ಮಾಂತ್ರಿಕ ಜಾವೇದ್ ಅಖ್ತರ್ ಜೊತೆ ಉರ್ಫಿ ಜಾವೇದ್ ಫೋಟೋ - ಜಾವೇದ್ ಅಖ್ತರ್ ಉರ್ಫಿ ಫೋಟೋ

ಉರ್ಫಿ ಜಾವೇದ್ ಅವರು ಇಂದು ಸಾಹಿತಿ ಜಾವೇದ್ ಅಖ್ತರ್ ಅವರನ್ನು ಭೇಟಿಯಾಗಿ ಫೋಟೋ ಹಂಚಿಕೊಂಡಿದ್ದಾರೆ.

Uorfi Javed with  Javed Akhtar
ಜಾವೇದ್ ಅಖ್ತರ್ ಜೊತೆ ಉರ್ಫಿ ಜಾವೇದ್

By

Published : Jan 8, 2023, 1:37 PM IST

ಸೋಶಿಯಲ್​ ಮೀಡಿಯಾ ಸ್ಟಾರ್​ ಉರ್ಫಿ ಜಾವೇದ್ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ತಮ್ಮ ಉಡುಗೆಯ ವಿಚಾರವಾಗಿ ಸದಾ 'ಹಾಟ್' ಟಾಪಿಕ್‌ ಆಗಿರುವ ಉರ್ಫಿ ಇಂದು ಜಾವೇದ್ ಅಖ್ತರ್ ವಿಚಾರವಾಗಿ ಗಮನ ಸೆಳೆದಿದ್ದಾರೆ. ಹೌದು, ಉರ್ಫಿ ಜಾವೇದ್ ಅವರು ಖ್ಯಾತ ಕವಿ, ಗೀತ ರಚನೆಕಾರ ಮತ್ತು ಚಿತ್ರ ಕಥೆಗಾರ ಜಾವೇದ್ ಅಖ್ತರ್ ಅವರನ್ನು ಭೇಟಿ ಆಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಉರ್ಫಿ, ಜಾವೇದ್ ಅಖ್ತರ್ ಸಂಬಂಧಿಯೇ?:ಉರ್ಫಿ ಜಾವೇದ್ ಅವರು ಜಾವೇದ್ ಅಖ್ತರ್ ಅವರ ಸಂಬಂಧಿ ಎಂದು ನೆಟ್ಟಿಗರು ಊಹಿಸಿದ್ದರು. ಹಿಂದೊಮ್ಮೆ ತಮ್ಮದೇ ಶೈಲಿಯಲ್ಲಿ ಈ ವದಂತಿಗಳನ್ನು ತಳ್ಳಿ ಹಾಕಿದ್ದರು ಉರ್ಫಿ. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಉರ್ಫಿ ಅವರ ಬಟ್ಟೆಯಲ್ಲಿ "ಜಾವೇದ್ ಅಖ್ತರ್ ಅವರ ಮೊಮ್ಮಗಳು ಅಲ್ಲ" ಎಂದು ಬರೆಯಲಾಗಿತ್ತು. ಇದೀಗ ಜಾವೇದ್ ಅಖ್ತರ್ ಅವರೊಂದಿಗಿನ ಫೋಟೋ ಹಂಚಿಕೊಂಡು ಮತ್ತೆ ಊಹಾಪೋಹಗಳಿಗೆ ವೇದಿಕೆ ಸೃಷ್ಟಿ ಮಾಡಿಕೊಟ್ಟಿದ್ದಾರೆ. ಇವರಿಬ್ಬರ ಹೆಸರಿನಲ್ಲಿ ಜಾವೇದ್​ ಎಂಬ ಪದವಿರುವುದರಿಂದ ಈ ಇಬ್ಬರೂ ಸಂಬಂಧಿ ಎಂದು ಹೇಳಲಾಗಿತ್ತು. ಇದೀಗ ಉರ್ಫಿ ಹಂಚಿಕೊಂಡಿರುವ ಹೊಸ ಫೋಟೋ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಸಖತ್​ ಸದ್ದು ಮಾಡುತ್ತಿದೆ.

ಜಾವೇದ್ ಅಖ್ತರ್ ಜೊತೆ ಉರ್ಫಿ: ಇಂದು ಬೆಳಗ್ಗೆ ಉರ್ಫಿ ಜಾವೇದ್ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಜಾವೇದ್ ಅಖ್ತರ್ ಅವರೊಂದಿಗೆ ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಉರ್ಫಿ ನೀಲಿ ಬಣ್ಣದ ಉಡುಗೆ ತೊಟ್ಟಿದ್ದು, ಇಬ್ಬರೂ ಒಟ್ಟಿಗೆ ಬೆಳಗ್ಗಿನ ಉಪಾಹಾರ ಸೇವಿಸಿದಂತೆ ಕಾಣುತ್ತಿದೆ. "ಕೊನೆಗೂ ಇಂದು ನನ್ನ ಅಜ್ಜನನ್ನು ಭೇಟಿಯಾದೆ" ಎಂದು ಉರ್ಫಿ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಹಾಗೆಯೇ, ''ಅವರು ದಂತಕಥೆ. ಬೆಳಿಗ್ಗೆಯೇ ಅನೇಕ ಜನರು ಸೆಲ್ಫಿಗಾಗಿ ಸಾಲುಗಟ್ಟಿ ನಿಂತರು. ಆದರೆ ಅವರು ಯಾರನ್ನೂ ನಿರಾಕರಿಸಲಿಲ್ಲ. ನಗುವಿನೊಂದಿಗೆ ಎಲ್ಲರೊಂದಿಗೆ ಮಾತನಾಡಿದರು. ಅವರ ನಡೆ ನುಡಿ ನೋಡಿ ನಾನು ವಿಸ್ಮಯಗೊಂಡಿದ್ದೇನೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಲ್ಕಿಸ್ ಬಾನು ಅತ್ಯಾಚಾರಿಗಳಿಗಿಂತ ನಾನು ಸಮಾಜಕ್ಕೆ ಬೆದರಿಕೆಯೇ?: ಚಿತ್ರಾ ವಾಘ್​ ಪತ್ರಕ್ಕೆ ಉರ್ಫಿ ಜಾವೇದ್ ಪ್ರಶ್ನೆ

ಉರ್ಫಿ ಜಾವೇದ್ ಮೇರಿ ದುರ್ಗಾ, ಬೆಪನ್ಹಾ, ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಸೇರಿದಂತೆ ಕೆಲ ಟಿವಿ ಕಾರ್ಯಕ್ರಮಗಳ ಭಾಗವಾಗಿದ್ದರು. ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ. ಸ್ಪ್ಲಿಟ್ಸ್​ವಿಲ್ಲಾ X4 ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ಸಮಯದಿಂದ ತಮ್ಮ ವಿಭಿನ್ನ ಉಡುಗೆ ಮೂಲಕ ಸುದ್ದಿಯಾಗುತ್ತಿದ್ದಾರೆ. ಕಟೌಟ್​​ ನಟಿ ಎಂದೇ ಹೆಸರುವಾಸಿಯಾಗಿದ್ದಾರೆ. ಇವರ ಉಡುಗೆ ಶೈಲಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಬಹುತೇಕರು ತಮ್ಮ ಅಸಮಧಾನ ಹೊರಹಾಕಿದ್ದು, ಉರ್ಫಿ ಜಾವೇದ್ ಕೂಡ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಡುತ್ತಿದ್ದಾರೆ.

ಇದನ್ನೂ ಓದಿ:ಉರ್ಫಿ ವೇಷಭೂಷಣಕ್ಕೆ ಬಿಜೆಪಿ ಆಕ್ಷೇಪ.. ಕ್ರಮಕ್ಕೆ ಆಗ್ರಹಿಸಿ ಮುಖಂಡರಿಂದ ಒತ್ತಾಯ

''ಮುಂಬೈನ ರಸ್ತೆಗಳಲ್ಲಿ ದೇಹದ ಅಂಗಾಂಗಗಳನ್ನು ಪ್ರದರ್ಶಿಸಿ ತಿರುಗಾಡುತ್ತಿರುವ ಉರ್ಫಿ ಜಾವೇದ್ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು'' ಎಂದು ಬಿಜೆಪಿ ಪ್ರದೇಶ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್​​ ಅವರು ಇತ್ತೀಚೆಗೆ ಮುಂಬೈ ಪೊಲೀಸರಲ್ಲಿ ಒತ್ತಾಯಿಸಿದ್ದರು. ಇದಕ್ಕೂ ಕೂಡ ಉರ್ಫಿ ಜಾವೇದ್ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

ABOUT THE AUTHOR

...view details