ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ರಸ್ತೆಗಿಳಿದರೆ ಸಾಕು ಸುದ್ದಿಯಾಗುತ್ತೆ. ವಿವಾದಾತ್ಮಕ ಕಾಮೆಂಟ್, ಚಿತ್ರ ವಿಚಿತ್ರ ಉಡುಗೆ ಮೂಲಕ ಸಖತ್ ಸದ್ದು ಮಾಡುವ ತಾರೆ ಇವರು. ವಿಚಿತ್ರವಾದ ಉಡುಗೆ ತೊಟ್ಟು ಕ್ಯಾಮರಾ ಮುಂದೆ ಬರೋದಂದ್ರೆ ಈ ನಟಿಗೆ ಎಲ್ಲಿಲ್ಲದ ಆಸಕ್ತಿ.
ಮತ್ತೆ ಟ್ರೋಲ್ಗೊಳಗಾದ ಉರ್ಫಿ ಜಾವೇದ್:ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸ್ಟಾರ್ ಉರ್ಫಿ ಜಾವೇದ್ ಅವರು ವಿಚಿತ್ರ ಬಟ್ಟೆ ಮೂಲಕ ಮತ್ತೊಮ್ಮೆ ಇಂಟರ್ನೆಟ್ ಬಿಸಿ ಏರಿಸಿದ್ದಾರೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದು, ಅವರ ಹೊಸ ಅವತಾರದಿಂದ ಮತ್ತೆ ಟ್ರೋಲ್ಗೆ ಒಳಗಾಗಿದ್ದಾರೆ. ನಟಿಯ ವೇಷಭೂಷಣಕ್ಕೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಟಿಯ ವೇಷಭೂಷಣಕ್ಕೆ ಮಿಶ್ರ ಪ್ರತಿಕ್ರಿಯೆ: ಮುಂಬೈ ಮೂಲದ ಪಾಪರಾಜಿಯೊಬ್ಬರು ನಟಿಯ ಏರ್ಪೋರ್ಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ "ಅವರನ್ನು ಬಿಡಿ, ಬಹಳ ಲೇಟ್ ಆಗಿದೆ" ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ಸಾಕಷ್ಟು ಟೀಕೆಗಳನ್ನು ಸಂಗ್ರಹಿಸಿದೆ. ಜೊತೆಗೆ ಕೆಲವರು ನಟಿಯನ್ನು ಬೆಂಬಲಿಸಿದ್ದಾರೆ.
ಉರ್ಫಿ ಜಾವೇದ್ ಬಗ್ಗೆ ಟೀಕೆ: ನಟಿ ಉರ್ಫಿ ಜಾವೇದ್ ಅವರನ್ನು ಟ್ರೋಲ್ ಮಾಡುತ್ತಾ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ''ಇವರು ಪ್ರತಿದಿನ ಏರ್ಪೋರ್ಟ್ನಲ್ಲಿ ಕಾಣಿಸಿಕೊಳ್ಳುತ್ತಾರೆ ಆದ್ರೆ ವಿಮಾನ ಹತ್ತುವುದಿಲ್ಲ. ಅವರು ಹಿಡಿದಿರುವ ಬ್ಯಾಗ್ ಕೂಡ ಬೇರೆಯವರದ್ದೇ ಅನಿಸುತ್ತಿದೆ, ಅಷ್ಟು ಬ್ಯಾಗ್‌ಗಳನ್ನು ಏಕೆ ಹಿಡಿಯುತ್ತಾರೋ, ಅವರ ಸರಾಸರಿ ಉಡುಗೆ ತೂಕ ಕೇವಲ 25 ಗ್ರಾಂ'' ಎಂದು ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಬರೆದಿದ್ದಾರೆ. ಅಯ್ಯೋ ಯಾರ ಮುಖ ನೋಡಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಉರ್ಫಿ ಜಾವೇದ್ಗೆ ಬೆಂಬಲ: ನಟಿಗೆ ಬೆಂಬಲ ವ್ಯಕ್ತಪಡಿಸಿ ಕೆಲ ಕಾಮೆಂಟ್ಗಳು ಸಹ ಬಂದಿವೆ. ಜನರು ಏನೇ ಹೇಳಲಿ, ಉರ್ಫಿ ಜಾವೇದ್ ಉತ್ತಮ ವ್ಯಕ್ತಿಯಾಗಿ ಕಾಣುತ್ತಾರೆ, ಅದು ಸತ್ಯಾಂಶ. ಈ ಉಡುಗೆ ಬಹಳ ಚೆನ್ನಾಗಿದೆ. ಜನರಿಗೆ ಇಷ್ಟ ಆಗಲಿ ಅಥವಾ ಇಷ್ಟ ಆಗದೇ ಇರಲಿ, ಅವರು ವಿಭಿನ್ನವಾಗಿದ್ದು, ಬಹಳ ಆತ್ಮವಿಶ್ವಾಸದಿಂದ ಕೂಡಿದ್ದಾರೆ. ಅವರ ಆತ್ಮವಿಶ್ವಾಸವನ್ನು ಇಷ್ಟ ಪಡುತ್ತೇನೆ. ವಿಭಿನ್ನ ಉಡುಗೆ ಧರಿಸಲು ಅವರಲ್ಲಿರುವ ಆತ್ಮವಿಶ್ವಾಸಕ್ಕೆ ನನ್ನ ಮೆಚ್ಚುಗೆ. ಒಟ್ಟಾರೆ ನೀವು ಖುಷಿ ಖುಷಿಯಾಗಿರಿ. ಜೀವನದಲ್ಲಿ ಧನಾತ್ಮಕವಾಗಿರಿ ಮತ್ತು ಆರೋಗ್ಯವಾಗಿರಿ ಎಂದು ತಿಳಿಸಿದ್ದಾರೆ.