ಕರ್ನಾಟಕ

karnataka

ETV Bharat / entertainment

ಮನೆಯಲ್ಲಿ ತಂದೆಯಿಂದ ದೈಹಿಕ, ಮಾನಸಿಕ ಕಿರುಕುಳ ಅನುಭವಿಸಿದ್ದೆ: ಉರ್ಫಿ ಜಾವೇದ್ - Uorfi Javed photos

ಬಾಲ್ಯದ ತಮ್ಮ ಯಾತನಾಮಯ ಬದುಕನ್ನು ಸಂದರ್ಶನವೊಂದರಲ್ಲಿ ನಟಿ ಉರ್ಫಿ ಜಾವೇದ್ ಬಹಿರಂಗಪಡಿಸಿದ್ದಾರೆ.

Uorfi Javed assaulted
ಉರ್ಫಿ ಜಾವೇದ್​ ಮೇಲೆ ಹಲ್ಲೆ

By

Published : Apr 9, 2023, 6:40 PM IST

ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸದಾ ಸದ್ದು ಮಾಡುತ್ತಿರುವವರು ನಟಿ ಉರ್ಫಿ ಜಾವೇದ್. ಇವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲ್ಯದಲ್ಲಿ ತಾವು ಅನುಭವಿಸಿದ ಕಹಿ ಘಟನಾವಳಿಗಳನ್ನು ವಿವರಿಸಿದ್ದಾರೆ. ಹುಟ್ಟಿ ಬೆಳೆದ ಮನೆ ತೊರೆಯುವ ಮುನ್ನ ಸಾಕಷ್ಟು ಸಂಕಷ್ಟ ಅನುಭವಿಸಿರುವುದಾಗಿ ಹೇಳಿದ್ದಾರೆ.

ಕೇವಲ 15 ವರ್ಷದವಳಿದ್ದಾಗ ಯಾರೋ ಪೋರ್ನ್ ವೆಬ್‌ಸೈಟ್‌ನಲ್ಲಿ ನನ್ನ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಆ ಸಂದರ್ಭದಲ್ಲಿ ನನ್ನ ಮನೆಯವರು ನನ್ನ ಮೇಲೆ ಹಲ್ಲೆ ನಡೆಸಿದರು. ತಂದೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟರು. ಒಮ್ಮೆ ಸಾಯುವಷ್ಟರ ಮಟ್ಟಿಗೆ ಹಲ್ಲೆ ನಡೆಸಿದ್ದರು. ಹೀಗಾಗಿ ಬಾಲ್ಯದಲ್ಲೇ ಮನೆಯಿಂದ ಓಡಿ ಬಂದೆ.

ಚಿಕ್ಕ ವಯಸ್ಸಿನಲ್ಲೇ ನನಗೆ ಮನೆ ಸುರಕ್ಷಿತ ಸ್ಥಳ ಎಂದು ಅನಿಸಲಿಲ್ಲ. ಇದು ನನ್ನನ್ನು ಪ್ರತ್ಯೇಕ ಮನೆ ಖರೀದಿಸುವಂತೆ ಪ್ರೇರೇಪಿಸಿತು. ಹೀಗಾಗಿ ಕನಸುಗಳನ್ನು ನನಸು ಮಾಡಿಕೊಳ್ಳಲು ಲಕ್ನೋದಿಂದ ದೆಹಲಿಗೆ ಹೋದೆ. ಆಗ ನನಗೆ ಕೇವಲ 17 ವರ್ಷ ವಯಸ್ಸು. ಅಂದಿನಿಂದ ನಾನೆಂದೂ ತಂದೆಯೊಂದಿಗೆ ಮಾತನಾಡಿಲ್ಲ.

ನಾನು ಸುರಕ್ಷಿತ ವಾತಾವರಣದಲ್ಲಿ ಬೆಳೆದಿಲ್ಲ. ಮನೆಯಿಂದ ಹೊರಬಂದಿದ್ದು ನನ್ನ ಅತ್ಯುತ್ತಮ ನಿರ್ಧಾರ. ಇದಕ್ಕೂ ಮೊದಲು, ಮುಂಬೈನಲ್ಲಿ ಬಾಡಿಗೆ ಅಪಾರ್ಟ್ಮೆಂಟ್ ಹುಡುಕುವುದು ನನಗೆ ದೊಡ್ಡ ಸಾಹಸದ ಕೆಲಸವೇ ಆಗಿತ್ತು.

ಕೆಲವರು ನಿಮ್ಮ ತಂದೆ ತಾಯಿ ಎಂಬಂತೆಯೇ ವರ್ತಿಸುತ್ತಾರೆ. ಅವರು ಅನೇಕ ನಿರ್ಬಂಧಗಳನ್ನು ವಿಧಿಸುತ್ತಾರೆ. ಅಲ್ಲದೇ, ನಾನು ಒಬ್ಬಂಟಿ. ಇದೂ ಕೂಡ ಮನೆ ಹುಡುಕಲು ಕಷ್ಟವಾಗಿತ್ತು. ನಾನು ಧರಿಸುವ ಬಟ್ಟೆಯ ವಿಚಾರವೂ ಮನೆ ಹುಡುಕಲು ಸಾಕಷ್ಟು ಅಡ್ಡಿಯಾಗಿತ್ತು ಎಂದು ವಿವರಿಸಿದ್ದಾರೆ.

ಉರ್ಫಿ ಜಾವೇದ್ ಕೆಲ ಸೀರಿಯಲ್​​ಗಳಲ್ಲಿ ನಟಿಸಿದ್ದಾರೆ. ಹಿಂದಿ ಬಿಗ್​​ ಬಾಸ್​ ಒಟಿಟಿ ಮಾಜಿ ಸ್ಪರ್ಧಿ. ಅದಾದ ಬಳಿಕ ತಮ್ಮ ಉಡುಪಿನ ಶೈಲಿ ಮತ್ತು ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದು ಹೆಚ್ಚಾಗಿ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಬಟ್ಟೆ ಎನ್ನುವುದಕ್ಕಿಂತ ಯಾವುದಾದರು ಸಾಮಗ್ರಿ ಬಳಸಿ, ಅದರಿಂದ ಹೊಸ ಶೈಲಿಯ ಉಡುಗೆ ಮಾಡಿಸಿಕೊಳ್ಳುತ್ತಾರೆ. ಈ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದ ಬಿಸಿ ಏರಿಸುತ್ತಾರೆ. ಇವರ ವಿಚಿತ್ರ ಉಡುಗೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಹೆಚ್ಚಾಗಿ ಟ್ರೋಲ್​​ಗೊಳಗಾಗುವ ಇವರು ಯಾವುದನ್ನೂ ಲೆಕ್ಕಿಸದೇ, ತಮಗೆ ಬೇಕಾದಂತೆ ಬದುಕುತ್ತಿದ್ದಾರೆ.

ಇದನ್ನೂ ಓದಿ:ಈಸ್ಟರ್‌ಗೆ ಶುಭ ಕೋರಿ ಜೈಲಿನಿಂದಲೇ ಜಾಕ್ವೆಲಿನ್‌ಗೆ ಪ್ರೇಮ ಪತ್ರ ಬರೆದ ಸುಕೇಶ್ ಚಂದ್ರಶೇಖರ್

ಇತ್ತೀಚೆಗಷ್ಟೇ ಫ್ಯಾಷನ್ ಐಕಾನ್​​ ಕರೀನಾ ಕಪೂರ್ ಖಾನ್ ಅವರು ಉರ್ಫಿ ಜಾವೇದ್ ಅವರ ಫ್ಯಾಷನ್ ಸೆನ್ಸ್​ಗೆ ಮೆಚ್ಚುಗೆ ಸೂಚಿಸಿದ್ದರು. ತಮಗಿಷ್ಟ ಬಂದ ಬಟ್ಟೆ ತೊಡುತ್ತಾರೆ. ಅವರ ಧೈರ್ಯಕ್ಕೆ ನನ್ನ ಸೆಲ್ಯೂಟ್ ಎಂದು ಗುಣಗಾನ ಮಾಡಿದ್ದರು. ಇದನ್ನು ಕೇಳಿದ ಉರ್ಫಿ ಜಾವೇದ್​ ಕುಣಿದು ಕುಪ್ಪಳಿಸಿದ್ದರು. ಆದ್ರೆ ಕರೀನಾ ಸಂಬಂಧಿ, ನಟ ರಣ್​ಬೀರ್​ ಕಪೂರ್ ಅವರು​ ಉರ್ಫಿ ಅವರ ಆಯ್ಕೆಯನ್ನು ಬ್ಯಾಡ್​ ಟೇಸ್ಟ್ ಎಂದಿದ್ದರು.

ಇದನ್ನೂ ಓದಿ:ಬರ್ತ್‌ಡೇ ದಿನ ಅಪಾರ ಪ್ರೀತಿ ತೋರಿದ ಅಭಿಮಾನಿಗಳಿಗೆ ಅಲ್ಲು ಅರ್ಜುನ್​ ಕೃತಜ್ಞತೆ

ABOUT THE AUTHOR

...view details