ಶ್ರದ್ಧಾ ಶ್ರೀನಾಥ್ ಅಭಿನಯದ 2016 ರಲ್ಲಿ ತೆರೆ ಕಂಡಿದ್ದ ಯು- ಟರ್ನ್ ಚಿತ್ರ ಇದೀಗ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಈ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಜವಾನಿ ಜಾನೆಮನ್ ನಟಿ ಅಲಯ ಎಫ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಕಥೆಯಾಗಿದ್ದು, ಅಕ್ರಮವಾಗಿ ಯು - ಟರ್ನ್ ತೆಗೆದುಕೊಳ್ಳುವ ವಾಹನ ಚಾಲಕರ ಸುತ್ತ ಸುತ್ತುತ್ತದೆ. ಅಲ್ಲದೇ ಈ ಒಂದು ಯು- ಟರ್ನ್ ಅವರ ಬದುಕನ್ನೇ ಬದಲಾಯಿಸುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಇದುವೇ ಸಿನಿಮಾದ ಕಥಾಹಂದರ. ಅಲಯಾ ಅವರು ರಾಧಿಕಾ ಎಂಬ ಪತ್ರಕರ್ತೆಯ ಪಾತ್ರ ನಿರ್ವಹಿಸಿದ್ದಾರೆ.
ಯು - ಟರ್ನ್ ಕಥೆ: ಚಿತ್ರದಲ್ಲಿ ಅವಳು (ರಾಧಿಕಾ) ಒಂದು ನಿರ್ದಿಷ್ಟ ಮೇಲ್ಸೆತುವೆಯಲ್ಲಿ ಸಂಭವಿಸುವ ಸರಣಿ ಅಪಘಾತಗಳನ್ನು ತನಿಖೆ ಮಾಡುತ್ತಾರೆ. ಆ ಸ್ಥಳದಲ್ಲಿ ಅಕ್ರಮವಾಗಿ ಯು - ಟರ್ನ್ ತೆಗೆದುಕೊಳ್ಳುವ ವಾಹನ ಚಾಲಕರೇ ಈ ಅಪಘಾತಗಳಿಗೆ ಮೂಲ ಕಾರಣ ಎಂಬುದು ಆಕೆಗೆ ಅರಿವಾಗುತ್ತದೆ. ಬಳಿಕ ಅವಳು ಆ ವಾಹನ ಚಾಲಕರೊಂದಿಗೆ ವೈಯಕ್ತಿಕವಾಗಿ ವ್ಯವಹರಿಸಲು ಪ್ರಾರಂಭಿಸುತ್ತಾರೆ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಅದಾಗ್ಯೂ ಒಬ್ಬ ಸವಾರ ಮರಣ ಹೊಂದುತ್ತಾನೆ. ಇದು ಅವಳ ತನಿಖೆ ಗಾಢವಾದ ತಿರುವು ಪಡೆದುಕೊಳ್ಳುತ್ತದೆ.
ಈ ಪ್ರಕರಣವನ್ನು ಬಯಲಿಗೆಳೆಯಲು ನಟ ಪ್ರಿಯಾಂಶು ಪೈನ್ಯುಲಿ ಅವರು ಇನ್ಸ್ಪೆಕ್ಟರ್ ಅರ್ಜುನ್ ಸಿನ್ಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಮತ್ತು ಪೊಲೀಸರು ಎರಡು ಕಡೆಯಿಂದಲೂ ತನಿಖೆ ಪ್ರಾರಂಭಿಸುತ್ತಾರೆ. ಯು- ಟರ್ನ್ ತೆಗೆದುಕೊಂಡವರೆಲ್ಲ ಸತ್ತರು. ರಾಧಿಕಾ ಅವರಲ್ಲಿ ಈ ಸಾವುಗಳಿಗೆ ಸಂಬಂಧಿಸಿರುವ ಬಲವಾದ ಪುರಾವೆಗಳಿವೆ. ಅದಾಗ್ಯೂ ಎಲ್ಲ ಘಟನೆಗಳು ಗೌಪ್ಯವಾಗಿಯೇ ಉಳಿದು ಬಿಡುತ್ತವೆ. ಹಾಗಾದರೆ ಅವರಿಬ್ಬರು ಜೊತೆಯಾಗಿ ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಾರೆ? ಎಂಬುದೇ ಯು- ಟರ್ನ್ ಕಥೆ.