ಕರ್ನಾಟಕ

karnataka

ETV Bharat / entertainment

'ಲೈನ್​ ಮ್ಯಾನ್​' ಬಿಡುಗಡೆಗೆ ಭರದ ಸಿದ್ಧತೆ.. ರಘು ಶಾಸ್ತ್ರಿ ನಿರ್ದೇಶನದ ಚಿತ್ರಕ್ಕೆ ಸಿಕ್ತು ಸೆನ್ಸಾರ್ ಒಪ್ಪಿಗೆ - trigun

Line Man movie: ರಘು ಶಾಸ್ತ್ರಿ ನಿರ್ದೇಶನದ ಮತ್ತು ತ್ರಿಗುಣ್ ನಟನೆಯ 'ಲೈನ್ ಮ್ಯಾನ್' ಸಿನಿಮಾ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದ್ದು, ಯು ಸರ್ಟಿಫಿಕೆಟ್ ಸಿಕ್ಕಿದೆ.

U certificate for Line man movie
ಲೈನ್​ ಮ್ಯಾನ್ ಸಿನಿಮಾಗೆ ಯು ಸರ್ಟಿಫಿಕೇಟ್

By ETV Bharat Karnataka Team

Published : Sep 6, 2023, 1:22 PM IST

ಕನ್ನಡ ಚಿತ್ರರಂಗದಲ್ಲಿ ರನ್ ಆಂಟೋನಿ ಹಾಗೂ ಟಕ್ಕರ್ ಚಿತ್ರಗಳಿಗೆ ಆ್ಯಕ್ಷನ್​ ಕಟ್​ ಹೇಳಿದ್ದ ನಿರ್ದೇಶಕ ರಘು ಶಾಸ್ತ್ರಿ ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಬರುತ್ತಿದ್ದಾರೆ. ಈ ಚಿತ್ರಕ್ಕೆ 'ಲೈನ್ ಮ್ಯಾನ್' ಎಂಬ ಶೀರ್ಷಿಕೆ ಇಡಲಾಗಿದೆ. ಡಿಫ್ರೆಂಟ್​​ ಟೈಟಲ್ ಮೂಲಕ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಭಿನ್ನ ಶೀರ್ಷಿಕೆಯ ಸಿನಿಮಾದ ಶೂಟಿಂಗ್​​ ಪೂರ್ಣಗೊಂಡಿದೆ. ಚಿತ್ರತಂಡ ಸಿನಿಮಾ ಬಿಡುಗಡೆಗೆ ಸಿದ್ಧತೆ ಪ್ರಾರಂಭಿಸಿದೆ. ಸದ್ಯ, 'ಲೈನ್ ಮ್ಯಾನ್' ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದ್ದು, ಯು ಸರ್ಟಿಫಿಕೆಟ್ ಸಿಕ್ಕಿದೆ.

ಯುವ ನಟ ತ್ರಿಗುಣ್ ಅವರು ಲೈನ್ ಮ್ಯಾನ್​​ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆರ್.ಜಿ.ವಿ ನಿರ್ದೇಶನದ 'ಕೊಂಡ' ಚಿತ್ರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗಿದು ನಾಯಕ ನಟನಾಗಿ ಚೊಚ್ಚಲ ಚಿತ್ರ. ಹಾಗಾಗಿ ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆ, ಭರವಸೆಯನ್ನಿಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ‌, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ರಘು ಶಾಸ್ತ್ರಿ ನಿರ್ದೇಶನದ ಲೈನ್​ ಮ್ಯಾನ್​ ಚಿತ್ರಕ್ಕೆ ಸಿಕ್ತು ಸೆನ್ಸಾರ್ ಒಪ್ಪಿಗೆ

ವಿದ್ಯುತ್​ಗೆ ಸಂಬಂಧಿಸಿದ ಕೆಲಸ, ತೊಂದರೆ ಸರಿಪಡಿಸುವ 'ಲೈನ್ ಮ್ಯಾನ್' ಸುತ್ತ ಈ ಕಥೆ ಸುತ್ತುತ್ತದೆ. ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಚಿತ್ರವೇ 'ಲೈನ್ ಮ್ಯಾನ್'. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ, ಜೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಚಾಮರಾಜನಗರದ ಚಂದಕವಾಡಿಯಲ್ಲಿ ಶೂಟಿಂಗ್ ನಡೆಸಲಾಗಿದ್ದು, ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಸೆನ್ಸಾರ್ ಪಾಸಾಗಿರುವ ಲೈನ್ ಮ್ಯಾನ್ ಸಿನಿಮಾ ಅಕ್ಟೋಬರ್ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಬಿಡುಗಡೆಗೆ ಬೇಕಾದ ತಯಾರಿಯಲ್ಲಿ ಬ್ಯುಸಿಯಾಗಿದೆ.

ಇದನ್ನೂ ಓದಿ:ಹೆಚ್ಚಿದ 'Jawan' ಚಿತ್ರದ ಕ್ರೇಜ್​​.. ಚಿತ್ರಮಂದಿರದಲ್ಲಿ ಟಿಕೆಟ್​ಗಾಗಿ ಮುಗಿಬಿದ್ದ ಅಭಿಮಾನಿಗಳು

ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್​ ಆಧಾರಿತ ಸಿನಿಮಾಗಳು ನಿರ್ಮಾನ ಆಗುತ್ತಿವೆ. ಸಿನಿಪ್ರಿಯರು ಕಥೆಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡಿರುವ ಸಪ್ತಸಾಗರದಾಚೆ ಎಲ್ಲೋ, ಟೋಬಿ ಅಂತಹ ಸಿನಿಮಾಗಳು ಪ್ರೇಕ್ಷಕರ ಮನ ತಲುಪುವಲ್ಲಿ ಯಶ ಕಂಡಿವೆ. ನಾವು ದಿನನಿತ್ಯ ನೋಡುವ 'ಲೈನ್ ಮ್ಯಾನ್' ಸುತ್ತ ಹೆಣೆಯಲಾದ ಈ ಕಥೆಗೆ ಪ್ರೇಕ್ಷಕರು ಏನಂತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಪ್ರೀತ್ಸಿದ್​ ಹುಡ್ಗೀನೇ ಕಳ್ಕೊಂಡ್ರೆ ಬದ್ಕೋದ್​ ಹೇಗೆ? ಅಂತಿದ್ದಾರೆ ಗೋಲ್ಡನ್​ ಸ್ಟಾರ್: 'ಬಾನದಾರಿಯಲ್ಲಿ' ಟ್ರೇಲರ್​ ರಿಲೀಸ್​

ABOUT THE AUTHOR

...view details