ಕರ್ನಾಟಕ

karnataka

ETV Bharat / entertainment

'ಯು.ಐ' ಚಿತ್ರೀಕರಣ ಆರಂಭಿಸಿದ ಬುದ್ಧಿವಂತ - U I film actress

ರಿಯಲ್ ಸ್ಟಾರ್ ಉಪೇಂದ್ರ ಅವರ ಯು.ಐ ಸಿನಿಮಾ ಶೂಟಿಂಗ್ ಸೋಮವಾರದಿಂದ ಆರಂಭವಾಗಿದೆ.

U & I film shooting started from yesterday
'ಯು.ಐ' ಚಿತ್ರೀಕರಣ ಆರಂಭ

By

Published : Jun 28, 2022, 3:22 PM IST

ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಚಿತ್ರರಂಗವಲ್ಲದೇ ಸೌಥ್​ ಸಿನಿಮಾ ಇಂಡಸ್ಟ್ರಿಯಲ್ಲಿಯೇ ಟ್ಯಾಲೆಂಟೆಡ್ ನಿರ್ದೇಶಕ ಕಮ್ ನಟ ಅನ್ನೋದನ್ನು ಅವರು ಈಗಾಗಲೇ ಸಾಬೀತು ಪಡಿಸಿದ್ದಾರೆ. ಏಳು ವರ್ಷಗಳ ಬಳಿಕ ಉಪೇಂದ್ರ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದು, ಕುದುರೆ ಮುಖ ಆಕಾರದ ಫೋಸ್ಟರ್​ನಲ್ಲಿ ಯು.ಐ ಅಂತಾ ಟೈಟಲ್ ಇಟ್ಟಿರೋ ಚಿತ್ರದ ಮುಹೂರ್ತ ಕಾರ್ಯಕ್ರಮ ಈ ತಿಂಗಳ ಆರಂಭದಲ್ಲಿ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದಿತ್ತು. ಈ ಡಿಫ್ರೆಂಟ್ ಟೈಟಲ್ ಈಗಾಗಲೇ ಸಖತ್​ ಸದ್ದು ಮಾಡಿದ್ದು, ಸೋಮವಾರದಿಂದ ಚಿತ್ರೀಕರಣ ಕೂಡ ಶುರುವಾಗಿದೆ.

'ಯು.ಐ' ಚಿತ್ರತಂಡ

ಮಿನರ್ವ ಮಿಲ್‌ನಲ್ಲಿ ಸೆಟ್​ ಹಾಕಿ ಮೊದಲ ಹಂತದ ಚಿತ್ರೀಕರಣವನ್ನು ಉಪ್ಪಿ ಆರಂಭಿಸಿದ್ದಾರೆ. ಚಿತ್ರಕ್ಕೆ ನಟಿ ಶ್ರೀನಿಧಿ ಶೆಟ್ಟಿ ಹಾಗು ತಮನ್ನಾರನ್ನು ಸಂಪರ್ಕ ಮಾಡಿಲ್ಲ. ಆದರೆ ಸೌಥ್​ ಸಿನಿಮಾ‌ ಇಂಡಸ್ಟ್ರಿಗೆ ಪರಿಚಯ ಇರುವ ನಟಿಯೇ ಈ ಸಿನಿಮಾಗೆ ನಾಯಕಿಯಾಗುವ ಸಾಧ್ಯತೆ ಇದೆ. ಆಯ್ಕೆ ಯಾವಾಗ ಎಂದು ಹೇಳೋದಿಕ್ಕೆ ಬರಲ್ಲ. ಸದ್ಯ ನಮ್ಮ ತಂಡ ಸಿನಿಮಾಗೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದೆ ಎಂದು ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಿಳಿಸಿದ್ದಾರೆ.

'ಯು.ಐ' ಚಿತ್ರತಂಡ

ಸೂಪರ್ ಸ್ಟಾರ್ ಉಪೇಂದ್ರ ನಿನ್ನೆಯಿಂದ ಫೀಲ್ಡಿಗಿಳಿದಿದ್ದಾರೆ. ಈ‌ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆಯೇ ಇದೆ. ಲಹರಿ ಫಿಲಂಸ್, ವೀನಸ್ ಎಂಟರ್​ಪ್ರೈಸಸ್ ಜಂಟಿಯಾಗಿ ನಿರ್ಮಿಸುತ್ತಿರುವ ಯು-ಐ ಚಿತ್ರಕ್ಕೆ ಯುವ ತಂತ್ರಜ್ಞರು‌ ಕೆಲಸ ಮಾಡುತ್ತಿರುವುದು ವಿಶೇಷವೇ ಸರಿ.

ಇದನ್ನೂ ಓದಿ:ಹಾಲಿವುಡ್​ ಸಿನಿಮಾ 'ಬೀಸ್ಟ್​' ಪೋಸ್ಟರ್​ನ ಕಾಪಿ ಮಾಡಿದ್ಯಾ 'ಪಠಾಣ್​' ?

ABOUT THE AUTHOR

...view details