ಕರ್ನಾಟಕ

karnataka

ETV Bharat / entertainment

'ಸ್ಟೂಡೆಂಟ್​ ಆಫ್​ ದಿ ಇಯರ್'​ನಲ್ಲಿ ಪಾತ್ರಗಳ​ ಆಯ್ಕೆ ತಪ್ಪಾಗಿದೆ; ಕರಣ್​ ಜೋಹರ್​ಗೆ ಟ್ವಿಂಕಲ್​ ಖನ್ನಾ ಹೀಗಂದಿದ್ಯಾಕೆ? - ಈಟಿವಿ ಭಾರತ ಕನ್ನಡ

'ಸ್ಟೂಡೆಂಟ್​ ಆಫ್​ ದಿ ಇಯರ್'​ ಸಿನಿಮಾದಲ್ಲಿ ನಿರ್ದೇಶಕ ಕರಣ್​ ಜೋಹರ್​ ಪಾತ್ರಗಳ ಆಯ್ಕೆಯಲ್ಲಿ ತಪ್ಪು ಮಾಡಿದ್ದಾರೆ ಎಂದು ನಟಿ, ಲೇಖಕಿ ಟ್ವಿಂಕಲ್​ ಖನ್ನಾ ಹೇಳಲು ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ.

Twinkle Khanna feels Karan Johar made casting error in SOTY as she posts about academic achievement, here's how latter reacts
'ಸ್ಟೂಡೆಂಟ್​ ಆಫ್​ ದಿ ಇಯರ್'​ನಲ್ಲಿ ಪಾತ್ರಗಳ​ ಆಯ್ಕೆ ತಪ್ಪಾಗಿದೆ; ಕರಣ್​ ಜೋಹರ್​ಗೆ ಟ್ವಿಂಕಲ್​ ಖನ್ನಾ ಹೀಗಂದಿದ್ಯಾಕೆ?

By ETV Bharat Karnataka Team

Published : Oct 28, 2023, 7:09 PM IST

ಬಾಲಿವುಡ್​ ನಟಿ, ಲೇಖಕಿ ಟ್ವಿಂಕಲ್​ ಖನ್ನಾ ಕಳೆದ ತಿಂಗಳು ಲಂಡನ್​ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೋಲ್ಡ್​ಸ್ಮಿತ್​ನಲ್ಲಿ ಫಿಕ್ಷನ್​ ರೈಟಿಂಗ್​ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅವರ ಪ್ರಬಂಧವನ್ನು ಪ್ರತಿಷ್ಠಿತ ಪ್ಯಾಟ್​ ಕವನಾಗ್​ ಪ್ರಶಸ್ತಿಗಾಗಿ ಲಾಂಗ್​ಲಿಸ್ಟ್​ನಲ್ಲಿ ಸೇರಿಸಲಾಗಿದೆ. ಈ ಸಂತಸದ ವಿಚಾರವನ್ನು ಟ್ವಿಂಕಲ್​ ಖನ್ನಾ ಅವರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪತಿ, ನಟ ಅಕ್ಷಯ್​ ಕುಮಾರ್​ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, 'ಸ್ಟೂಡೆಂಟ್​ ಆಫ್​ ದಿ ಇಯರ್'​ ಸಿನಿಮಾದಲ್ಲಿ ಅವರ ಸ್ನೇಹಿತ ಕರಣ್​ ಜೋಹರ್​ ಪಾತ್ರಗಳ ಆಯ್ಕೆಯಲ್ಲಿ ತಪ್ಪು ಮಾಡಿದ್ದಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಚಿತ್ರದಲ್ಲಿ ಬಾಲಿವುಡ್​ ಬಹುಬೇಡಿಕೆಯ ನಟರಾದ ಆಲಿಯಾ ಭಟ್​, ವರುಣ್​ ಧವನ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟ್ವಿಂಕಲ್​ ಖನ್ನಾ ಇನ್​ಸ್ಟಾ ಪೋಸ್ಟ್​: ಟ್ವಿಂಕಲ್​ ಖನ್ನಾ ಅವರು ಸೋಷಿಯಲ್​ ಮೀಡಿಯಾ ವೇದಿಕೆಯಾದ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡು, "ಇಂತಹದ್ದೊಂದು ದೊಡ್ಡ ಕ್ಷಣ, ಇದನ್ನು ನಾನು ಹಂಚಿಕೊಳ್ಳಲು ಮೊದಲು ಹಿಂಜರಿಯುತ್ತಿದ್ದೆ. ಆದರೆ ವಯಸ್ಸು ನಿಜವಾಗಿಯೂ ಕೇವಲ ಒಂದು ಸಂಖ್ಯೆ ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಅದು ಅಡ್ಡಿಯಾಗುವುದಿಲ್ಲ. ನಾನು ಅಂತಿಮ ಪ್ರಬಂಧದಲ್ಲಿ ಡಿಸ್ಟಿಂಕ್ಷನ್​ ಪಡೆದಿದ್ದೇನೆ. ಪ್ರಬಂಧವನ್ನು ಲಂಡನ್​ ವಿಶ್ವವಿದ್ಯಾಲಯದ ಗೋಲ್ಡ್​ ಸ್ಮಿತ್ಸ್​ ಅವರ ಪ್ಯಾಟ್​ ಕವನಾಗ್​ ಪ್ರಶಸ್ತಿಯ ಲಾಂಗ್​ಲಿಸ್ಟ್​ನಲ್ಲಿ ಸೇರಿಸಲಾಗಿದೆ. ನನ್ನ ಹಳೆಯ ಸ್ನೇಹಿತ ಬಹುಶಃ 'ಸ್ಟೂಡೆಂಟ್​ ಆಫ್​ ದಿ ಇಯರ್'​ ಸಿನಿಮಾಗಾಗಿ ನಟರನ್ನು (ಕಾಸ್ಟಿಂಗ್​​) ಆರಿಸುವಲ್ಲಿ ತಪ್ಪಾಗಿದೆ ಎಂದು ನಾನು ಸೇರಿಸಬಹುದೇ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ತೇಜಸ್​​'ಗೆ ಮಿಶ್ರ ಪ್ರತಿಕ್ರಿಯೆ: ಕಂಗನಾ ರಣಾವತ್​ ಸಿನಿಮಾ 'ಗಳಿಕೆ'ಯಲ್ಲಿ ಹಿನ್ನೆಡೆ!

ನೀವು ವರ್ಷದ ಶಾಶ್ವತ ವಿದ್ಯಾರ್ಥಿ..: 'ಸ್ಟೂಡೆಂಟ್​ ಆಫ್​ ದಿ ಇಯರ್'​ ನಿರ್ದೇಶಕ ಮತ್ತು ಟ್ವಿಂಕಲ್​ ಖನ್ನಾ ಅವರ ಗೆಳೆಯ ಕರಣ್​ ಜೋಹರ್​ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿ ಟ್ವಿಂಕಲ್​ ಅವರನ್ನು ಶಾಶ್ವತ ವಿದ್ಯಾರ್ಥಿ ಎಂದು ಒಪ್ಪಿಕೊಂಡಿದ್ದಾರೆ. "ಅಭಿನಂದನೆಗಳು ಡಾರ್ಲಿಂಗ್​. ನಿಮ್ಮ ಬಗ್ಗೆ ಯಾವಾಗಲೂ ಹೆಮ್ಮೆ ಪಡುತ್ತೇನೆ. ನೀವು ಹೇಳಿದ್ದು ಸರಿ. ನೀವು ವರ್ಷದ ಶಾಶ್ವತ ವಿದ್ಯಾರ್ಥಿ (You are the eternal student of the year)" ಎಂದು ಹೇಳಿದ್ದಾರೆ. ಟ್ವಿಂಕಲ್​ ಪತಿ ಅಕ್ಷಯ್​ ಕುಮಾರ್​ ಕೂಡ ಹೆಮ್ಮೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಪ್ರತಿ ವರ್ಷ ತಮ್ಮ ಮಕ್ಕಳಿಗೆ ಅತ್ಯುತ್ತಮ ತಾಯಿ ಎಂಬ ಬಿರುದನ್ನು ಕೂಡ ನೀಡಿದ್ದಾರೆ.

ಇದನ್ನೂ ಓದಿ:ನಾಳೆ ಹೊರಬೀಳಲಿದೆ 'ಇಂಡಿಯನ್ 2' ಅಪ್​ಡೇಟ್ಸ್.. ಕಮಲ್​ ಹಾಸನ್​​ ಅಭಿಮಾನಿಗಳಲ್ಲಿ ಕುತೂಹಲ

ABOUT THE AUTHOR

...view details