ಕಳೆದ ಸಾಲಿನಲ್ಲಿ ಕನ್ನಡ ಚಿತ್ರರಂಗ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಸೈ ಎನಿಸಿಕೊಂಡಿದೆ. ಕೆಜಿಎಫ್, ಕಾಂತಾರ ಚಿತ್ರಗಳಿಂದ ಸ್ಯಾಂಡಲ್ವುಡ್ ವರ್ಚಸ್ಸು ಉತ್ತುಂಗಕ್ಕೇರಿದೆ. ಹಾಗಾಗಿ ಸದ್ಯ ಭಾರತೀಯ ಚಿತ್ರರಂಗದ ಕಣ್ಣು ಸ್ಯಾಂಡಲ್ವುಡ್ ಮೇಲಿದೆ. ಕನ್ನಡದ ಕಬ್ಜ ಈ ಸಾಲಿನ ಬಹು ನಿರೀಕ್ಷಿತ ಸಿನಿಮಾ ಆಗಿದ್ದು, ಸಖತ್ ಸೌಂಡ್ ಮಾಡ್ತಿದೆ.
ಚಿತ್ರದ ಅದ್ಧೂರಿತನ ಟ್ರೇಲರ್ನಲ್ಲಿ..ಎಲ್ಲೆಲ್ಲೂ 'ಕಬ್ಜ'ದ್ದೇ ಸದ್ದು. ಭಾರತೀಯ ಚಿತ್ರರಂಗದಲ್ಲಿ ಕಬ್ಜದ್ದೇ ಸುನಾಮಿ. ಸಾಗರದಾಚೆಗೂ ಕಬ್ಜ ಕ್ರೇಜ್ ಆವರಿಸಿಕೊಂಡಿದೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್, ಟೀಸರ್, ಪೋಸ್ಟರ್, ಹಾಡುಗಳು ಸಿನಿಮಾ ಗೆಲ್ಲುವ ಸೂಚನೆ ಕೊಟ್ಟಿದೆ. ಕಬ್ಜ ಟ್ರೇಲರ್ ನೋಡಿದವರು ವಾವ್, ಇದು ನೆಕ್ಸ್ಟ್ ಲೆವೆಲ್ ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರದ ಅದ್ಧೂರಿತನ ಈ ಟ್ರೇಲರ್ನಲ್ಲಿ ಗೊತ್ತಾಗುತ್ತದೆ.
ಅದ್ಧೂರಿ ಸೆಟ್ಗಳು: ಟ್ರೇಲರ್ನಲ್ಲಿ ಅದ್ಧೂರಿ ಸೆಟ್ಗಳು ಹೈಲೈಟ್ ಆಗಿವೆ. ಭಿನ್ನ ವಿಭಿನ್ನ ಸೆಟ್ಗಳು ಕಣ್ಮನ ಸೆಳೆಯುತ್ತಿವೆ. ಪ್ರತೀ ಸೆಟ್ಗಳು ಶ್ರೀಮಂತಿಕೆಯಿಂದ ಕೂಡಿದೆ. ನಿರ್ದೇಶಕ ಆರ್ ಚಂದ್ರು ಕನಸಿಗೆ ಬೆಂಗಾವಲಾಗಿ ನಿಂತು, ಈ ಅದ್ಭುತ ಸೆಟ್ಗಳಿಗೆ ರೂಪು ರೇಷೆ ಸಿದ್ಧಪಡಿಸಿರುವುದರ ಹಿಂದಿನ ಕಲಾಕಾರ್ ಎಂದರೆ ಕೆಜಿಎಫ್ ಖ್ಯಾತಿಯ ಶಿವಕುಮಾರ್.
150 ಜನರ ಶ್ರಮ: ಹೌದು, ಸುಮಾರು 150 ಜನರ ತಂಡ ಕಟ್ಟಿಕೊಂಡು ಈ ಸೆಟ್ಗಳಿಗಾಗಿ ಹಗಲಿರುಳು ಕಲಾ ನಿರ್ದೇಶಕ ಶಿವಕುಮಾರ್ ಕೆಲಸ ಮಾಡಿದ್ದಾರೆ. ಈ ಮಧ್ಯೆ ಕೋವಿಡ್ ಎದುರಾದ್ರೂ ಯಾವುದಕ್ಕೂ ಜಗ್ಗದೇ ಸಿನಿಮಾದ ಕಥೆಗೆ, ಕಾಲಘಟ್ಟಕ್ಕೆ ತಕ್ಕಂತೆ ಸೆಟ್ಗಳನ್ನು ಶಿವಕುಮಾರ್ ಹಾಕಿರೋದು ವಿಶೇಷ. ಕಬ್ಜ ಸಿನಿಮಾದಲ್ಲಿ ಒಂದಲ್ಲ ಎರಡಲ್ಲ 30 ಮೇಜರ್ ಸೆಟ್ಗಳಿವೆ. ಫ್ಲವರ್ ಮಾರ್ಕೆಟ್, ಪ್ಯಾಲೆಸ್, ಸ್ಟ್ರೀಟ್, ಜೈಲು ಸೇರಿದಂತೆ ಪ್ರಮುಖ ಸೆಟ್ಗಳು ಇವೆ. ನೋಡುಗರಿಗಿದು ಹಾಲಿವುಡ್ ಸಿನಿಮಾದ ಫೀಲ್ ಕೊಡುತ್ತೆ.