ಕರ್ನಾಟಕ

karnataka

ETV Bharat / entertainment

Tweet War on RRR movie: ರೆಸುಲ್ ಪೂಕುಟ್ಟಿ ವಿರುದ್ಧ ಕಿಡಿಕಾರಿದ ಕೀರವಾಣಿ, ಶೋಬು - ರೆಸುಲ್ ಪೂಕುಟ್ಟಿ ವಿರುದ್ಧ ಕಿಡಿಕಾರಿದ ಕೀರವಾಣಿ ಮತ್ತು ಶೋಬು

ಸೌಂಡ್ ಇಂಜಿನಿಯರ್ ಮತ್ತು ಖ್ಯಾತ ಆಸ್ಕರ್ ವಿಜೇತ ರೆಸುಲ್ ಪೂಕುಟ್ಟಿ 'ಆರ್‌ಆರ್‌ಆರ್' ಕುರಿತು ಮಾಡಿದ ಕಮೆಂಟ್‌ ವಿವಾದಾಸ್ಪದವಾಗಿವೆ. ಆದರೆ ಇದಕ್ಕೆ ಸಂಗೀತ ನಿರ್ದೇಶಕರಾದ ಕೀರವಾಣಿ ಸಖತ್ ಕೌಂಟರ್ ಕೊಟ್ಟಿದ್ದಾರೆ.

Tweet War on RRR movie
'RRR' ಸಿನಿಮಾ

By

Published : Jul 6, 2022, 4:16 PM IST

'RRR' ಸಿನಿಮಾ ನೋಡಿದ ಕೆಲವು ವಿದೇಶಿಗರು ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಭಾರತೀಯ ಸಿನಿಮಾ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಈಗಾಗಲೇ ಅವರಿಗೆ ಕೌಂಟರ್​ ಸಹ ನೀಡಿದ್ದಾರೆ. ಇದೀಗ ಖ್ಯಾತ ಸೌಂಡ್ ಇಂಜಿನಿಯರ್ ರೆಸುಲ್ ಪೂಕುಟ್ಟಿ ಮಾಡಿರುವ ಕಮೆಂಟ್​ಗೆ 'ಬಾಹುಬಲಿ' ನಿರ್ಮಾಪಕ ಶೋಬು ಯಾರ್ಲಗಡ್ಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಿನ್ನೆ ರಾತ್ರಿ RRR ಎಂಬ 30 ನಿಮಿಷಗಳ ರಬ್ಬೀಷ್​ ಸಿನಿಮಾ​ ನೋಡಿದೆ" ಎಂದು ಚಲನಚಿತ್ರ ನಿರ್ಮಾಪಕ ಮುನೀಶ್ ಭಾರದ್ವಾಜ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್ ಇಂಜಿನಿಯರ್ ರೆಸುಲ್ ಪೂಕುಟ್ಟಿ ಇದೊಂದು "ಗೇ ಲವ್ ಸ್ಟೋರಿ" ಎಂದು ಕಮೆಂಟ್​ ಮಾಡಿದ್ದರು.

ಶೋಬು ಯಾರ್ಲಗಡ್ಡ ಅದನ್ನು ರೀಟ್ವೀಟ್ ಮಾಡಿ, "ಆರ್​ಆರ್​ಆರ್​ ಇದು ಗೇ ಲವ್ ಸ್ಟೋರಿ ಎಂದು ನಾನು ಭಾವಿಸುವುದಿಲ್ಲ. ಇದು ಗೇ ಲವ್ ಸ್ಟೋರಿ ಎಂದು ಹೇಗೆ ಸಮರ್ಥಿಸುತ್ತೀರಿ? ಒಂದು ವೇಳೆ ಇದು ಗೇ ಲವ್ ಸ್ಟೋರಿ ಆಗಿದ್ದರೆ ಅದರಲ್ಲಿ ತಪ್ಪೇನು? ಈ ರೀತಿಯ ಕಮೆಂಟ್‌ ನಿಮ್ಮ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ. ಸ್ವಲ್ಪ ಗಂಭೀರವಾಗಿ ಉತ್ತರಿಸಿ ಎಂದು ಪ್ರತಿಕ್ರಿಯೆ ನೀಡಿದ್ದರು.

ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಕೂಡ ರೆಸುಲ್ ಪೂಕುಟ್ಟಿಗೆ ಸಖತ್ ಕೌಂಟರ್ ನೀಡಿದ್ದಾರೆ. ರೆಸುಲ್ ಪೂಕುಟ್ಟಿ ಅವರನ್ನು ಉದ್ದೇಶಿಸಿ ಮಾಡಿರುವ ಅವರ ವ್ಯಂಗ್ಯ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಸಖತ್​ ಚರ್ಚೆಯಾಗುತ್ತಿದೆ.

ಇದನ್ನೂ ಓದಿ:ಪತಿ ರಾಜ್ ಕುಂದ್ರಾ ಜೊತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ಯಾರಿಸ್​ ಸಿಕ್ಕಾಬಟ್ಟೆ ಎಂಜಾಯ್​

ನಾನು ಇಂಗ್ಲಿಷ್ ಅಕ್ಷರಗಳನ್ನು ಟೈಪ್ ಮಾಡಲು ಅಪ್ಪರ್ ಕೇಸ್ ಮತ್ತು ಲೋವರ್ ಕೇಸ್ ಬಳಸುವುದರಲ್ಲಿ ಕೆಟ್ಟವನಾಗಿರಬಹುದು. ಆದರೆ ರೆಸುಲ್ ಪೂಕುಟ್ಟಿ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ ಎಂದು ಕೀರವಾಣಿ ಟ್ವೀಟ್ ಮಾಡಿದ್ದಾರೆ. ರೆಸುಲ್ ಪೂಕುಟ್ಟಿಯ ಹೆಸರಿನ ಎರಡೂ ಅಕ್ಷರಗಳನ್ನು ದೊಡ್ಡಕ್ಷರದಲ್ಲಿ ಟೈಪ್ ಮಾಡಿ ಹೈಲೈಟ್ ಮಾಡಲಾಗಿದೆ. ಇದು ಅಸಭ್ಯ ಭಾಷೆ ಎಂದು ನೆಟಿಜನ್‌ಗಳು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ. ಈ ಟ್ವೀಟ್ ಕೂಡಾ ವೈರಲ್ ಆಗುತ್ತಿದೆ.

ಕೀರವಾಣಿ ಟ್ವೀಟ್​

For All Latest Updates

ABOUT THE AUTHOR

...view details