ಮುಂಬೈ: ಬಾಲಿವುಡ್ನ ಕಿರುತೆರೆ ನಟ ಕರಣ್ ವಿ ಗ್ರೋವರ್ ಅವರು ತಮ್ಮ ದೀರ್ಘಕಾಲದ ಗೆಳತಿ, ನಟಿ ಪಾಪ್ಪಿ ಜಬ್ಬಲ್ ಅವರನ್ನು ವಿವಾಹವಾದರು. ಮಂಗಳವಾರ ಹಿಮಾಚಲ ಪ್ರದೇಶದಲ್ಲಿ ಸಿಖ್ ಸಾಂಪ್ರದಾಯ ಪ್ರಕಾರ ಅವರು ಹಸೆಮಣೆ ಏರಿದರು. ಮದುವೆ ಸಮಾರಂಭದ ಫೋಟೋವನ್ನು ಕರಣ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಟರಾದ ರಾಯ್ ಲಕ್ಷ್ಮಿ, ಶಮಾ ಸಿಕಂದರ್ ಅವರ ಪತಿ ಜೇಮ್ಸ್ ಮಿಲಿರಾನ್, ಸೊನ್ನಳ್ಳಿ ಸೇಗಲ್ ಸೇರಿದಂತೆ ಇತರರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸ್ನೇಹಿತೆಯನ್ನೇ ಬಾಳ ಸಂಗಾತಿಯನ್ನಾಗಿ ಬರಮಾಡಿಕೊಂಡ ಜನಪ್ರಿಯ ಕಿರುತೆರೆ ನಟ ಕರಣ್ ಗ್ರೋವರ್ - ಬಾಲಿವುಡ್ ಜೋಡಿಯ ವಿವಾಹಗಳು
ಜನಪ್ರಿಯ ಕಿರುತೆರೆ ನಟ ಕರಣ್ ಗ್ರೋವರ್ ತಮ್ಮ ಗೆಳತಿ ಪಾಪ್ಪಿ ಜಬ್ಬಲ್ ಅವರ ಜೊತೆ ಹಸೆಮಣೆ ಏರಿದರು. ಹಸೆಮಣೆ ಏರುವುದಕ್ಕೂ ಮುನ್ನ ಕರಣ್ ಗ್ರೋವರ್ ಮತ್ತು ಪಾಪ್ಪಿ ಜಬ್ಬಲ್ ಕಳೆದ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು.

ಗ್ರೋವರ್ ಕೆನೆ ಬಣ್ಣದ ಶೆರ್ವಾನಿ ಮತ್ತು ತಲೆಗೆ ಪೇಟ ಧರಿಸಿದ್ದರೆ ನಟಿ ಪಾಪ್ಪಿ ಜಬ್ಬಲ್ ಅದೇ ಬಣ್ಣದ ಹೊಳೆಯು ಲೆಹೆಂಗಾ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದರು. ನಟರಾದ ಸುಧಾಂಶು ಪಾಂಡೆ, ಸನ್ನಿ ಸಿಂಗ್, ಸಾಹಿಲ್ ಆನಂದ್ ಮತ್ತು ಇತರರು ಕಾಮೆಂಟ್ ಮಾಡುವ ಮೂಲಕ ದಂಪತಿಯನ್ನು ಅಭಿನಂದಿಸಿದ್ದಾರೆ. ಹಸೆಮಣೆ ಏರುವುದಕ್ಕೂ ಮುನ್ನ ಕರಣ್ ಗ್ರೋವರ್ ಮತ್ತು ಪಾಪ್ಪಿ ಜಬ್ಬಲ್ ಕಳೆದ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ಅಂತಿಮವಾಗಿ ತಾವು ಮದುವೆಯಾಗಿದ್ದೇವೆ ಎಂದು ಅವರೇ ಶೀರ್ಷಿಕೆ ಬರೆದುಕೊಂಡಿದ್ದಾರೆ.
ಕರಣ್ ಗ್ರೋವರ್ ಅವರು ಸಾರಥಿ, ಯಹಾನ್ ಮೈ ಘರ್ ಘರ್ ಖೇಲಿ, ಬಹು ಹುಮಾರಿ ರಜನಿ ಕಾಂತ್, ಕಹಾನ್ ಹಮ್ ಕಹಾನ್ ತುಮ್ ಮತ್ತು ಉದರಿಯಾನ್ ನಂತಹ ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬ್ರೋಕನ್ ಬಟ್ ಬ್ಯೂಟಿಫುಲ್ (2018) ಚಿತ್ರದಲ್ಲಿನ ಪಾತ್ರಕ್ಕಾಗಿ ಪಾಪ್ಪಿ ಜಬ್ಬಲ್ ಹೆಚ್ಚು ಹೆಸರುವಾಸಿಯಾಗಿದ್ದು ಪಂಜಾಬಿ ಚಿತ್ರಗಳಾದ ಮಹಿ ಎನ್ಆರ್ ಮತ್ತು ಉಡಾ ಐದಾದಲ್ಲಿಯೂ ನಟಿಸಿದ್ದಾರೆ. 500ಕ್ಕೂ ಹೆಚ್ಚು ಸಂಚಿಕೆಗಳನ್ನು ಪ್ರಸಾರ ಮಾಡಿದ ಕಾರ್ಯುಕ್ರಮವೊಂದರ ಹೋಸ್ಟ್ ಸಹ ಮಾಡಿದ್ದಾರೆ.