ಗಾಳಿಪಟ 2 ಸಿನಿಮಾ ಸಕ್ಸಸ್ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಮೂವರು ಸುಂದರಿಯರ ಜೊತೆ ತ್ರಿಬಲ್ ರೈಡಿಂಗ್ ಹೊರಟಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗಾಗಲೇ ಹಾಡು, ಟೈಟಲ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಬೇಜಾನ್ ಸೌಂಡ್ ಮಾಡುತ್ತಿರುವ ತ್ರಿಬಲ್ ರೈಡಿಂಗ್ ಚಿತ್ರದ ಮತ್ತೊಂದು ಹಾಡನ್ನು ಚಿತ್ರತಂಡ ಸೋಮವಾರ ಬಿಡುಗಡೆ ಮಾಡಿದೆ. ಜೊತೆಗೆ ನವೆಂಬರ್ 25ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
'ತ್ರಿಬಲ್ ರೈಡಿಂಗ್' ಸಿನಿಮಾದ 'ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್' ಹಾಡನ್ನು ಬರೋಬ್ಬರಿ ಒಂದು ಮಿಲಿಯನ್ ಜನರು ನೋಡಿ ಫಿದಾ ಆಗಿದ್ದಾರೆ. ಸಾಹಿತಿ ವಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡನ್ನು ಗಾಯಕ ವಿಜಯ್ ಪ್ರಕಾಶ್ ಸಖತ್ ಜೋಶ್ನಿಂದ ಹಾಡಿದ್ದು, ಸಾಯಿ ಕಾರ್ತಿಕ್ ಸಂಗೀತಕ್ಕೆ ಕ್ಯಾಚೀ ಟ್ಯೂನ್ ಹಾಕಿದ್ದಾರೆ. ಈ ಹಾಡಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದ ಹಾಗೆ ತ್ರಿಬಲ್ ರೈಡಿಂಗ್ ಔಟ್ ಅಂಡ್ ಔಟ್ ಕಾಮಿಡಿ ಜೊತೆ ಲವ್ ಸ್ಟೋರಿ ಆಧರಿಸಿರೋ ಚಿತ್ರ. ಚಿತ್ರತಂಡ ಈ ಮೊದಲೇ ಚಿತ್ರದ ಕೊನೆಯ 20 ನಿಮಿಷ ನಿಮ್ಮೆಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತೇವೆಂದು ಭರವಸೆ ನೀಡಿದೆ. ಚಿತ್ರತಂಡ ತಿಳಿಸಿದಂತೆ ಈ ಸಿನಿಮಾ ಯಶಸ್ವಿಯಾದರೆ, ಗಣೇಶ್ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಸೇರಲಿದೆ ತ್ರಿಬಲ್ ರೈಡಿಂಗ್.
ಇನ್ನೂ ನಟಿ ರಚನಾ ಇಂದರ್, ನಟಿ ಮೇಘಾ ಶೆಟ್ಟಿ ಮತ್ತು ನಟಿ ಆದಿತಿ ಪ್ರಭುದೇವ ಚೆಲುವೆಯರಿಗೆ ತ್ರಿಬಲ್ ರೈಡಿಂಗ್ ತುಂಬಾನೇ ವಿಶೇಷವಾದ ಸಿನಿಮಾ. ಯಾಕಂದ್ರೆ ಮೂವರು ಇದೇ ಮೊದಲ ಬಾರಿ ಗಣೇಶ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆನ್ ಸ್ಕ್ರೀನ್ & ಆಫ್ ಸ್ಕ್ರೀನ್ ಸಿಕ್ಕಾಪಟ್ಟೆ ಎಂಜಾಯ್ ಮಾಡುವ ಮೂಲಕ ಈ ಚಿತ್ರದ ಚಿತ್ರೀಕರಣ ಮಾಡಲಾಗಿದೆ.