ನವರಸನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬೋದಲ್ಲಿ ರೆಡಿಯಾಗಿರುವ ತೋತಾಪುರಿ ಸಿನಿಮಾ ಸೆಪ್ಟೆಂಬರ್ 30ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಡಬಲ್ ಮಿನಿಂಗ್ ಹೆಚ್ಚಾಗಿರುವ ಕಾರಣ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.
ಇತ್ತೀಚೆಗೆ ಅನಾವರಣಗೊಂಡಿರುವ ತೋತಾಪುರಿ ಟ್ರೈಲರ್ ಅನ್ನು ಬರೋಬ್ಬರಿ 10 ಮಿಲಿಯನ್ ಜನರು ನೋಡುವ ಮೂಲಕ ಟ್ರೈಲರ್ ಅನ್ನು ಮೆಚ್ಚಿಕೊಂಡಿದ್ದಾರೆ. ನವರಸ ನಾಯಕ ಜಗ್ಗೇಶ್ ಮದುವೆ ಆಗದ ಟೈಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡಬಲ್ ಮಿನಿಂಗ್ ಡೈಲಾಗ್ಗಳು ಸಿನಿಮಾದಲ್ಲಿವೆ. ಜಗ್ಗೇಶ್ ಜೋಡಿಯಾಗಿ ನಟಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದು, ಮುಸ್ಲಿಂ ಹುಡುಗಿ ಪಾತ್ರ ಮಾಡಿದ್ದಾರೆ. ಜೊತೆಗೆ ಧನಂಜಯ್, ಸುಮನ್ ರಂಗನಾಥ್, ನಟಿ ವೀಣಾ ಸುಂದರ್, ಹಿರಿಯ ನಟ ದತ್ತಣ್ಣ, ಹೇಮದತ್ ಹೀಗೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.
ಸೆನ್ಸಾರ್ನಿಂದ ಯು/ಎ ಸರ್ಟಿಫಿಕೇಟ್ ಪಡೆದ ತೋತಾಪುರಿ ಸಿನಿಮಾ ಸಿದ್ಲಿಂಗು, ನೀರ್ ದೋಸೆ ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿರುವ ನಿರ್ದೇಶಕ ವಿಜಯ್ ಪ್ರಸಾದ್ ಗಲಭೆ ಇಲ್ಲದ ಒಂದು ಪ್ರೇಮ ಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ರಿಲೀಸ್ ಡೇಟ್ ಅನ್ನು ಈಗಾಗಲೇ ನಿರ್ಮಾಪಕ ಕೆ.ಎ ಸುರೇಶ್ ಅನೌನ್ಸ್ ಮಾಡಿದ್ದಾರೆ. ದಸರಾ ನಂಟು, ತೋತಾಪುರಿ ಅಂಟು ಅಂತಾ ಹೇಳುವ ಮೂಲಕ ಸೆಪ್ಟೆಂಬರ್ 30ಕ್ಕೆ, ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ ಅಂತಾ ತಿಳಿಸಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಬಿಡುಗಡೆ ಆಗಿರುವ ಹಾಡುಗಳು ಕೇಳುಗರನ್ನು ಇಂಪ್ರೆಸ್ ಮಾಡುತ್ತಿವೆ.
ಇದನ್ನೂ ಓದಿ:ಪ್ರವೀಣರು ಮತ್ತು ನವೀನರ ಹಣಾಹಣಿ: ಬಿಗ್ ಬಾಸ್ ಮನೆ ಸೇರಲಿರೋ ಸ್ಪರ್ಧಿಗಳು ಇವರು
ನಿರ್ಮಾಪಕ ಕೆ.ಎ ಸುರೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ತೋತಾಪುರಿ ಪಾರ್ಟ್ 2 ಕೂಡ ಬರಲಿದೆ ಅಂತಾ ಮೊದಲೇ ಹೇಳಲಾಗಿದೆ. ತೋತಾಪುರಿ ಪಾರ್ಟ್ 1 ಇದೇ ಸೆಪ್ಟೆಂಬರ್ 30ಕ್ಕೆ ವಿಶ್ವಾದ್ಯಂತ ಪ್ರೇಕ್ಷಕರ ಮುಂದೆ ಬರಲಿದೆ.