ನವೆಂಬರ್ 2 ರಂದು ಶಾರುಖ್ ಖಾನ್ ತಮ್ಮ 58ನೇ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದಿಗೆ ತಮ್ಮ ಮುಂದಿನ ಬಹುನಿರೀಕ್ಷಿತ ಡಂಕಿ ಸಿನಿಮಾದ ಟೀಸರ್ ಹಂಚಿಕೊಂಡಿದ್ದಾರೆ. ಆ್ಯಕ್ಷನ್ ಪ್ಯಾಕ್ಡ್ ಪಠಾಣ್ ಮತ್ತು ಜವಾನ್‌ನ ಭರ್ಜರಿ ಯಶಸ್ಸಿನ ನಂತರ ಸೂಪರ್ ಸ್ಟಾರ್‌ನ ಮತ್ತೊಂದು ಬಹುನಿರೀಕ್ಷಿತ ಚಿತ್ರ ಡಂಕಿ ಆಗಿದ್ದು, ಅಭಿಮಾನಿಗಳು ಟೀಸರ್ ಅನ್ನು ಪೂರ್ಣಮನಸ್ಸಿನಿಂದ ಸ್ವೀಕರಿಸಿದ್ದಾರೆ. ಆದಾಗ್ಯೂ, ಪ್ರಭಾಸ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಜೊತೆ ಡಂಕಿ ಮುಖಾಮುಖಿ ಆಗಲಿದ್ದು, ಇಬ್ಬರೂ ಸೂಪರ್ಸ್ಟಾರ್ಗಳ ಫ್ಯಾನ್ಸ್ ಬಗೆಬಗೆಯ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಟೀಸರ್ ವೀಕ್ಷಣೆಗಳಲ್ಲಿ ಸಲಾರ್ ಮುಂಚೂಣಿಯಲ್ಲಿದೆ.
ಸಲಾರ್ ಚಿತ್ರ ತಯಾರಕರು ಜುಲೈ 6 ರಂದು ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಿದ್ದರು. ಮೊದಲ 24 ಗಂಟೆಗಳಲ್ಲಿಯೇ 83 ಮಿಲಿಯನ್ ವೀಕ್ಷಣೆಗಳನ್ನು ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಒಂದು ನಿಮಿಷ ಮತ್ತು 47 ಸೆಕೆಂಡುಗಳ ವಿಡಿಯೋ ಮುಂಬರುವ ಸಿನಿಮಾದಲ್ಲಿ ಏನಿದೆ ಎಂಬುದರ ಒಂದು ಸಣ್ಣ ನೋಟ ಕೊಟ್ಟಿದೆ. ಇದನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.
ಯೂಟ್ಯೂಬ್‌ನಲ್ಲಿ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟಾಪ್ 5 ಭಾರತೀಯ ಟೀಸರ್‌ಗಳ ಪಟ್ಟಿ:
- ಸಲಾರ್ - 83 ಮಿಲಿಯನ್.
- ಆದಿಪುರುಷ್ - 69 ಮಿಲಿಯನ್.
- ಕೆಜಿಎಫ್ 2 - 68.8 ಮಿಲಿಯನ್.
- ರಾಧೆ ಶ್ಯಾಮ್ - 42.7 ಮಿಲಿಯನ್.
- ಡಂಕಿ - 36.8 ಮಿಲಿಯನ್.