ಹೈದರಾಬಾದ್, ತೆಲಂಗಾಣ: ಖ್ಯಾತ ಚಿತ್ರನಟ ಕೈಕಲಾ ಸತ್ಯನಾರಾಯಣ (87) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಫಿಲಂನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಳೆ ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ಸತ್ಯನಾರಾಯಣ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕೈಕಾಲಾ ಅವರ ನಿಧನ ಚಿತ್ರರಂಗಕ್ಕೆ ತೀವ್ರ ದುಃಖ ತಂದಿದೆ. ಹಲವು ಸೆಲೆಬ್ರಿಟಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸತ್ಯನಾರಾಯಣ ಅವರು ಕೃಷ್ಣಾ ಜಿಲ್ಲೆಯ ಕೌತಾರಂ ಗ್ರಾಮದಲ್ಲಿ 1935 ರಲ್ಲಿ ಜನಿಸಿದರು. ಗುಡಿವಾಡ ಕಾಲೇಜಿನಲ್ಲಿ ಪದವಿ ಮುಗಿಸಿದರು. ನಟನೆಯ ಆಸಕ್ತಿಯಿಂದಾಗಿ ಕಾಲೇಜು ದಿನಗಳಲ್ಲಿ ಹಲವು ಪ್ರದರ್ಶನಗಳನ್ನು ನೀಡಿದ್ದರು.