ಹೈದರಾಬಾದ್:ಆರ್ಆರ್ಆರ್ ಸ್ಟಾರ್ ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ದಂಪತಿಗೆ ಹೆಣ್ಮು ಮಗು ಜನಸಿರುವುದು ಗೊತ್ತಿರುವ ಸಂಗತಿ. ಮದುವೆಯಾದ 11 ವರ್ಷಗಳ ನಂತರ ಈ ದಂಪತಿಗೆ ಮೊದಲ ಮಗು ಜನಿಸಿದೆ. ಜೂನ್ 20 ರ ರಾತ್ರಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ತಂದೆ ತಾಯಿಯಾಗುತ್ತಿದ್ದಂತೆ ಇಡೀ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿತ್ತು. ಇಂದು ಆ ಸಂತೋಷ ದುಪ್ಪಟ್ಟಾಗಿದ್ದು, ಮಗುವಿನ ನಾಮಕರಣ ಕಾರ್ಯಕ್ರಮ ನಡೆಯಲಿದೆ.
ಮೊಮ್ಮಗಳು ಹುಟ್ಟಿದ ಖುಷಿಯಲ್ಲಿ ಮಾತನಾಡಿದ ರಾಮ್ ಚರಣ್ ಅವರ ತಂದೆ ಚಿರಂಜೀವಿ ಅವರು, ಮೊದಲ ಬಾರಿಗೆ ಅಜ್ಜನಾಗಲು ತುಂಬಾ ಸಂತೋಷವಾಗಿದ್ದು, ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು. ಈಗ ರಾಮ್ ಚರಣ್ ಅಭಿಮಾನಿಗಳು ಮೆಗಾ ರಾಜಕುಮಾರಿಯ ಮುಖವನ್ನು ನೋಡಲು ಆತುರದಿಂದ ಕಾಯುತ್ತಿದ್ದಾರೆ. ಆದರೆ ಅದಕ್ಕೂ ಮುನ್ನ ಮೆಗಾ ಪ್ರಿನ್ಸೆಸ್ನ ನಾಮಕರಣ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ವಿಡಿಯೋ ಶೇರ್ ಮಾಡುವ ಮೂಲಕ ಉಪಾಸನಾ ಮಗುವಿನ ನಾಮಕಾರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಾಮಕರಣ ಕಾರ್ಯಕ್ರಮ ಎಲ್ಲಿ?: ರಾಮ್ ಚರಣ್ ಮತ್ತು ಉಪಾಸನಾ ದಂಪತಿಯ ಮಗಳ ನಾಮಕರಣ ಸಮಾರಂಭ ಇಂದು ಹೈದರಾಬಾದ್ನಲ್ಲಿ ನಡೆಯಲಿದೆ. ರಾಮ್ ಚರಣ್ ಮತ್ತು ಉಪಾಸನಾ ತಮ್ಮ ಮಗಳ ಹೆಸರನ್ನು ನಿರ್ಧರಿಸಿದ್ದು, ಇಂದು ಅಭಿಮಾನಿಗಳಿಗೆ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಲಿದ್ದಾರೆ. ಉಪಾಸನಾ ಅವರು ಮಗಳ ನಾಮಕರಣ ಸಮಾರಂಭದ ಸಿದ್ಧತೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮನೆಯಲ್ಲಿ ಅಲಂಕಾರ ಕೆಲಸ ನಡೆಯುತ್ತಿರುವುದು ಕಾಣಬಹುದು.